ಮಂಗಳೂರಲ್ಲಿ ಎ.12ರಂದು ನೀರು ವಿತರಣೆ ಸ್ಥಗಿತ
ಮಂಗಳೂರು, ಎ.9: ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್ 1 ಮತ್ತು 2ರಲ್ಲಿ ನಿರ್ವಹಣಾ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಎ.12ರಂದು ಪೂರ್ವಾಹ್ನ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನೀರು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಜತೆಗೆ ಎಲ್‌ಎಲ್‌ಪಿಎಸ್ 2ರಲ್ಲಿ ಕಾರ್ಯಾಚರಿಸುವ ಜಾಕ್‌ವೆಲ್‌ನಲ್ಲಿ ಮರಳು, ಕಸಕಡ್ಡಿ, ಹೂಳು ಇತ್ಯಾದಿ ಶೇಖರಣೆಗೊಂಡಿದೆ. ನೀರೆತ್ತುವ ಪಂಪುಗಳ ಚಾಲನೆಯಲ್ಲಿ ಅಡೆತಡೆ ಉಂಟಾಗುವುದನ್ನು ಸರಿಪಡಿಸಲು ಜಾಕ್‌ವೆಲ್‌ನ್ನು ಶುಚಿಗೊಳಿಸುವುದು ಅಗತ್ಯವಾಗಿದೆ.ಮಹಾನಗರ ಪಾಲಿಕೆಯ ನಗರ ಹಾಗೂ ಸುರತ್ಕಲ್ ಸೇರಿದಂತೆ ಎಲ್ಲ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





