ಎ.15ರಂದು ವಿಶ್ವಕಪ್ ಗೆ ಟೀಮ್ ಇಂಡಿಯಾ ಆಯ್ಕೆ

ಹೊಸದಿಲ್ಲಿ. ಎ.8: ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಎ.15ರಂದು ಸಭೆ ಸೇರಲಿದ್ದು, ಮೇ 30ರಂದು ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್ ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗುವುದು.
ಇದೀಗ ನಡೆಯುತ್ತಿರುವ ಐಪಿಎಲ್ ನಲ್ಲಿ ಭಾರತದ ಆಟಗಾರರ ಪ್ರದರ್ಶನವನ್ನು ಆಯ್ಕೆ ಸಮಿತಿಯು ಗಮನಿಸುತ್ತಿದೆ. ತಂಡದಲ್ಲಿ ಟೀಮ್ ಇಂಡಿಯಾದಲ್ಲಿ ನಾಲ್ಕನೇ ಬ್ಯಾಟ್ಸ್ ಮನ್ ಮತ್ತು ನಾಲ್ಕನೇ ಬೌಲರ್ ಹುದ್ದೆ ಖಾಲಿ ಇದೆ. ಈ ಸ್ಥಾನವನ್ನು ತುಂಬಲು ಸಮರ್ಥ ಆಟಗಾರರ ಶೋಧ ಮುಂದುವರಿದಿದೆ.ಅಂಬಟಿ ರಾಯುಡು , ರಿಷಭ್ ಪಂತ್ ಮತ್ತು ವಿಜಯ್ ಶಂಕರ್ ನಾಲ್ಕನೇ ಬ್ಯಾಟ್ಸ್ ಮನ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ನಾಲ್ಕನೇ ಬೌಲರ್ ಸ್ಥಾನಕ್ಕಾಗಿ ನವ್ ದೀಪ್ ಸೈನಿ ನೋಡುತ್ತಿದ್ದಾರೆ.
Next Story





