ವಿಶ್ವಸಂಸ್ಥೆಗೆ ಇರಾನ್‌ನ ನೂತನ ರಾಯಭಾರಿ ನೇಮಕ

ಲಂಡನ್, ಎ. 9: ಇರಾನ್ ವಿಶ್ವಸಂಸ್ಥೆಯ ತನ್ನ ರಾಯಭಾರಿಯಾಗಿ ರಾಜತಾಂತ್ರಿಕ ಹಾಗೂ ಮಾಜಿ ಪರಮಾಣು ಸಂಧಾನಕಾರ ಮಜೀದ್ ತಖ್ತ್ ರವಂಚಿಯನ್ನು ನೇಮಿಸಿದೆ ಎಂದು ಇರಾನ್‌ನ ಸರಕಾರಿ ಮಾಧ್ಯಮ ವರದಿ ಮಾಡಿದೆ.
61 ವರ್ಷದ ರವಂಚಿ ಈಗ ಇರಾನ್‌ನ ಯುರೋಪ್ ಮತ್ತು ಅಮೆರಿಕ ವ್ಯವಹಾರಗಳ ಉಪ ವಿದೇಶ ಸಚಿವರಾಗಿದ್ದಾರೆ. ಅವರು ಸ್ವಿಟ್ಸರ್‌ಲ್ಯಾಂಡ್ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಅಮೆರಿಕ, ಬ್ರಿಟನ್, ಫ್ರಾನ್ಸ್, ರಶ್ಯ, ಚೀನಾ ಮತ್ತು ಜರ್ಮನಿಯೊಂದಿಗೆ ಇರಾನ್ 2015ರಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದದ ಸಂಧಾನದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಗೆ ಅವರ ನೇಮಕಾತಿ ಮಹತ್ವ ಪಡೆದುಕೊಂಡಿದೆ.
ಪರಮಾಣು ಒಪ್ಪಂದದಿಂದ ಅಮೆರಿಕ ಹೊರಬಂದ ಬಳಿಕ, ಇತರ ದೇಶಗಳೊಂದಿಗೆ ಈ ಒಪ್ಪಂದವನ್ನು ಉಳಿಸಲು ಇರಾನ್ ಪ್ರಯತ್ನಿಸುತ್ತಿದೆ.
Next Story





