ಪಾಕ್‌ಗೆ ನೀಡುವ ನೆರವಿನ ಮರುಪರಿಶೀಲನೆ: ಅಮೆರಿಕ

ವಾಶಿಂಗ್ಟನ್, ಎ. 12: ಪಾಕಿಸ್ತಾನಕ್ಕೆ ತಾನು ನೀಡುತ್ತಿರುವ ನೆರವನ್ನು ಅಮೆರಿಕ ಮರುಪರಿಶೀಲನೆ ನಡೆಸುತ್ತಿದೆ ಹಾಗೂ ಅದು ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಸಂಸದರಿಗೆ ಹೇಳಿದ್ದಾರೆ.
ಪಾಕಿಸ್ತಾನವು ‘ಸುಳ್ಳುಗಳು ಮತ್ತು ವಂಚನೆ’ಯನ್ನಲ್ಲದೆ ಅಮೆರಿಕಕ್ಕೆ ಬೇರೇನನ್ನೂ ನೀಡಿಲ್ಲ ಹಾಗೂ ಅದು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ತಾಣವನ್ನು ನೀಡುತ್ತಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವರ್ಷ ಆರೋಪಿಸಿದಂದಿನಿಂದ ಉಭಯ ದೇಶಗಳ ಸಂಬಂಧ ಪಾತಾಳಕ್ಕೆ ಇಳಿದಿದೆ.
‘‘ಪಾಕಿಸ್ತಾನಕ್ಕೆ ನಾವು ನೀಡುತ್ತಿರುವ ನೆರವಿನ ಮರುಪರಿಶೀಲನೆ ನಡೆಯುತ್ತಿದೆ. ಅದು ಶೀಘ್ರವೇ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಮುಂದೇನಾಗುತ್ತದೆ ಎಂಬುದನ್ನು ನಾವು ಮತ್ತೆ ನಿಮಗೆ ವರದಿ ಮಾಡುತ್ತೇವೆ’’ ಎಂದು ಯುಎಸ್‌ಏಡ್ ಆಡಳಿತಾಧಿಕಾರಿ ಮಾರ್ಕ್ ಗ್ರೀನ್, ಹೌಸ್ ವಿದೇಶ ವ್ಯವಹಾರಗಳ ಸಮಿತಿಯ ಸದಸ್ಯರಿಗೆ ಗುರುವಾರ ತಿಳಿಸಿದರು.
Next Story