Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಾಂಗ್ರೆಸ್‌ ಅಹಿಂದದಿಂದ ಮೃದು...

ಕಾಂಗ್ರೆಸ್‌ ಅಹಿಂದದಿಂದ ಮೃದು ಹಿಂದುತ್ವದೆಡೆಗೆ

ಅಬೂ ಅನೀಸ್, ಕಲ್ಲಾಪುಅಬೂ ಅನೀಸ್, ಕಲ್ಲಾಪು7 April 2019 11:58 PM IST
share

ಮಾನ್ಯರೇ,

ಅಹಿಂದ ಮತ್ತು ಜಾತ್ಯತೀತ ಎಂಬ ಪದಗಳಿಗೆ ಬಹುತೇಕ ಸಾಮ್ಯತೆಯಿದೆ. ಆದರೆ ಇದೀಗ ಕಾಂಗ್ರೆಸ್ ಪಕ್ಷ ಆವಿಷ್ಕರಿಸಿರುವ ಮೃದು ಹಿಂದುತ್ವದಲ್ಲಿ ದೇಶಕ್ಕೆ ಆವಶ್ಯಕವಾದ ಬಹುತ್ವದ ಯಾವುದೇ ಸೂಚನೆ ಕಂಡು ಬರುವುದಿಲ್ಲ. ಅನ್ಯಥಾ ಕಾಂಗ್ರೆಸ್‌ನ ಮೇಲೆ ಭರವಸೆಯನ್ನು ಕಳಕೊಂಡ ಹಿಂದುತ್ವವಾದಿಗಳ ಭ್ರಮವಿರಸನಗೈಯುವ ದಿಸೆಯಲ್ಲಿ ಒಂದು ಅಪ್ರಬುದ್ಧ ಪ್ರಯತ್ನವೆಂದೇ ಹೇಳಬಹುದಾಗಿದೆ. ವಾಸ್ತವದಲ್ಲಿ ಸೆಕ್ಯುಲರ್ ಸಂವಿಧಾನವನ್ನು ಹೊಂದಿದ ಭಾರತ ದೇಶದಲ್ಲಿ ಒಂದೊಮ್ಮೆ ಕಾಂಗ್ರೆಸ್ ನಂತಹ ಸೆಕ್ಯುಲರ್ ಪಕ್ಷವು ಎಲ್ಲರಿಗೂ ಅಗತ್ಯವಿತ್ತು. ಹಿಂದುಳಿದವರು, ದಲಿತರು, ಗಿರಿಜನರು ಬಡಜನರು ಮಾತ್ರವಲ್ಲ ದೇಶ ಅಲ್ಪಸಂಖ್ಯಾತರಿಗೂ ಕಾಂಗ್ರೆಸ್ ಪ್ರಶ್ನಾತೀತ ಸೆಕ್ಯುಲರ್ ರಾಜಕೀಯ ಪಕ್ಷವಾಗಿತ್ತು. ಅದೃಷ್ಟವೋ ದುರದೃಷ್ಟವೋ ಶ್ರೀಮತಿ ಗಾಂಧಿಯವರ ನಂತರದ ಕಾಂಗ್ರೆಸ್ ಅಲ್ಪಸಂಖ್ಯಾತರ ಬಗ್ಗೆ ತೆಗೆದ ಬಹುತೇಕ ಹೆಜ್ಜೆಗಳು ತನ್ನ ಕಾಲಿಗೆ ಸ್ವಯಂ ಕೊಡಲಿ ಪ್ರಯೋಗಿಸುವಂತಿತ್ತು. ಹಿಂದೂ ವೋಟುಗಳನ್ನು ಕಬಳಿಸುವ ಭರಾಟೆಯಲ್ಲಿ ರಾಜೀವ್ ಸರಕಾರವು ಕೋಮುವಾದಿ ಸಂಘ ಪರಿವಾರವನ್ನು ಒಲಿಸುವ ಬೃಹತ್ ಪ್ರಯತ್ನಗಳನ್ನೇ ಕೈಗೆತ್ತಿಕೊಂಡಿತು.

ಇಂದಿರಾಗಾಂಧಿಯವರಿಂದ ಬಳುವಳಿಯಾಗಿ ಬಂದಿರುವ ಸಂತುಲಿತ ರಾಜಕೀಯ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡ ರಾಜೀವ್ ಸರಕಾರವು ದೇಶದ ಸಮಗ್ರತೆಯ ಬಗ್ಗೆ ಚಿಂತಿಸದೆ ಸಂಘ ಪರಿವಾರದ ಪರವಾಗಿರುವ ಮತಬ್ಯಾಂಕನ್ನು ಕಬಳಿಸುವತ್ತ ತನ್ಮಯ ವಾಯಿತು. 1985ರಲ್ಲಿ ಸಂಘ ಪರಿವಾರಕ್ಕೆ ಬಾಬರಿ ಮಸೀದಿ ರಾಮಜನ್ಮ ಭೂಮಿಯ ಕರಸೇವೆಗೆ ಅನುವು ಮಾಡಿಕೊಟ್ಟಿತ್ತು. ವಾಸ್ತವದಲ್ಲಿ ಬಾಬರಿ ರಾಮ ಜನ್ಮಭೂಮಿ ವಿವಾದವು ಸುಪ್ರೀಂ ಕೋರ್ಟು ವಿಚಾರಣೆಯಲ್ಲಿರುವಾಗ ಆ ಬಗ್ಗೆ ಯಾವುದೇ ತೀರ್ಪು ಬರುವುದಕ್ಕಿಂತ ಮುಂಚಿತವಾಗಿ ಕರಸೇವೆಗಾಗಿ ಅನುವು ಮಾಡಿಕೊಟ್ಟಿರುವುದು ಸರಿಯಲ್ಲ. ರಾಜೀವ್ ಸರಕಾರದ ಈ ನೀತಿಯು ವಾಸ್ತವದಲ್ಲಿ ಹಿಂದುತ್ವವಾದಿಗಳ ತುಷ್ಟೀಕರಣವಲ್ಲದೆ ಬಹುಸಂಖ್ಯಾತ ಹಿಂದೂಗಳ ತುಷ್ಟೀಕರಣವೆನ್ನುವಂತಿಲ್ಲ 1991ರಲ್ಲಿ ರಾಜೀವಗಾಂಧಿಯ ಅನುಪಸ್ಥಿತಿಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಪಾರ್ಲಿಮೆಂಟಿನ 120 ಸ್ಥಾನಗಳನ್ನು ಪಡೆಯಿತು. ಪಿ.ವಿ ನರಸಿಂಹ ರಾವ್‌ರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೇರಿತು. 1992ರ ಡಿಸೆಂಬರ್‌ನಲ್ಲಿನರಸಿಂಹರಾವ್ ಸರಕಾರವು ಇನ್ನೊಮ್ಮೆ ಸಂಘ ಪರಿವಾರವನ್ನು ತುಷ್ಟೀಕರಿಸುವ ಇನ್ನೊಂದು ಹೆಜ್ಜೆಯಿರಿಸಿ ಕೊಂಡು ಕರಸೇವೆಗೆ ಅವಕಾಶ ಮಾಡಿಕೊಟ್ಟಿತು.

ಸಾಮಾನ್ಯವಾಗಿ ಹೇಳುವಂತೆ ಲೋಕಸಭೆಯ ಸುಮಾರು 180 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತವು ನಿರ್ಣಾಯಕವಾಗಿದೆ. ಸ್ವಾತಂತ್ರದ ನಂತರ ತುರ್ತು ಪರಿಸ್ಥಿತಿಯನ್ನು ಹೊರತು ಪಡಿಸಿಕೊಂಡು ಇಂದಿರಾ ಯುಗದಲ್ಲೂ ಈ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ 90% ಓಟುಗಳು ಕಾಂಗ್ರೆಸ್‌ಗೆ ಸಲ್ಲುತ್ತಿತ್ತು. ಇದರಿಂದಾಗಿ ಶ್ರಮವಿಲ್ಲದೆ ಕಾಂಗ್ರೆಸ್ ಜಯಭೇರಿಯಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿತ್ತು. ಬಾಬರಿ ಮಸೀದಿಯ ಧ್ವಂಸದ ನಂತರ ಕಾಂಗ್ರೆಸ್‌ನ ಈ ಅಲ್ಪಸಂಖ್ಯಾತರ ವೋಟು ಬ್ಯಾಂಕ್ ಧೂಳೀಪಟವಾಗಿದೆ. ವಿವಿಧ ಪಾರ್ಟಿಗಳಲ್ಲಿ ಹಂಚಿಹೋಗುವ ಅಲ್ಪಸಂಖ್ಯಾತರ ವೋಟಿನ ಫಲಶ್ರುತಿಯಾಗಿ ಕೋಮುವಾದಿ ಪಕ್ಷಗಳಿಗೆ ಬಹುತೇಕ ಪ್ರಯೋಜನವಾಗಿವೆ. ವಾಸ್ತವದಲ್ಲಿ ಮೃದು ಹಿಂದುತ್ವದ ಧೋರಣೆಯು ಕಾಂಗ್ರೆಸ್‌ಗೆ ರಾಜಕೀಯವಾಗಿ ಮುಳುವಾಗಿ ಪರಿಣಮಿಸಿದೆ. ಕಾಂಗ್ರೆಸ್ ರಾಜಕೀಯವಾಗಿ ಮತ್ತೆ ಹಿಂದಿನ ವರ್ಚಸ್ಸನ್ನು ಪಡೆಯಬೇಕಾದರೆ ಇನ್ನೊಮ್ಮೆ ಅಹಿಂದ ಅಥವಾ ನಿಜ ಸೆಕ್ಯುಲರಿಸಂ ನತ್ತ ಮರಳಬೇ ಕಾಗಿದೆ. ಕರ್ನಾಟಕದಲ್ಲಿ 2013 ರಿಂದ 2018ರ ವರೆಗಿದ್ದ ಸಿದ್ದರಾಮಯ್ಯ ಸರಕಾರವೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಈ ಧೋರಣೆಯನ್ನು ಸ್ವೀಕರಿಸಲು ಹಿಂದುಳಿದ ಜಾತಿಯ ಕಾಂಗ್ರೆಸ್ಸಿಗರು ಸಿದ್ದರಿರಬಹುದಾದರೂ ಮೇಲ್ಜಾತಿಯವರು ಸ್ವೀಕರಿಸಲು ಸಿದ್ಧರಿರುವರೇ?

share
ಅಬೂ ಅನೀಸ್, ಕಲ್ಲಾಪು
ಅಬೂ ಅನೀಸ್, ಕಲ್ಲಾಪು
Next Story
X