ಲೋಕಸಭಾ ಚುನಾವಣೆ: ಪ್ರಥಮ ಹಂತದ ಚುನಾವಣೆಯ ಪ್ರಚಾರ ಅಂತ್ಯ
ಹೊಸದಿಲ್ಲಿ, ಎ.9: 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 91 ಲೋಕಸಭಾ ಕ್ಷೇತ್ರಗಳ ಚುನಾವಣೆಯ ಪ್ರಚಾರ ಕಾರ್ಯ ಮಂಗಳವಾರ ಅಂತ್ಯಗೊಂಡಿದೆ.
ಈ ಕ್ಷೇತ್ರಗಳಲ್ಲಿ ಎ.11ರಂದು ಮತದಾನ ನಡೆಯಲಿದೆ. ಉತ್ತರಪ್ರದೇಶ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಝೊರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಸಮೂಹ ಮತ್ತು ಲಕ್ಷದ್ವೀಪಗಳಲ್ಲಿ ಎ.11ರಂದು ಮತದಾನ ನಡೆಯಲಿದೆ.
ಪ್ರಥಮ ಹಂತದ ಚುನಾವಣೆಯಲ್ಲಿ ಉತ್ತರಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಿಗೆ, ಬಿಹಾರದ 40ರಲ್ಲಿ 4 ಕ್ಷೇತ್ರಗಳಿಗೆ, ಪ.ಬಂಗಾಳದ 42ರಲ್ಲಿ 2 ಕ್ಷೇತ್ರಗಳಿಗೆ, ಆಂಧ್ರಪ್ರದೇಶದ ಎಲ್ಲಾ 25 ಕ್ಷೇತ್ರ, ತೆಲಂಗಾಣದ 17, ಉತ್ತರಾಖಂಡದ 5, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಮೇಘಾಲಯದ ತಲಾ 2, ಛತ್ತೀಸ್‌ಗಢ, ಮಣಿಪುರ, ಮಿರೆರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್ ನಿಕೊಬಾರ್, ಲಕ್ಷದ್ವೀಪದ ತಲಾ 1 ಸ್ಥಾನಗಳಿಗೆ ಎ.11ರಂದು ಮತದಾನ ನಡೆಯಲಿದೆ.





