ಬಿಜೆಪಿ ಪ್ರಣಾಳಿಕೆಯಿಂದ ನವ ಭಾರತ ನಿರ್ಮಾಣ: ಶೋಭಾ ಕರಂದ್ಲಾಜೆ

ಉಡುಪಿ, ಎ. 9: ಈ ಬಾರಿಯ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಾದ ಸಂಕಲ್ಪಪತ್ರ ಬಿಡುಗಡೆಯಾಗಿದ್ದು, ಈ ಪ್ರಣಾಳಿಕೆಯಿಂದ ಭಾರತೀಯರ ನವ ಭಾರತದ ಕನಸು ನನಸಾಗಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ 76 ಬಡಗುಬೆಟ್ಟು ವಾರ್ಡಿನಲ್ಲಿ ಮಂಗಳವಾರ ಜರಗಿದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಸಂವಿಧಾನದ 370ನೇ ವಿಧಿ, 35 ಎ ವಿಧಿ ಮೊದಲಾದ ದೇಶದ ಏಕತೆಗೆ ಕಂಟಕ ಪ್ರಾಯವಾದ ವಿಧಿಗಳನ್ನು ರದ್ದುಗೊಳಿಸುವ ಪ್ರಸ್ತಾವವು ಈ ಸಂಕಲ್ಪಪತ್ರದಲ್ಲಿದೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿದರು. ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಶ್ರೀಶ ಭಟ್ ಕೊಡವೂರು, ವಿಜಯ ಕೊಡವೂರು, ಮಾಜಿ ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಬಿಜೆಪಿ ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಕುಕ್ಕಿಕಟ್ಟೆ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.
Next Story





