ಮಂಡ್ಯ: ಬಿಜೆಪಿ ಸದಸ್ಯತ್ವದಿಂದ ಬಂಡಾಯ ಅಭ್ಯರ್ಥಿ ಬಿ.ಮಂಜುನಾಥ್ ವಜಾ

ಮಂಡ್ಯ, ಎ.3: ಬಂಡಾಯ ಅಭ್ಯರ್ಥಿಯಾಗಿರುವ ಬಿ.ಮಂಜುನಾಥ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ವಜಾ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದ ಬಿ.ಮಂಜುನಾಥ್, ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಹೊಂದಿರಲಿಲ್ಲ, ಪ್ರಾಥಮಿಕ ಸದಸ್ಯತ್ವವನ್ನು ಮಾತ್ರ ಹೊಂದಿದ್ದಾರೆ ಎಂದರು.
ಮಂಜುನಾಥ್ ಬಿಜೆಪಿ ರಾಷ್ಟ್ರೀಯ ನಾಯಕರ ಭಾವಚಿತ್ರ ಬಳಕೆ ಮಾಡದಿರಲು ಸೂಚನೆ ನೀಡಲಾಗಿದೆ. ಪಕ್ಷದ ಕಾರ್ಯಕರ್ತರು ಮಂಜುನಾಥ್‍ಗೆ ಬೆಂಬಲ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಡಾ.ಸಿದ್ದರಾಮಯ್ಯ, ಇ.ಅಶ್ವತ್ ನಾರಾಯಣ್, ಮಲ್ಲಿಕಾರ್ಜುನ್, ಇತರ ಮುಖಂಡರು ಉಪಸ್ಥಿತರಿದ್ದರು.
Next Story





