Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ರೈತರ ಖಾತೆಗೆ ನೇರ ನಗದು: ಚುನಾವಣಾ...

'ರೈತರ ಖಾತೆಗೆ ನೇರ ನಗದು: ಚುನಾವಣಾ ಆಯೋಗದ ದ್ವಿಮುಖ ನೀತಿ'

ವಾರ್ತಾಭಾರತಿವಾರ್ತಾಭಾರತಿ7 April 2019 8:49 PM IST
share
ರೈತರ ಖಾತೆಗೆ ನೇರ ನಗದು: ಚುನಾವಣಾ ಆಯೋಗದ ದ್ವಿಮುಖ ನೀತಿ

ಉಡುಪಿ, ಎ.7: ರಾಜ್ಯ ಸರಕಾರ ಬಹು ಹಿಂದೆಯೇ ರಾಜ್ಯದ ಸಣ್ಣ ರೈತರ ಸಾಲಮನ್ನಾ ಮಾಡಿ ಅವರ ಬ್ಯಾಂಕ್ ಖಾತೆಗೆ ಹಾಕುವ ಹಣಕ್ಕೆ ಕೇಂದ್ರ ಚುನಾವಣಾ ಆಯೋಗ ತಡೆಯೊಡ್ಡಿದ್ದು, ಆದರೆ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ಎರಡು ಹೆಕ್ಟೇರ್‌ಗಿಂತ ಕಡಿಮೆ ಜಮೀನಿರುವ ರೈತರಿಗೆ ಪ್ರಕಟಿಸಿದ ಪ್ರಧಾನಮಂತ್ರಿ ಕಿಶಾನ್ ಸಮ್ಮಾನ್ ನಿಧಿ ಯೋಜನೆಯ 6000 ರೂ. ನಿಧಿಯಲ್ಲಿ ಮೊದಲ ಕಂತಿನ 2,000ರೂ.ವನ್ನು ಖಾತೆಗೆ ಹಾಕಲು ಯಾವುದೇ ತಡೆಯೊಡ್ಡದೇ ದ್ವಿಮುಖ ನೀತಿಯನ್ನು ಪ್ರದರ್ಶಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಪ್ರಮೋದ್ ಮದ್ವರಾಜ್ ಪರವಾಗಿ ಪ್ರಚಾರ ಭಾಷಣಕ್ಕಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ ಕುಮಾರಸ್ವಾಮಿ, ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ರಾಜ್ಯದ 15.55 ಲಕ್ಷ ರೈತರು ಸಹಕಾರಿ ಸಂಸ್ಥೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಕೃಷಿ ಸಾಲ ಮನ್ನಾಕ್ಕಾಗಿ ಉಡುಪಿ ಜಿಲ್ಲೆಗೆ 80 ಕೋಟಿ ರೂ. ಸೇರಿದಂತೆ ಬಜೆಟ್‌ನಲ್ಲಿ ಈಗಾಗಲೇ 11,170 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ 6500 ಕೋಟಿ ರೂ. ರೈತರ ಖಾತೆಗೆ ಹೋಗಿದೆ. ಇನ್ನುಳಿದ ಹಣದ ಬಿಡುಗಡೆಗೆ ಚುನಾವಣಾ ಆಯೋಗ ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ತಡೆ ಹಿಡಿದಿದೆ ಎಂದವರು ವಿವರಿಸಿದರು.

ಆದರೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಕಿಶಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ ಹಾಕುವ 2,000ರೂ.ಗಳಿಗೆ ಯಾವುದೇ ತಡೆ ಹಾಕಿಲ್ಲ. ಈ ಮೂಲಕ ಚುನಾವಣಾ ಆಯೋಗ ದ್ವಿಮುಖ ನೀತಿಯನ್ನು ಅನುಸರಿಸುತ್ತಿದ್ದು, ಇದಕ್ಕೆ ರಾಜ್ಯದ ಪ್ರತಿಭಟನೆಯನ್ನು ಸಲ್ಲಿಸಲಾಗಿದೆ ಎಂದರು.

ಕಾಲುಸಂಕಕ್ಕೆ ಹಣ: ಕರಾವಳಿ ಭಾಗದಲ್ಲಿ ಗಲಭೆ ಹಾಗೂ ಅಮಾಯಕರ ಮೇಲಿನ ಹಲ್ಲೆ ವ್ಯಾಪಕ ವಾಗಿದ್ದು, ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಇದಕ್ಕೆ ಕಡಿವಾಣ ಹಾಕಲಾಗಿದೆ. ಸಮಾಜದ ಎಲ್ಲಾ ವರ್ಗ, ಧರ್ಮದವರಿಗೂ ರಕ್ಷಣೆಯನ್ನು ನೀಡಿದೆ. ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಗೆ 1075 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದೆ ಎಂದರು.

ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಕಾಲುಸಂಕಗಳು ಜನರ ಸಂಪರ್ಕಕ್ಕೆ ಅತೀ ಅಗತ್ಯವಿದ್ದು, ಈ ಭಾಗದಲ್ಲಿ 1500ಕ್ಕೂ ಅಧಿಕ ಕಾಲುಸಂಕಗಳ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಿದ್ದೇವೆ ಎಂದು ಕುಮಾರಸ್ವಾಮಿ ವಿವರಿಸಿದರು.

ಮೋದಿ ಹೆಚ್ಚುಗಾರಿಕೆ ಇಲ್ಲ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ದೇಶಕ್ಕೆ ರಕ್ಷಣೆ ಒದಗಿಸಲು ಸಾಧ್ಯ ಎಂಬಂತೆ ಈಗ ಬಿಂಬಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಈವರೆಗೆ ದೇಶವನ್ನಾಳಿದ ಎಲ್ಲಾ ಪ್ರಧಾನಮಂತ್ರಿಗಳು ದೇಶಕ್ಕೆ ರಕ್ಷಣೆ ಒದಗಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲವು ಪ್ರಧಾನಿಗಳ ಕೊಡುಗೆ ಮರೆಯುವಂತಿಲ್ಲ. ಆದರೆ ಈಗ ದೇಶ ರಕ್ಷಣೆಯಲ್ಲಿ ಸೈನಿಕರ ಶ್ರಮವನ್ನು ಕಡೆಗಣಿಸಿ, ಪ್ರಧಾನಿಯವರ ಪಾತ್ರವೇ ದೊಡ್ಡದು ಎಂಬಂತೆ ಬಿಂಬಿಸಲಾಗುತ್ತಿದೆ ಎಂದವರು ಆರೋಪಿಸಿದರು.

ಹೇಳಿಕೆಗೆ ಸ್ಪಷ್ಟನೆ: ಭಾರತ-ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆ ಹಿನ್ನೆಲೆಯಲ್ಲಿ ಮಾತನಾಡುತ್ತಾ, ಎರಡು ವರ್ಷಗಳ ಹಿಂದೆ ರಕ್ಷಣಾ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತನ್ನೊಡನೆ ಮಾತನಾಡುತ್ತಾ, ಈ ಸರಕಾರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯುದ್ಧದ ವಾತಾವರಣವನ್ನು ಸೃಷಿಸ್ಟಿಸಿ ಅದನ್ನು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಾರೆ ಎಂದು ತಿಳಿಸಿದ್ದರು ಎಂದು ಹೇಳಿದ್ದೆ. ಆದರೆ ಮಾಧ್ಯಮಗಳು ಇಡೀ ಹೇಳಿಕೆಯನ್ನೇ ತಿರುಚಿ ಪುಲ್ವಾಮ ದಾಳಿಯ ಬಗ್ಗೆ ನನಗೆ ಎರಡು ವರ್ಷಗಳ ಮೊದಲೇ ತಿಳಿದಿತ್ತು ಎಂದು ಹೇಳಿರುವುದಾಗಿ ದೃಶ್ಯ ಮಾಧ್ಯಮಗಳು ವರದಿ ಮಾಡುತ್ತಿವೆ ಎಂದರು.

ನೆಮ್ಮದಿಯಿಂದ ಇರಲು ಬಿಟ್ಟಿಲ್ಲ: ಕಳೆದ ಒಂಭತ್ತೂವರೆ ತಿಂಗಳ ಸಮಿಶ್ರ ಸರಕಾರದ ಆಡಳಿತಾವಧಿಯಲ್ಲಿ ಒಂದು ದಿನವೂ ನೆಮ್ಮದಿಯಿಂದ ಸರಕಾರವನ್ನು ನಡೆಸಲು ಬಿಜೆಪಿ ಹಾಗೂ ಈ ಮಾಧ್ಯಮಗಳು ನನಗೆ ಬಿಟ್ಟಿಲ್ಲ ಎಂದು ಆರೋಪಿಸಿದ ಅವರು, ಆದರೂ ಹಲವು ಯೋಜನೆಗಳನ್ನು ಜಾರಿಗೊಳಿ ಸಲಾಗಿದೆ ಎಂದರು. ಕರಾವಳಿಯ ಯುವಕರನ್ನು ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ. ಇಲ್ಲಿನ ಯುವಕರು ಇದಕ್ಕೆ ಬಲಿ ಬೀಳಬಾರದು ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ ಅವರು ಉತ್ತಮ ಆಡಳಿತ ನೀಡಿದ್ದರೆ ಅವರಿಗೆ ಮತ ನೀಡಿ. ಆದರೆ ಅವರು ಏನು ಮಾಡಿದ್ದಾರೆ. ತಮ್ಮ ಸಂಪುಟದ ಸಚಿವರಿಗೆ ತಿಳಿಸದೇ ನೋಟು ಅಮಾನ್ಯೀಕರಣ ಮಾಡಿ ಇಡೀ ದೇಶದ ಜನರು ಸಂಕಟ ಪಡುವಂತೆ ಮಾಡಿದರು. ಅವರ ಆರ್ಥಿಕ ಅಶಿಸ್ತಿನಿಂದ ದೇಶ ಸಂಕಷ್ಟಕ್ಕೊಳ ಗಾಗಿದೆ. ಇದೀಗ ಮುಂದಿನ ಆರು ತಿಂಗಳಿಗಾಗಿ 4.52 ಟ್ರಿಲಿಯನ್ ಕೋಟಿ ರೂ. ಸಾಲ ಎತ್ತಿದ್ದಾರೆ. ಇದೇ ಅವರ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದರು.

ಯುಪಿಎ ಸರಕಾರ ತಂದ ಆರ್ಥಿಕ ಶಿಸ್ತನ್ನು ಹಾಳುಗೆಡವಿದ ಮೋದಿ, ಕರಾವಳಿಯ ಹೆಮ್ಮೆಯ ವಿಜಯಾ ಬ್ಯಾಂಕ್‌ನ್ನು ನಷ್ಟಕ್ಕೆ ಸಿಲುಕಿದ ಗುಜರಾತಿನ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಿ, ಅದರ ಅಸ್ತಿತ್ವವನ್ನೇ ನಾಶಪಡಿಸಿರುವುದೇ ಅವರ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಕರಾವಳಿಯಲ್ಲಿ ಶೋಭಾ ಮತ್ತು ನಳಿನ್‌ಕುಮಾರ್ ತಮ್ಮ ಸಾಧನೆಯ ಮೂಲಕ ಮತಕೇಳಲು ಸಾದ್ಯವಿಲ್ಲದೇ ಮೋದಿ ಮುಖ ನೋಡಿ ಮತ ಹಾಕಿ ಎನ್ನುತಿದ್ದಾರೆ. ಮೋದಿ ಅವರ ಮೇಕಪ್‌ನ ಮುಖ ನೋಡಿ ಮತ ಯುವಕರು ಮತ ಹಾಕಬೇಕೇ ಎಂದ ಕುಮಾರಸ್ವಾಮಿ, ಕೋಟ್ಯಾಂತರ ಯುವಕರನ್ನು ಬೀದಿ ಪಾಲು ಮಾಡಿರುವುದಕ್ಕೆ ಅವರಿಗೆ ಮತ ನೀಡಬೇಕೇ ಎಂದು ಪ್ರಶ್ನಿಸಿದರು.

20ರಲ್ಲಿ ಗೆಲುವಿನ ವಿಶ್ವಾಸ: ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು 20 ಕ್ಷೇತ್ರಗಳಲ್ಲಿ ಖಂಡಿತ ಗೆಲ್ಲಿಸುತ್ತಾರೆ ಎಂಬ ವಿಶ್ವಾಸತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಮಂಡ್ಯದ ಕುರಿತು ಪ್ರಶ್ನಿಸಿದಾಗ, ಅಲ್ಲಿ ನಿಖಿಲ್ ಮೈತ್ರಿ ಪಕ್ಷಗಳ ಒಮ್ಮತದ ಅಭ್ಯರ್ಥಿ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಮಾದ್ಯಮಕ್ಕೂ ಗೊತ್ತಿದೆ. ಮೇ 23ಕ್ಕೆ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದರು.

ಪ್ರಮೋದ್ ಸಹ ಎರಡೂ ಪಕ್ಷಗಳ ಅಭ್ಯರ್ಥಿ. ಎರಡೂ ಪಕ್ಷಗಳು ಸೇರಿ ಚರ್ಚಿಸಿ ಒಮ್ಮತದಿಂದ ಅವರನ್ನು ಕಣಕ್ಕಿಳಿಸಿದೆ. ಗೆದ್ದ ಬಳಿಕವೂ ಅವರು ಎರಡೂ ಪಕ್ಷಗಳ ಅಭ್ಯರ್ಥಿಯಾಗಿರುತ್ತಾರೆ ಎಂದರು.

ಚುನಾವಣಾ ಫಲಿತಾಂಶದ ಬಳಿಕವೂ ಸಮ್ಮಿಶ್ರ ಸರಕಾರವೇ ಅಧಿಕಾರದಲ್ಲಿ ಮುಂದುವರಿಯುತ್ತದೆ. ನಾವು ಐದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸ ಲಿದ್ದೇವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ, ಕಾಂಗ್ರೆಸ್ ನಾಯಕರಾದ ಆಸ್ಕರ್ ಫೆರ್ನಾಂಡೀಸ್, ಬ್ಲೋಸಮ್ ಪೆರ್ನಾಂಡೀಸ್, ಗೋಪಾಲ ಭಂಡಾರಿ, ಯು.ಆರ್.ಸಭಾಪತಿ, ಜೆಡಿಎಸ್ ನಾಯಕರಾದ ಬೋಜೇಗೌಡ, ಬಿ.ಎಂ.ಫಾರೂಕ್, ಯೋಗೀಶ್ ಶೆಟ್ಟಿ ಮುಂತಾದವರು ಉಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X