ಮಂಗಳ ಗ್ರಹದ ಮೊದಲ ಮಣ್ಣಿನ ಮಾದರಿ ಪಡೆದ ‘ಕ್ಯೂರಿಯಾಸಿಟಿ’

ವಾಶಿಂಗ್ಟನ್, ಎ.13: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಮಂಗಳ ಗ್ರಹ ಶೋಧಕ ನೌಕೆ‘ಕ್ಯೂರಿಯಾಸಿಟಿ’ಯು ಗ್ರಹದ ಮೌಂಟ್ ಶಾರ್ಪ್ ನಲ್ಲಿರುವ ‘ಮಣ್ಣಿನ ಭಾಗ’ದಿಂದ ಮೊದಲ ಮಾದರಿಯನ್ನುಪಡೆದುಕೊಂಡಿದೆ.
ಎಪ್ರಿಲ್ 6ರಂದು, ಅಂದರೆ ಮಂಗಳ ಗ್ರಹಕ್ಕೆ ಕಾಲಿಟ್ಟ 2,370ನೇ ದಿನದಂದು ಶೋಧಕ ನೌಕೆಯು ಈ ಭಾಗದತಳದಿಂದ ತುಂಡೊಂದನ್ನುಕೊರೆಯಿತು ಹಾಗೂ ಅದನ್ನು ಬುಧವಾರ ತನ್ನ ಆಂತರಿಕ ಖನಿಜಪ್ರಯೋಗಾಲಯಕ್ಕೆ ಕಳುಹಿಸಿತು ಎಂದು ನಾಸಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಶೋಧಕದ ಕೊರೆಯುವ ಸಲಕರಣೆಯು ಸುಲಭವಾಗಿ ಬಂಡೆಯನ್ನು ಕೊರೆಯಿತು. ಅದು ಎಷ್ಟೊಂದು ಮೆದುವಾಗಿತ್ತು ಎಂದರೆ, ಡ್ರಿಲ್ ತನ್ನ ‘ಪರ್ಕಸಿವ್’ ತಂತ್ರವನ್ನು ಬಳಸುವ ಅವಶ್ಯಕತೆಬೀಳಲಿಲ್ಲ ಎಂದು ನಾಸಾ ಹೇಳಿದೆ. ಕ್ಯೂರಿಯಾಸಿಟಿ ನೌಕೆಯು 2012ರಲ್ಲಿ ಮಂಗಳ ಗ್ರಹದಮೇಲೆ ಇಳಿದಿದೆ.
Next Story