Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ8 April 2019 12:02 AM IST
share
ಓ ಮೆಣಸೇ…

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗೆದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗಲಿದ್ದಾರೆ - ವೀರಪ್ಪ ಮೊಯ್ಲಿ, ಸಂಸದ
  ಅವರನ್ನು ಮನೆಗೆ ಕಳುಹಿಸುವ ನಿಟ್ಟಿನಲ್ಲಿ ನೀವು ಭಾರೀ ಕೆಲಸ ಮಾಡುತ್ತಿರುವಂತಿದೆ?
---------------------
ಇದು ಚುನಾವಣೆಯಲ್ಲ, ಧರ್ಮ ಯುದ್ಧ - ಬಿ.ಎಲ್. ಸಂತೋಷ್, ಬಿಜೆಪಿ ಕಾರ್ಯದರ್ಶಿ
  ಯಡಿಯೂರಪ್ಪ ವಿರುದ್ಧವೇ?
---------------------
ಅಡ್ವಾಣಿಯಂತಹ ಮೇರು ನಾಯಕ ಸ್ಪರ್ಧಿಸಿದ ಗಾಂಧಿನಗರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಆ ಭಾಗ್ಯಕ್ಕಾಗಿ ಮೇರು ನಾಯಕನನ್ನು ಈ ಪರಿಯಲ್ಲಿ ಅವಮಾನಿಸಬೇಕಾಗಿರಲಿಲ್ಲ.

---------------------
ಈ ಚುನಾವಣೆಯಲ್ಲಿ ಕಾಮ್‌ಧಾರ್‌ಗಳು ಗೆಲ್ಲಬೇಕು, ನಾಮ್‌ಧಾರ್‌ಗಳು ಸೋಲುವಂತಾಗಬೇಕು - ಸ್ಮತಿ ಇರಾನಿ, ಕೇಂದ್ರ ಸಚಿವೆ

ಹೀಗೆ ಕರೆಕೊಟ್ಟು ತಮ್ಮ ಸೋಲಿಗೆ ತಾವೇ ಕಾರಣರಾಗುತ್ತಿದ್ದೀರಿ.

---------------------
ಕೆಲವರಿಗೆ ಸಂಸಾರವೇ ರಾಷ್ಟ್ರ. ಪ್ರಧಾನಿ ಮೋದಿಗೆ ರಾಷ್ಟ್ರವೇ ಸಂಸಾರ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ನಿಮಗೀಗ ಮೋದಿಯೇ ಸಂಸಾರ ಇರಬೇಕು.

---------------------
ಭಾರತಕ್ಕೆ ಬೇಕಾಗಿರುವುದು ರಾಜ ಮಹಾರಾಜರಲ್ಲ, ಪ್ರಾಮಾಣಿಕ ಸೇವೆ ಮಾಡಬಲ್ಲ ಚೌಕಿದಾರ್ - ನರೇಂದ್ರ ಮೋದಿ, ಪ್ರಧಾನಿ
ಪ್ರಾಮಾಣಿಕವಾಗಿ ಸೇವೆ ಮಾಡಬಲ್ಲ ಪ್ರಧಾನಿಯೊಬ್ಬ ದೇಶದ ಅಗತ್ಯವಾಗಿದೆ.

---------------------
ನನ್ನ ಖಾತೆಯಲ್ಲಿ ಟ್ವೀಟ್ ಮಾಡುವುದು ಖಂಡಿತವಾಗಿಯೂ ನಾನೇ, ನನ್ನ ಭೂತವಲ್ಲ - ಸುಶ್ಮಾ ಸ್ವರಾಜ್, ಕೇಂದ್ರ ಸಚಿವೆ

ಪ್ರೊಫೈಲ್ ಪಿಕ್ ನೋಡಿ ಗೊಂದಲವಾಗಿರಬೇಕು.

---------------------
ಸದ್ಯಕ್ಕೆ ನಮ್ಮ ನಾಯಕರು, ಕಾರ್ಯಕರ್ತರು ತಮ್ಮ ಅತೃಪ್ತಿ ಅಸಮಾಧಾನವನ್ನು ಅದುಮಿಟ್ಟುಕೊಳ್ಳುವುದು ಅನಿವಾರ್ಯ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಮತ ಹಾಕುವಾಗ ಅದನ್ನು ಹೊರಹಾಕಿ ಎಂದು ಕರೆ ನೀಡುತ್ತಿದ್ದೀರಾ?

---------------------

ಕಾಂಗ್ರೆಸ್-ಬಿಜೆಪಿಯವರ ರಕ್ತದ ಗುಂಪು ಯಾವಾಗಲೂ ಹೊಂದಾಣಿಕೆಯಾಗಲ್ಲ - ಡಿ.ಕೆ. ಶಿವಕುಮಾರ್, ಸಚಿವ
 ಕಾಂಗ್ರೆಸ್-ಬಿಜೆಪಿಯ ಡಿಎನ್‌ಎ ಒಂದೇ ಎನ್ನುವ ಆರೋಪವಿದೆ.

---------------------
ಯಡಿಯೂರಪ್ಪರಿಗೆ ವಿಶ್ರಾಂತಿಯ ಅಗತ್ಯವಿದೆ. ಈ ಬಾರಿ ಮತದಾರರು ಅದನ್ನು ಕೊಡುತ್ತಾರೆ - ಡಿ.ಕೆ. ಶಿವಕುಮಾರ್, ಸಚಿವ
ಅದನ್ನು ಕೊಡಲು ಬಿಜೆಪಿಯ ಉಳಿದ ನಾಯಕರೂ ತುದಿಗಾಲಲ್ಲಿದ್ದಾರೆ.

---------------------
  ಭಾರತೀಯನಾಗಿರುವುದಕ್ಕಿಂತ ಗೋವಾಂಕರ್ ಆಗಿರುವುದು ಮುಖ್ಯ- ವಿಜಯ್ ಸರ್ದೇಸಾಯಿ, ಗೋವಾ ಉಪಮುಖ್ಯಮಂತ್ರಿ
ನಿಮ್ಮ ಪ್ರಕಾರ ಗೋವಾದೊಳಗೆ ಭಾರತವಿದ್ದಿರಬೇಕು.

---------------------
  ಮಾಜಿ ಮುಖ್ಯಮಂತ್ರಿ ಮತ್ತು ನಾನು ಮಾತನಾಡುತ್ತಿಲ್ಲ ಎಂಬುದು ಸರಿಯಲ್ಲ, ನಾವಿಬ್ಬರೂ ಕಣ್ಣಲ್ಲೇ ಮಾತನಾಡಿಕೊಳ್ಳುತ್ತೇವೆ - ಎಚ್. ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ ಪರಸ್ಪರ ಕಣ್ಣಲ್ಲಿ ದುರುಗುಟ್ಟಿ ನೋಡುತ್ತಿರುವುದನ್ನೇ ಮಾತು ಎಂದು ನಂಬಬೇಕೇ?
---------------------

ನನ್ನ ತಂದೆ ಬಾಳಾ ಠಾಕ್ರೆ ನಾವು ಏನೇ ಮಾಡಿದರೂ ಅದನ್ನು ಹಿಂದಿನಿಂದ ಮಾಡಬಾರದು ಎಂದು ಹೇಳುತ್ತಿದ್ದರು - ಉದ್ಧವ್ ಠಾಕ್ರೆ, ಶಿವಸೇನಾ ವರಿಷ್ಠ
ಅಮಾಯಕರ ಅಂಗಡಿಗಳಿಗೆ ಬೆಂಕಿಕೊಡುವಾಗ, ಅಮಾಯಕರಿಗೆ ಚೂರಿ ಹಾಕುವಾಗ ಇದನ್ನು ಯಥಾವತ್ ಪಾಲಿಸುತ್ತಿದ್ದರು ಎನ್ನುವುದು ದೇಶಕ್ಕೆ ಗೊತ್ತಿದ್ದ ಸಂಗತಿ. ---------------------

ರಾಜಕೀಯದಲ್ಲಿ ನಿಷ್ಠಾವಂತರಿಗೆ ಭವಿಷ್ಯವಿದೆ - ಯು.ಟಿ. ಖಾದರ್, ಸಚಿವ

ಆದರೆ ದೇಶದ ಭವಿಷ್ಯ?

---------------------
ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನದ ಅಗತ್ಯವಿಲ್ಲ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ನಿಮಗೆ ಅದರ ಅಗತ್ಯವಿದ್ದ ಸೂಚನೆಗಳು ಕಾಣಿಸುತ್ತಿದೆ.

---------------------
ನಾನು ಹಿಂದಿನ ಬಾಗಿಲಿನಿಂದ ಬರುವ ರಾಜಕಾರಣಿ ಅಲ್ಲ - ರಮೇಶ್ ಕತ್ತಿ, ಮಾಜಿ ಸಂಸದ

ಬಹುಶಃ ಹಿಂದಿನ ಗೋಡೆಗೆ ಕನ್ನ ಹಾಕಿ ಬರುವ ರಾಜಕಾರಣಿ ಇರಬೇಕು.

---------------------
ನಾನು ದೇಶದ ಒಳಿತಿಗೆ ದಿನದ 18-20 ಗಂಟೆ ದುಡಿಯುತ್ತಿದ್ದೇನೆ- ಬಾಬಾ ರಾಮ್‌ದೇವ್, ಯೋಗಗುರು ಪತಂಜಲಿ

ನಿಮ್ಮ ಪಾಲಿಗೆ ದೇಶವೇ?
---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನನ್ನ ನಾಯಕ - ಎ. ಮಂಜು, ಹಾಸನ ಬಿಜೆಪಿ ಅಭ್ಯರ್ಥಿ
ಚುನಾವಣಾ ಚಿಹ್ನೆಯಾಗಿ ಅವರ ಭಾವಚಿತ್ರವನ್ನೇ ಬಳಸಬಾರದೇ?
---------------------
ನಾನು ಕುರುಬನಲ್ಲ, ಹಿಂದೂ - ಕೆ.ಎಸ್. ಈಶ್ವರಪ್ಪ, ಬಿಜೆಪಿ ಮುಖಂಡ
ಮತ್ತೆ ಬಿಜೆಪಿಯೊಳಗೆ ಹಿಂದುಳಿದವರ್ಗದ ಸಂಘಟನೆ ಮಾಡಿದ್ದೇಕೆ?
---------------------
ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಮೂತ್ರ ಮಾಡಿದರೂ ಜಿಎಸ್‌ಟಿ ಹಾಕುತ್ತಾರೆ - ವೆಂಕಟರಾವ್ ನಾಡಗೌಡ, ಸಚಿವ

ನಿತಿನ್ ಗಡ್ಕರಿ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಆ ಬಗ್ಗೆ ವಿವರಗಳಿವೆಯಂತೆ.

---------------------
ಜನಹಿತವೇ ನನ್ನ ದೌರ್ಬಲ್ಯ - ಪ್ರಮೋದ್ ಮಧ್ವರಾಜ್, ಚಿಕ್ಕಮಗಳೂರು-ಉಡುಪಿ ಮೈತ್ರಿ ಅಭ್ಯರ್ಥಿ
ನಿಮ್ಮನ್ನು ಸೋಲಿಸುವುದರಲ್ಲೇ ಜನಹಿತವಿದೆ ಎನ್ನುವುದನ್ನು ಜನರು ಈಗಾಗಲೇ ಕಂಡುಕೊಂಡಿದ್ದಾರೆ.
---------------------
33 ಕೋಟಿ ದೇವತೆಗಳನ್ನು ಪೂಜಿಸುವವರಿಗೆ ಒಬ್ಬ ಅಲ್ಲಾ, ಒಬ್ಬ ಏಸು ಜಾಸ್ತಿ ಆಗಲು ಸಾಧ್ಯವಿಲ್ಲ - ಅನಂತ ಕುಮಾರ ಹೆಗಡೆ, ಕೇಂದ್ರ ಸಚಿವ

ಸದ್ಯಕ್ಕೆ ನಿಮ್ಮನ್ನು ಕಂಡರೆ 33 ಕೋಟಿ ದೇವತೆಗಳೂ ಮುಖ ತಿರುಗಿಸುವಂತಹ ಸನ್ನಿವೇಶವಿದೆ.

---------------------
  ಪಕ್ಕದ ಮನೆಗೆ ಹೋಗಿ ಹೇಗೆ ಕದ್ದು ಹಾಲು ಕುಡಿದು ಬರಬೇಕು ಎಂಬುದನ್ನು ಕಲಿಸಿ ಕೊಡುವುದೇ ಆರೆಸ್ಸೆಸ್ ಟ್ರೈನಿಂಗ್
- ಎಸ್.ಆರ್. ಶ್ರೀನಿವಾಸ್, ಸಚಿವ
ಪಕ್ಕದ ಮನೆಯ ಹಾಲಿಗೆ ಹಾಲಾಹಲ ಹಾಕಿ ಬರುವುದನ್ನೂ ಅಲ್ಲಿ ಕಲಿಸಲಾಗುತ್ತದೆ.

---------------------
ಹಾಸಿಗೆ ಹಿಡಿಯುವವರೆಗೂ ರಾಜಕಾರಣ ಮಾಡುತ್ತೇನೆ - ದೇವೇಗೌಡ, ಮಾಜಿ ಪ್ರಧಾನಿ
  ಮೈತ್ರಿ ಸರಕಾರ ಹಾಸಿಗೆ ಹಿಡಿಯುವವರೆಗೆ ಎಂದು ಜನ ಅರ್ಥ ಮಾಡಿಕೊಂಡಿದ್ದಾರೆ.
---------------------
ಮೂರು ತಿಂಗಳಿಂದ ತುಂಬಾ ಮಂಕಾಗಿದ್ದೇನೆ. ಬಿಎಸ್‌ವೈ ಮಾಟ ಮಾಡಿಸಿರಬೇಕು - ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಕಳೆದ ನಾಲ್ಕು ವರ್ಷಗಳಿಂದ ದೇಶವೇ ಮಂಕಾಗಿದೆ. ನಿಮ್ಮ ಮೂರು ತಿಂಗಳು ದೊಡ್ಡದಲ್ಲ ಬಿಡಿ. 

share
ಪಿ.ಎ.ರೈ
ಪಿ.ಎ.ರೈ
Next Story
X