ತೆಲಂಗಾಣದಲ್ಲಿ ಮಣ್ಣು ಕುಸಿದು 11 ಮಹಿಳಾ ಕಾರ್ಮಿಕರು ಸಾವು

ನಾರಾಯಣ್ಪೆಟ್(ತೆಲಂಗಾಣ), ಎ.10: ಮಳೆ ನೀರು ಇಂಗಿಸುವ ಗುಂಡಿ ತೋಡುತ್ತಿದ್ದಾಗ ಮಣ್ಣು ಕುಸಿದು 12 ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ತೆಲಂಗಾಣದ ನಾರಾಯಣ್ಪೆಟ್ ಜಿಲ್ಲೆಯ ಟಿಲೆರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಮನಗ್ರಾ ಯೋಜನೆಯಡಿ ಮಳೆ ನೀರು ಇಂಗಿಸುವ ಗುಂಡಿ ತೋಡುತ್ತಿದ್ದಾಗ ಹಠಾತ್ತನೆ ಮಣ್ಣು ಕುಸಿದು ಬಿದ್ದು , ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡರು ಎನ್ನಲಾಗಿದೆ.
ಒಟ್ಟು 12 ಮಹಿಳಾ ಕಾರ್ಮಿಕರು ಗುಂಡಿ ತೋಡುವ ಕಾರ್ಯದಲ್ಲಿ ತೊಡಗಿದ್ದು, ಈ ಪೈಕಿ 11 ಮಂದಿ ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ, ಓರ್ವಳಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





