ರಾಷ್ಟ್ರೀಯ ಶ್ರೇಯಾಂಕ ಪಟ್ಟಿ: ಐಐಟಿ ಮದ್ರಾಸ್ ಪ್ರಥಮ, ಐಐಎಸ್‌ಸಿ ಬೆಂಗಳೂರು ದ್ವಿತೀಯ
ಹೊಸದಿಲ್ಲಿ, ಎ.8: ದೇಶದ ಉನ್ನತ ಅಧ್ಯಯನ ಸಂಸ್ಥೆಗಳ ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೋಮವಾರ ಬಿಡುಗಡೆಗೊಳಿಸಿದ್ದು, ಐಐಟಿ ಮದ್ರಾಸ್ ಪ್ರಥಮ, ಐಐಎಸ್‌ಸಿ ಬೆಂಗಳೂರು ದ್ವಿತೀಯ, ಐಐಟಿ ದಿಲ್ಲಿ ತೃತೀಯ ರ್ಯಾಂಕ್ ಪಡೆದಿದೆ. ವಿವಿಗಳ ಶ್ರೇಯಾಂಕ ಪಟ್ಟಿಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ 9ನೇ ಸ್ಥಾನ ಪಡೆದಿದೆ.
ಕಾಲೇಜುಗಳ ಶ್ರೇಯಾಂಕ ಪಟ್ಟಿಯಲ್ಲಿ ದಿಲ್ಲಿ ವಿವಿಯ ಮಿರಾಂದ ಹೌಸ್ ಪ್ರಥಮ, ಸೈಂಟ್ ಸ್ಟೀಫನ್ಸ್ ಕಾಲೇಜು ನಾಲ್ಕನೇ ರ್ಯಾಂಕ್ ಪಡೆದಿದೆ. ಸಂಸ್ಥೆಗಳು ಪಡೆದ ಶ್ರೇಯಾಂಕದ ಪಟ್ಟಿ ಹೀಗಿದೆ.
ಅಗ್ರ ಭಾರತೀಯ ಸಂಸ್ಥೆ(ಸಮಗ್ರ)- ಐಐಟಿ ಮದ್ರಾಸ್. ಅಗ್ರ ವಿವಿ- ಐಐಎಸ್‌ಸಿ ಬೆಂಗಳೂರು. ಅಗ್ರ ಇಂಜಿನಿಯರಿಂಗ್ ಸಂಸ್ಥೆಗಳು- ಐಐಟಿ ಮದ್ರಾಸ್ ಮತ್ತು ಐಐಟಿ ದಿಲ್ಲಿ. ಅಗ್ರ ಮ್ಯಾನೇಜ್‌ಮೆಂಟ್ ಸಂಸ್ಥೆಗಳು- ಐಐಎಂ ಬೆಂಗಳೂರು ಮತ್ತು ಐಐಎಂ ಅಹ್ಮದಾಬಾದ್.
ಅಗ್ರ ಕಾಲೇಜು- ಮಿರಾಂದ ಹೌಸ್ ಮತ್ತು ಹಿಂದು ಕಾಲೇಜು. ಅಗ್ರ ಮೆಡಿಕಲ್ ಸಂಸ್ಥೆಗಳು- ಎಐಐಎಂಎಸ್ ಹೊಸದಿಲ್ಲಿ ಮತ್ತು ಪಿಜಿಐಎಂಇಆರ್ ಚಂಡೀಗಢ. ಅಗ್ರ ವಾಸ್ತುಶಿಲ್ಪಶಾಸ್ತ್ರ ಸಂಸ್ಥೆ- ಐಐಟಿ ಖರಗ್‌ಪುರ ಮತ್ತು ಐಐಟಿ ರೂರ್ಕಿ. ಅಗ್ರ ಕಾನೂನು ಸಂಸ್ಥೆಗಳು- ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಬೆಂಗಳೂರು ವಿವಿ, ನ್ಯಾಷನಲ್ ವಿವಿ ಹೊಸದಿಲ್ಲಿ. ಅಗ್ರ ವಿವಿಗಳು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಯನ್ಸ್, ಬೆಂಗಳೂರು. ಜವಾಹರಲಾಲ್ ನೆಹರೂ ವಿವಿ ದಿಲ್ಲಿ, ಬನಾರಸ್ ಹಿಂದು ವಿವಿ ವಾರಾಣಸಿ, ಯುನಿವರ್ಸಿಟಿ ಆಫ್ ಹೈದರಾಬಾದ್ , ಹೈದರಾಬಾದ್, ಕಲ್ಕತ್ತ ವಿವಿ ಕೋಲ್ಕತಾ, ಜಾದವ್‌ಪುರ ವಿವಿ ಕೋಲ್ಕತಾ, ಅಣ್ಣಾ ವಿವಿ ಚೆನ್ನೈ, ಅಮೃತ ವಿಶ್ವವಿದ್ಯಾಪೀಠಂ, ಕೊಯಂಬತ್ತೂರು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ, ಸಾವಿತ್ರಿಬಾಯ್ ಫುಲೆ ಪುಣೆ ವಿವಿ. ಅಗ್ರ 10 ಇಂಜಿನಿಯರಿಂಗ್ ಸಂಸ್ಥೆಗಳು: ಐಐಟಿ ಮದ್ರಾಸ್, ಐಐಟಿ ದಿಲ್ಲಿ, ಐಐಟಿ ಬಾಂಬೆ, ಐಐಟಿ ಖರಗ್‌ಪುರ, ಐಐಟಿ ಕಾನ್ಪುರ, ಐಐಟಿ ರೂರ್ಕಿ, ಐಐಟಿ ಗುವಾಹಟಿ, ಐಐಟಿ ಹೈದರಾಬಾದ್, ಅಣ್ಣಾ ವಿವಿ ಚೆನ್ನೈ.







