ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.2 ಲಕ್ಷ ನಗದು ಜಪ್ತಿ
ದಾವಣಗೆರೆ,ಎ.9: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.2 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಿಲ್ ಹಾಗೂ ರೂಪಲಾಲ್ ಎಂಬುವರು ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಜಪ್ತಿ ಮಾಡಿ ಜಿಲ್ಲಾ ಖಜಾನೆ ವಶಕ್ಕೆ ನೀಡಲಾಗಿದೆ.
ಪ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರಾದ ನವೀನ್ ಕುಮಾರ್, ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ದೊಡ್ಡ ಗೌಡರ, ಚಿದಂಬರ ಮೂರ್ತಿ ಕಾರ್ಯಾಚರಣೆ ವೇಳೆ ಇದ್ದರು.
Next Story





