ನಿರಂತರ ಜ್ಞಾನಾರ್ಜನೆ ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯ: ಡಾ.ಎಸ್.ಸಚ್ಚಿದಾನಂದ

ಮಂಗಳೂರು, ಎ. 5: ನಿರಂತರ ಜ್ಞಾನಾರ್ಜನೆ ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯ ಎಂದು ಕರ್ನಾಟಕ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ತಿಳಿಸಿದ್ದಾರೆ.
ನಗರದ ಕಂಕನಾಡಿ ಫಾದರ್ ಮುಲ್ಲರ್ ಸಮ್ಮೇಳನ ಸಭಾಂಗಣದಲ್ಲಿ ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ 2019ಪದವಿ ಪ್ರಧಾನ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಅವರು ಇಂದು ಮಾತನಾಡುತ್ತಿದ್ದರು.
ಸಮಾಜದಲ್ಲಿ ಹಾಗೂ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ಬದಲಾವಣೆ ಹಾಗೂ ಎದುರಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಲು ವೈದ್ಯರಿಗೆ ಈ ಜ್ಞಾನ ಅಗತ್ಯ.ಸಮಾಜವು ವೈದ್ಯರಿಂದ ಹೊಸ ನಿರೀಕ್ಷೆಯನ್ನು ಬಯಸುತ್ತದೆ.ಸಮಾಜ ವೈದ್ಯರ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ,ಸಮಯ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸುವುದು ಮುಖ್ಯ ಎಂದು ಯುವ ವೈದ್ಯರಿಗೆ ಡಾ.ಸಚ್ಚಿದಾನಂದ ಕರೆ ನೀಡಿದರು.
ಬದಲಾಗುತ್ತಿರುವ ಸಮಾಜದ ಇಂದಿನ ದಿನಗಳಲ್ಲಿ ವಿವಿಧ ವೈದ್ಯ ಪದ್ಧತಿ ಗಳನ್ನು ಒಂದು ಕಡೆ ಸೇರಿಸಿ ರೋಗಿಯ ಹಿತದಿಂದ ಬಳಸಬೇಕಾದ ಅಗತ್ಯ ವಿದೆ.ಈ ನಿಟ್ಟಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಂಶೋಧನೆ ಗೆ ಹೆಚ್ಚಿ ನ ಆಧ್ಯತೆ ನೀಡುತ್ತಿದೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆ ದೇಶದ ವೈದ್ಯಕೀಯ ರಂಗದಲ್ಲಿ ಬ್ರ್ಯಾಂಡ್ ನೇಮ್ ಹೊಂದಿರುವ ಸಂಸ್ಥೆ ಯಾಗಿದೆ ಎಂದು ಸಚ್ಚಿದಾನಂದ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಬಿಷಪ್ ಅತೀ.ವಂ.ಡಾ.ಪೀಟರ್ ಪೌಲ್ ಸಲ್ದಾನ ವಹಿಸಿ ಮಾತನಾಡುತ್ತಾ, ಚಿಕಿತ್ಸೆಗಾಗಿ ಬರುವ ರೋಗಿಗೆ ವೈದ್ಯರ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟಿರುತ್ತಾರೆ. ಆತನ ರೋಗ ಶಮನದ ಬಗ್ಗೆ ಗರಿಷ್ಠ ಪ್ರಯತ್ನಮಾಡುವ ಮತ್ತು ಆತನ ರೋಗ ಶಮನಗೊಳಿಸುವ ಉತ್ತಮ ವಿಧಾನವನ್ನು ಅಳವಡಿಸಿ ಕೊಳ್ಳುವ ಸವಾಲನ್ನು ಯುವವೈದ್ಯರು ಸಮರ್ಪಕ ವಾಗಿ ನಿಭಾಯಿಸಬೇಕಾಗಿದೆ. ಫಾದರ್ ಮುಲ್ಲರ್ ಸಂಸ್ಥೆ ಮುಂದೆಯೂ ಹಳೆ ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿರಲು ಬಯಸುತ್ತದೆ ಎಂದು ಯುವ ಪದವೀಧರರಿಗೆ ಪದವಿ ವಿತರಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಫಾದರ್ ಮುಲ್ಲರ್ ಹೊಮಿಯೋಪಥಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಆಡಳಿತ ನಿರ್ದೆಶಕ ವಂ.ವಿನ್ಸೆಂಟ್ ಸಲ್ದಾನ ,ಸಹಾಯಕ ಆಡಳಿತ ನಿರ್ದೇಶಕ ವಂ.ಸಿಲ್ವೆಸ್ಟರ್ ವಿ.ಲೋಬೊ, ಉಪ ಪ್ರಾಂಶುಪಾಲ ಡಾ.ಇ.ಎಸ್ .ಜೆ.ಪ್ರಭು ಕಿರಣ್ ,ಡಾ.ಗಿರೀಶ್ ನಾವುಡ,ಡಾ.ವಿಲ್ಮಾಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಚ್ಯಾರಿಟೀಬಲ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ವಂ.ರಿಚರ್ಡ್ ಎ.ಕೊಯೆಲ್ಲೊ ಸ್ವಾಗತಿಸಿದರು.ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಶಿವಪ್ರಸಾದ್ ವರದಿ ವಾಚಿಸಿದರು. ವೇಳೆ ಸಮಾರಂಭದಲ್ಲಿ 73 ಪದವೀಧರರಿಗೆ ಬಿಎಚ್ಎಂಎಸ್ ,27 ಸ್ನಾತಕೋತ್ತರ ಪದವೀಧರ ರಿಗೆ ಎಂ.ಡಿ ( ಹೋಮಿ ಯೋಪತಿ ಕ್)ಪದವಿ ಪ್ರಧಾನ ಮಾಡಲಾಯಿತು.
















