ಕೇರಳ ಕಾಂಗ್ರೆಸ್ (ಎಂ) ನಾಯಕ ಕೆ.ಎಂ.ಮಾಣಿ ನಿಧನ

ತಿರುವನಂತಪುರಂ, ಎ. 9: ಕೇರಳ ಕಾಂಗ್ರೆಸ್(ಎಂ) ಅಧ್ಯಕ್ಷ ಹಾಗೂ ರಾಜ್ಯದ ರಾಜಕೀಯ ಕ್ಷೇತ್ರದ ಪ್ರಮುಖ ಮುಖಂಡರಾಗಿದ್ದ ಕೆಎಂ ಮಾಣಿ ಮಂಗಳವಾರ ನಿಧನರಾಗಿದ್ದಾರೆ.
ಎದೆಯ ಸೋಂಕಿಗೆ ಒಳಗಾಗಿದ್ದ 86 ವರ್ಷದ ಮಾಣಿ ಕಳೆದ ಕೆಲ ವಾರಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1965ರಲ್ಲಿ ರಾಜ್ಯದ ಪಾಲ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದ ಮಣಿ ಚುನಾವಣೆಯಲ್ಲಿ ಸೋಲನ್ನೇ ಕಂಡವರಲ್ಲ. 13 ಬಾರಿ ಬಜೆಟ್ ಮಂಡಿಸಿದ ದಾಖಲೆ ಅವರದ್ದು. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಂಗದಲ್ಲಿ ಮಣಿ ನೇತೃತ್ವದ ಕೇರಳ ಕಾಂಗ್ರೆಸ್ (ಎಂ) ಪ್ರಮುಖ ಮಿತ್ರಪಕ್ಷವಾಗಿದೆ. ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಅವರು ಈ ಬಾರಿ ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದರು.
Next Story





