ಅಲ್ಜೀರಿಯ: ಅಧ್ಯಕ್ಷರಾಗಿ ಮೇಲ್ಮನೆ ಸ್ಪೀಕರ್ ನೇಮಕ

ಅಲ್ಜೀರ್ಸ್ (ಅಲ್ಜೀರಿಯ), ಎ. 9: ಅಲ್ಜೀರಿಯ ಸಂಸತ್ತಿನ ಮೇಲ್ಮನೆ ಸ್ಪೀಕರ್ ಅಬ್ದುಲ್ ಕಾದರ್ ಬೆನ್ಸಾಲಾಹ್‌ರನ್ನು ದೇಶದ ಸಂಸತ್ತು ಮಂಗಳವಾರ ಮುಂದಿನ 90 ದಿನಗಳವರೆಗೆ ಮಧ್ಯಂತರ ಅಧ್ಯಕ್ಷರಾಗಿ ನೇಮಿಸಿದೆ.
ಅಧ್ಯಕ್ಷ ಅಬ್ದುಲಝೀಝ್‌ರ ರಾಜೀನಾಮೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ಸಂವಿಧಾನದ ಪ್ರಕಾರ, ದೇಶದ ಸಂಸತ್ತು ಮುಂದಿನ 90 ದಿನಗಳ ಕಾಲ ದೇಶದ ಆಡಳಿತವನ್ನು ನೋಡಿಕೊಳ್ಳಲು ಮೇಲ್ಮನೆ ಸ್ಪೀಕರ್‌ರನ್ನು ನೇಮಿಸಬೇಕಾಗಿದೆ.
ಆದರೆ, ರಾಜಕೀಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅವರ ನೇಮಕಾತಿಯನ್ನು ಖಚಿತವೆಂದು ಭಾವಿಸುವಂತಿಲ್ಲ.
Next Story





