ಶ್ರೀಲಂಕಾದಲ್ಲಿ ಚೀನಾದಿಂದ ರೈಲು ಮಾರ್ಗ ನಿರ್ಮಾಣ
ಬೀಜಿಂಗ್, ಎ. 9: ಸ್ವತಂತ್ರ ಶ್ರೀಲಂಕಾದ ಮೊದಲ ನೂತನ ರೈಲು ಮಾರ್ಗಕ್ಕೆ ಹಣ ಹಾಕಿ ನಿರ್ಮಿಸಿರುವುದಾಗಿ ಚೀನಾ ಮಂಗಳವಾರ ಹೇಳಿದೆ. ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ಐ)ನ ಯೋಜನೆಯು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನೆ ನೀಡಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ದಕ್ಷಿಣ ಶ್ರೀಲಂಕಾದಲ್ಲಿ ಮಟಾರ ಮತ್ತು ಬೆಲಿಯಟ್ಟಗಳನ್ನು ಸಂಪರ್ಕಿಸುವ 26.75 ಕಿ.ಮೀ. ರೈಲು ಮಾರ್ಗವನ್ನು ಸೋಮವಾರ ಉದ್ಘಾಟಿಸಲಾಗಿದೆ. ಈ ಮಾರ್ಗವನ್ನು ‘ಚೀನಾ ರೈಲ್ವೇ ಗ್ರೂಪ್ 5’ (ಸಿಆರ್5) ನಿರ್ಮಿಸಿದೆ ಹಾಗೂ ಎಕ್ಸ್ಪೋರ್ಟ್-ಇಂಪೋರ್ಟ್ (ಎಕ್ಸಿಮ್) ಬ್ಯಾಂಕ್ ಆಫ್ ಚೀನಾ ಹಣಕಾಸು ಒದಗಿಸಿದೆ.
‘‘ಕಾಮಗಾರಿಯ ಹೆಚ್ಚಿನ ಭಾಗವನ್ನು ಚೀನಾ ರೈಲ್ವೇ ಗ್ರೂಪ್ 5 ನಿರ್ವಹಿಸಿದೆ ಹಾಗೂ ಸೆಂಟ್ರಲ್ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಬ್ಯೂರೋ (ಸಿಇಸಿಬಿ) ಸಲಹಾಗಾರನಾಗಿದೆ’’ ಎಂದು ಚೀನಾ ಸರಕಾರಿ ಮಾಧ್ಯಮ ವರದಿ ಮಾಡಿದೆ.
Next Story