ಎ.18ರ ಚುನಾವಣೆಗೆ ಕುಂದಾಪುರ ಸರ್ವಸನ್ನದ್ಧ: ಡಾ.ಮಧುಕೇಶ್ವರ
ಕುಂದಾಪುರ, ಎ.10: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿ ಸಿದಂತೆ 8 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 97,689 ಪುರುಷ, 1,05,582 ಮಹಿಳಾ ಹಾಗೂ ಇಬ್ಬರು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,03,273 ಮತದಾರರಿದ್ದಾರೆ. ಇವರ ಪೈಕಿ 2141 ಅಂಗವಿಕಲ ಮತದಾರರೂ ಇದ್ದಾರೆ.
119 ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 222 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಕುಂದಾಪುರ ಹೋಬಳಿಯ 33 ಹಾಗೂ ಕೋಟ ಹೋಬಳಿಯ 89 ಮತಗಟ್ಟೆಗಳು ಸೇರಿವೆ. ಈ ಪೈಕಿ 64 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು,30 ಮತಗಟ್ಟೆಗಳನ್ನು ಪ್ರಭಾವಕ್ಕೊಳಗಾಗುವ (ವಲ್ನರೇಬಲ್) ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ.
222 ಮತಗಟ್ಟೆಗಳ ಪೈಕಿ 4 ಮತಗಟ್ಟೆಗಳು ಸಖಿ ಮತಗಟ್ಟೆಗಳಾಗಿದ್ದು, ಈ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಮಹಿಳಾ ಸಿಬ್ಬಂದಿಗಳೇ ಆಗಿರುತ್ತಾರೆ. ಒಂದು ಮತಗಟ್ಟೆಯು ಅಂಗವಿಕಲರ ಮತಗಟ್ಟೆಯಾಗಿದ್ದು, ಈ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ವಿಕಲಚೇತರಾಗಿತ್ತಾರೆ. ಕೊರಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಒಂದು ಮತಗಟ್ಟೆಯನ್ನು ಕೊರಗ ಸಂಪ್ರದಾಯ ಬಿಂಬಿಸುವ ಉದ್ದೇಶಕ್ಕಾಗಿ ಬುಡಕಟ್ಟು ಮತಗಟ್ಟೆಯಾಗಿ ಗುರುತಿಸಲಾಗಿದೆ.
ಎಲ್ಲಾ 222 ಮತಗಟ್ಟೆಗಳಲ್ಲಿ ವಿಕಲ ಚೇತನ ಮತದಾರರ ಅನುಕೂಲಕ್ಕಾಗಿ ಸೂಕ್ತ ರ್ಯಾಂಪ್, ಗಾಲಿ ಕುರ್ಚಿ ವ್ಯವಸ್ಥೆ ಮತ್ತು ದೃಷ್ಠಿ ಮಾಂದ್ಯರಿಗೆ ಭೂತಗನ್ನಡಿ ಹಾಗೂ ಎಲ್ಲಾ ಮತದಾರರಿಗೆ ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಡೆದಾಡಲು ಅಸಾಧ್ಯವಾದ ಅಂಗವಿಕಲರು ಅಪೇಕ್ಷೆಪಟ್ಟರೆ ಮನೆಯಿಂದ ಮತಗಟ್ಟೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.ಹಾಗೂ ಆಯ್ದ 26 ಮತಗಟ್ಟೆಗಳ ವೀಡಿಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಚುನಾವಣಾ ಸಿಬ್ಬಂದಿ: ಮತದಾನ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 222 ಮತಗಟ್ಟೆಗಳಿಗೆ ಹಾಗೂ ಕಾದಿರಿಸಿದ ಸಿಬ್ಬಂದಿಗಳನ್ನು ಸೇರಿ ಚುನಾವಣಾಧಿಕಾರಿಗಳು 238, ಸಹಾಯಕ ಚುನಾವಣಾ ಅಧಿಕಾರಿಗಳು 238 ಹಾಗೂ ಪೋಲಿಂಗ್ ಆಫೀಸರ್ 546 ಒಟ್ಟು 1022 ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಸಂಬಂಧಪಟ್ಟ ಸಿಬ್ಬಂದಿಗಳಿಗೆ ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಿ ಸನ್ನದ್ಧಗೊಳಿಸಲಾಗಿದೆ.
ಚುನಾವಣಾ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ: ಚುನಾವಣಾ ಪ್ರಕ್ರಿಯೆಯಲ್ಲಿ ನಿಯೋಜಿತ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯವಾದ ವಾಹನ ಸೌಲ್ಯ ಮಾಡಲಾಗಿದ್ದು, ಇದಕ್ಕಾಗಿ 37 ಬಸ್‌ಗಳನ್ನು, 28 ವ್ಯಾನ್‌ಗಳನ್ನು ಬಳಸಲಾಗುವುದು. ಹೊರ ತಾಲೂಕುಗಳಿಂದ ಆಗಮಿಸುವ ಸಿಬ್ಬಂದಿಗಳಿಗೆ ಆಯಾ ತಾಲೂಕು ಕೇಂದ್ರಗಳಿಂದ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಚುನಾವಣಾ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ: ಚುನಾವಣಾ ಪ್ರಕ್ರಿಯೆಯಲ್ಲಿ ನಿಯೋಜಿತ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯವಾದ ವಾಹನ ಸೌಲ್ಯ ಮಾಡಲಾಗಿದ್ದು, ಇದಕ್ಕಾಗಿ 37 ಬಸ್‌ಗಳನ್ನು, 28 ವ್ಯಾನ್‌ಗಳನ್ನು ಬಳಸಲಾಗುವುದು. ಹೊರ ತಾಲೂಕುಗಳಿಂದ ಆಗಮಿಸುವ ಸಿಬ್ಬಂದಿಗಳಿಗೆ ಆಯಾ ತಾಲೂಕು ಕೇಂದ್ರಗಳಿಂದ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಮತಯಂತ್ರಗಳ ತಯಾರಿ: ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿರುವ 12 ಅ್ಯರ್ಥಿಗಳು ಸೇರಿದಂತೆ ಕ್ಯಾಂಡಿಡೇಟ್ ಸೆಟ್ಟಿಂಗ್ ಕಾರ್ಯವನ್ನು ಎ.10ರಂದು ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿ ನಲ್ಲಿ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್ ಹಾಗೂ ಅಭ್ಯರ್ಥಿಗಳ ಸಮ್ಮುಖ ದಲ್ಲಿ ನಡೆಸಿದ ಬಳಿಕ ಬಿಗು ಪೊಲೀಸ್ ಬಂದೋಬಸ್ತಿನೊಂದಿಗೆ ದ್ರತಾ ಕೊಠಡಿಯಲ್ಲಿ ದಾಸ್ತಾನು ಇರಿಸಲಾಗಿದೆ.
ಮಾದರಿ ನೀತಿ ಸಂಹಿತೆ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ರೆವಿನ್ಯೂ ಸೆಕ್ಟರ್ ಅಧಿಕಾರಿಗಳ ಹಾಗೂ 30 ಪೊಲೀಸ್ ಸೆಕ್ಟರ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಕ್ಷೇತ್ರದಲ್ಲಿ 3 ಫ್ಲೈಯಿಂಗ್ ಸ್ಕ್ವಾಡ್‌ನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲೂ ತಲಾ 3ರಂತೆ ಒಟ್ಟು 9 ಅಧಿಕಾರಿಗಳಿದ್ದು, ಈ ತಂಡಗಳು ದಿನದ 24ಗಂಟೆಯೂ ಕಾರ್ಯಾಚರಿಸುತ್ತಿದೆ. ತಂಡದಲ್ಲಿ ಒಬ್ಬ ಅಧಿಕಾರಿ ಪೊಲೀಸ್ ಹಾಗೂ ವೀಡಿಯೋ ಗ್ರಾಪರ್ ಒಳಗೊಂಡಿದ್ದಾರೆ.
ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಏಕ ಗವಾಕ್ಷಿ ಕೇಂದ್ರ ತೆರೆಯ ಲಾಗಿದ್ದು, ಇದರಲ್ಲಿ ವಿವಿಧ ಸಭೆ/ ಸಮಾರಂಭಗಳನ್ನು ನಡೆಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ನಿಯಮಾನುಸಾರ ಅನುಮತಿ ನೀಡಲಾ ಗುತ್ತದೆ. ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಲೆಕ್ಕ ಪತ್ರ ಪರಿಶೀಲನೆ ತಂಡವನ್ನು ರಚಿಸಲಾಗಿದೆ.
ಚುನಾವಣಾ ದ್ರತೆ: ಚುನಾವಣಾ ಸಂಬಂಧ ಅಗತ್ಯ ರಕ್ಷಣಾ ತುಕಡಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, ವಿಶೇಷವಾಗಿ ವನ್ಯ ಮೃಗಗಳ ಉಪಟಳವಿರುವಲ್ಲಿ ಅಗತ್ಯ ಅರಣ್ಯ ಇಲಾಖೆಯ ರಕ್ಷಣಾ ತಂಡವನ್ನು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ದ್ರತಾ ಪಡೆಗಳನ್ನು ಬಳಸಿಕೊಳ್ಳಲಾಗಿದೆ.
ಎಲ್ಲಾ ಅರ್ಹ ಮತದಾರರಿಗೆ ಭಾವಚಿತ್ರವಿರುವ ವೋಟರ್ ಸ್ಲಿಪ್ ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಮತದಾರರಿಗೆ ಮತದಾರರ ಗುರುತು ಚೀಟಿ ಹಂಚುವ ಪ್ರಕ್ರಿಯೆಯು ಪೂರ್ಣಗೊಂಡಿದೆ. ಚುನಾವಣಾ ಸಂಬಂಧ ಮಸ್ಟರಿಂಗ್ ಕಾರ್ಯವನ್ನು ಎ.17ರಂದು ಹಾಗೂ ಡಿಮಸ್ಟರಿಂಗ್ ಕಾರ್ಯವನ್ನು ಎ.18ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ನಡೆಸಲಾಗುವುದು.
ಎ.18ರಂದು ನಡೆಯುವ ಉಡುಪಿ - ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಕುಂದಾಪುರ ಸರ್ವಸನ್ನದ್ಧವಾಗಿರುವುದಾಗಿ ಕುಂದಾಪುರ ವಿಧಾನಸಬಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಎಸ್.ಎಸ್ ಮಧುಕೇಶ್ವರ ಕೆ.ಎಂ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







