ಸಮಸ್ತ ಪಬ್ಲಿಕ್ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 8607 ಪರೀಕ್ಷಾರ್ಥಿಗಳು
ಮಂಗಳೂರು : ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಮದರಸಗಳ ಪಬ್ಲಿಕ್ ಪರೀಕ್ಷೆಯು ಎ.14 ರಂದು ಆರಂಭಗೊಳ್ಳಲಿದೆ.
ಕೇರಳದ ಚೇಳಾರಿ ಕೇಂದ್ರ ಸ್ಥಾನವಾಗಿ ಕಾರ್ಯಚರಿಸುವ ಸಮಸ್ತ ಸಿಲೆಬಸ್ ಕ್ರಮದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೊಲ್ಲಿ ರಾಷ್ಟ್ರಗಳ ಮದರಸಗಳು ನೊಂದಾವಾಣೆಯಾಗಿದ್ದು ಎಲ್ಲೆಡೆ ಏಕಕಾಲಕ್ಕೆ ಪಬ್ಲಿಕ್ ಪರೀಕ್ಷೆ ನಡೆಯಲಿದೆ.
ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳಿಗಾಗಿ ನಡೆಯುವ ಪಬ್ಲಿಕ್ ಪರೀಕ್ಷೆಗೆ ಎರಡು ಲಕ್ಷದ ನಲುವತ್ತೊಂದು ಸಾವಿರದ ಎಂಟುನೂರ ಐದು ವಿದ್ಯಾರ್ಥಿಗಳು ಅಪೇಕ್ಷಾರ್ಥಿಗಳಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಲ್ಕಿ, ಮಂಗಳೂರು, ಮಿತ್ತಬೈಲು, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ, ಸೇರಿದಂತೆ ಆರು ಡಿವಿಷನ್ ಕೇಂದ್ರಗಳಿದ್ದು ಉಮರ್ ದಾರಿಮಿ ಸಾಲ್ಮರ, ಉಮರುಲ್ ಫಾರೂಖ್ ದಾರಿಮಿ ತೆಕ್ಕಾರು, ಕಾಸಿಮ್ ಮುಸ್ಲಿಯಾರ್ ಮಠ, ಹನೀಫ್ ಮುಸ್ಲಿಯಾರ್ ಬೊಳಂತೂರ್, ರಶೀದ್ ಮೌಲವಿ, ರಫೀಖ್ ದಾರಿಮಿ ಪರೀಕ್ಷಾ ಡಿವಿಶನ್ ಅಧೀಕ್ಷರಾಗಿದ್ದು ಎ. 12 ರಂದು 3 ಗಂಟೆಗೆ ಮಂಗಳೂರು ಡಿವಿಷನ್ ಮತ್ತು ಉಳಿದ ಡಿವಿಷನ್ ಕೇಂದ್ರಗಳಲ್ಲಿ ಶನಿವಾರ ಅಪರಾಹ್ನ ಮೂರು ಗಂಟೆಗೆ ಪರೀಕ್ಷಾ ಮೇಲ್ವಿಚಾರಕರಿಗೆ ಮಾಹಿತಿ ಶಿಬಿರ ಹಾಗೂ ಪರೀಕ್ಷಾ ಪರಿಕರಗಳ ವಿತರಣೆ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಐದನೇ ತರಗತಿಯಲ್ಲಿ 4541 ವಿದ್ಯಾರ್ಥಿಗಳು ಏಳನೇ ತರಗತಿಯಲ್ಲಿ 3321 ವಿದ್ಯಾರ್ಥಿಗಳು, ಹತ್ತನೇ ತರಗತಿಯಲ್ಲಿ 690, ಪ್ಲಸ್‍ಟು ಕ್ಲಾಸ್‍ನಲ್ಲಿ 55ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8607 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮದರಸ ಮೆನೇಜ್‍ಮೆಂಟ್ ಸಮಿತಿಯು ಪರೀಕ್ಷಾ ಮಾಹಿತಿ ಶಿಬಿರ ಹಾಗೂ ಪರೀಕ್ಷಾ ಕೊಠಡಿಗಳ ಸಂದರ್ಶನದ ಪೂರ್ವ ತಯಾರಿ ಗಳನ್ನು ಮಾಡಿದ್ದು ಪರೀಕ್ಷಾ ಸಮಯದಲ್ಲಿ ಆಯಾ ಆಡಳಿತ ಸಮಿತಿ ಪ್ರತಿನಿಧಿಗಳು ಪರೀಕ್ಷಾ ಕೇಂದ್ರದ ಬಳಿ ಹಾಜರಿದ್ದು ಪರೀಕ್ಷಾ ಮೇಲ್ವಿಚಾರಕರಿಗೆ ನೆರವಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮದರೆಸ ಮೆನೇಜ್‍ಮೆಂಟ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ರಫೀಕ್ ಕೊಡಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ .







