ಚುನಾವಣಾ ಅಕ್ರಮ ದೂರು ನೀಡಲು ವ್ಯವಸ್ಥೆ
ಬೆಂಗಳೂರು, ಎ. 10: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಲು ಇ-ಮೇಲ್ ಮತ್ತು ದೂರವಾಣಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪಿಯಲ್ಲಿ C Vigil ನಿರ್ವಹಣೆ ಜೊತೆಗೆ ದಕ್ಷಿಣ ವಲಯದ ನಿಯಂತ್ರಣ ಕೊಠಡಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕರ ದೂರುಗಳ ನಿರ್ವಹಣೆಯನ್ನು ನಿರ್ವಹಿಸಲಾಗಿರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿಯಂತ್ರಣ ಕೊಠಡಿಯಲ್ಲಿ ಸಾರ್ವಜನಿಕರು ಸಾಮಾನ್ಯ ಇ-ಮೇಲ್ ಮತ್ತು ನಿಯಂತ್ರಣ ಕೊಠಡಿಗೆ ದೂರವಾಣಿ ಮೂಲಕ ಸಲ್ಲಿಸಬಹುದು.
ವಿಳಾಸ: ಅಪರ ಆಯುಕ್ತರು(ದಕ್ಷಿಣ) ಮತ್ತು ಜಿಲ್ಲಾ ಚುನಾವಣಾಧಿಕಾರಿ(ದಕ್ಷಿಣ)ಗಳ ಕಚೇರಿ, 9ನೆ ಅಡ್ಡರಸ್ತೆ, 9ನೆ ಮುಖ್ಯರಸ್ತೆ, ಜಯನಗರ 2ನೆ ಬಡಾವಣೆ, ಬೆಂಗಳೂರು-11. ದೂರವಾಣಿ ಸಂಖ್ಯೆ-080-26566362. ಇ-ಮೇಲ್ ವಿಳಾಸ:deobangalore.south@gmail.com, compilance.bangalore south@gmail.com ಗೆ ನೀಡಬಹುದು ಎಂದು ಪ್ರಕಟಣೆ ಕೋರಿದೆ.
Next Story