Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ15 April 2019 12:01 AM IST
share
ಓ ಮೆಣಸೇ…

 ಜನಪರ ಹೋರಾಟ ಮಾಡಿರುವುದಕ್ಕೆ ನನ್ನ ಮೇಲೆ ಕೇಸು ದಾಖಲು - ನಳಿನ್‌ಕುಮಾರ್ ಕಟೀಲು, ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ
  ಮಂಗಳೂರಿಗೆ ಬೆಂಕಿ ಹಚ್ಚುವುದು ಜನಪರ ಹೋರಾಟದ ಭಾಗವೇ ಇರಬೇಕು. 

---------------------
  ನನ್ನ ಗೆಲ್ಲಿಸಿ, ನಿಮ್ಮನೆಗೆ ಬಾಡೂಟಕ್ಕೆ ಬರುವೆ -ಸುಮಲತಾ ಅಂಬರೀಷ್, ಮಂಡ್ಯ ಲೋಕಸಭಾ ಅಭ್ಯರ್ಥಿ
  ಗೆಲ್ಲಿಸಿದ ಬಳಿಕ ಬಾಡೂಟವೂ ಕೊಡಬೇಕೇ?

---------------------
ಕಾಂಗ್ರೆಸ್ ಪ್ರಣಾಳಿಕೆ ದೇಶಕ್ಕೆ ಅಪಾಯಕಾರಿ - ಶೋಭಾ ಕರಂದ್ಲಾಜೆ, ಉಡುಪಿ - ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ
ಸದ್ಯಕ್ಕೆ ನಿಮ್ಮ ನಾಲಿಗೆ ಯಡಿಯೂರಪ್ಪರ ಪಾಲಿಗೆ ಮುಳುವಾಗಿದೆ.

---------------------

ಮೋದಿ ಹೃದಯಹೀನ ಪ್ರಧಾನಿ - ಕುಮಾರಸ್ವಾಮಿ, ಮುಖ್ಯಮಂತ್ರಿ
ಪ್ರಧಾನಿಯಾಗಲು ಅದುವೇ ಅರ್ಹತೆಯಂತೆ.

---------------------

ಸಮ್ಮಿಶ್ರ ಸರಕಾರದ್ದು ಬಲವಂತದ ಮದುವೆ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ವಧುವನ್ನು ನಿಮ್ಮಿಂದ ಅಪಹರಿಸಿದ ದುಃಖ ಇನ್ನೂ ಮುಗಿದಂತಿಲ್ಲ.

---------------------
ಕೇಂದ್ರದಲ್ಲಿ ಬಿಜೆಪಿ ಗೆದ್ದರೆ ಬಜರಂಗದಳ ವಿಸ್ತರಣೆಗೆ ಬದ್ಧ - ಸುನೀಲ್‌ಕುಮಾರ್, ಶಾಸಕ
ಬಜರಂಗದಳ ಅಂದರೆ ಅರ್ಧದಲ್ಲಿ ನಿಂತ ಪಂಪ್‌ವೆಲ್‌ನ ಫ್ಲೈ ಓವರ್‌ಬ್ರಿಡ್ಜ್‌ನ ಇನ್ನೊಂದು ಹೆಸರೇ?

---------------------

ಸಿಎಂ ಕುಮಾರಸ್ವಾಮಿ ಎರಡು ತಲೆ ಹಾವು - ಶೋಭಾ ಕರಂದ್ಲಾಜೆ, ಉಡುಪಿ - ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ
ಎರಡು ನಾಲಗೆಗಿಂತ ವಾಸಿ.

---------------------
ಬಿಜೆಪಿ ಸಿದ್ಧ್ದಾಂತ ಒಪ್ಪದವರು ದೇಶ ದ್ರೋಹಿಗಳಲ್ಲ - ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ
ತಾವು ದೇಶದ್ರೋಹಿಯಲ್ಲ ಎನ್ನುವುದನ್ನು ಈ ಮೂಲಕ ಹೇಳಿಕೊಂಡಿದ್ದೀರಿ.

---------------------
ಮಂಡ್ಯ ಜನರ ಕೈಯಲ್ಲಿ ನನ್ನ ಹಣೆಬರಹ - ಸುಮಲತಾ ಅಂಬರೀಷ್, ಮಂಡ್ಯ ಲೋಕಸಭಾ ಅಭ್ಯರ್ಥಿ
ಮಂಡ್ಯದ ಜನರ ಹಣೆಬರಹ ಯಾರ ಕೈಯಲ್ಲಿದೆಯೋ?

---------------------

ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ತೋಡಿದ್ದಾರೆ ಖೆಡ್ಡಾ - ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಆದರೆ ಅದರಲ್ಲಿ ಹೋಗಿ ಬಿಜೆಪಿಯೇಕೆ ಬಿದ್ದದ್ದು?

---------------------

ಪದವಿ ಇಲ್ಲದಿದ್ದರೂ ಪಕ್ಷಕ್ಕೆ ದುಡಿಯುತ್ತೇನೆ - ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಪದವಿ ತ್ಯಜಿಸುವುದೇ ನೀವು ಪಕ್ಷಕ್ಕೆ ಮಾಡುವ ಅತಿ ದೊಡ್ಡ ಉಪಕಾರವಂತೆ.

---------------------

ವಂಶ ರಾಜಕಾರಣ ಚರ್ಚೆಯಾಗಲಿ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಕೊನೆಯಾಗಲಿ ಎಂದಿದ್ದರೆ ಅರ್ಥಪೂರ್ಣವಾಗುತ್ತಿತ್ತು.

---------------------

ದಕ್ಷಿಣ ಭಾರತದಲ್ಲಿ ಕರ್ನಾಟಕದ ಕರಾವಳಿ ಬಿಜೆಪಿಯ ಗರ್ಭಗುಡಿ - ತಾರಾ, ವಿಧಾನ ಪರಿಷತ್ ಸದಸ್ಯೆ
ಮುಟ್ಟಾದವರು ಪ್ರವೇಶಿಸಬಾರದಂತೆ.

---------------------

ರಾಜಕೀಯ ಬದಲಾವಣೆಗೆ ಪ್ರಯತ್ನ ಅಗತ್ಯ - ಉಪೇಂದ್ರ, ನಟ
ಒಂದು ಹೊಸ ಸಿನೆಮಾ ಮಾಡಿ ಅದರೊಳಗೆ ರಾಜಕೀಯವನ್ನು ಬದಲಾಯಿಸಿ. 

---------------------
ಸಂಸತ್ತಿನಲ್ಲಿ ಮಾತನಾಡದವರು ಬಿಜೆಪಿ ಅಭ್ಯರ್ಥಿ - ಇಲ್ಯಾಸ್ ತುಂಬೆ, ದ.ಕ. ಲೋಕಸಭಾ ಎಸ್‌ಡಿಪಿಐ ಅಭ್ಯರ್ಥಿ
ಸದ್ಯಕ್ಕೆ ಬೀದಿಯಲ್ಲಿ ಮಾತನಾಡುವವನೇ ಮಹಾ ಶೂರ.

---------------------

ಸೇನೆ ಮೋದಿಯದ್ದು ಎಂಬಾತ ದೇಶದ್ರೋಹಿ - ವಿ.ಕೆ.ಸಿಂಗ್, ಕೇಂದ್ರ ಸಚಿವ
ಆ ದೇಶದ್ರೋಹಿಗಳ ಜೊತೆಗೆ ನಿಮಗೇನು ಕೆಲಸ?

---------------------

ಕಾಂಗ್ರೆಸ್ ಪ್ರಣಾಳಿಕೆ ಪಾಕ್‌ಗೆ ಪೂರಕ - ಪ್ರಹ್ಲಾದ್ ಜೋಶಿ, ಸಂಸದ
ಬಿಜೆಪಿ ಪ್ರಣಾಳಿಕೆಯನ್ನು ಇಮ್ರಾನ್ ಖಾನ್ ಸಿದ್ಧಪಡಿಸಿರುವ ಕುರಿತಂತೆ ವದಂತಿಗಳಿವೆ.

---------------------

ನಾನು, ಡಿಕೆಶಿ ಇರುವವರೆಗೆ ಸರಕಾರಕ್ಕಿಲ್ಲ ಆಪತ್ತು - ಕುಮಾರಸ್ವಾಮಿ, ಮುಖ್ಯಮಂತ್ರಿ
ಆಪತ್ತುಗಳೆಲ್ಲ ಜನರಿಗೆ.

---------------------

ಬಿಜೆಪಿ ಗೆದ್ದರೆ ಭಾರತದ ಜತೆ ಮಾತುಕತೆ ಸಾಧ್ಯ - ಇಮ್ರಾನ್‌ಖಾನ್, ಪಾಕಿಸ್ತಾನ ಪ್ರಧಾನಿ
ತಮ್ಮ ಹೆಸರಿನ ಹಿಂದೆ ಚೌಕಿದಾರ್ ಎಂದು ಬರೆದುಕೊಳ್ಳಬಹುದಲ್ಲ?
---------------------

ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರ ವಿರೋಧವಿಲ್ಲ - ಝಮೀರ್ ಅಹ್ಮದ್ ಖಾನ್, ಸಚಿವ
ಮುಸ್ಲಿಮರ ವಿರೋಧ ಏನಿದ್ದರೂ ನಿಮ್ಮ ವಿರುದ್ಧ ಮಾತ್ರ.

---------------------

ಹಿಂದೂಗಳು, ಬೌದ್ಧರನ್ನು ಹೊರತುಪಡಿಸಿ ಎಲ್ಲ ನುಸುಳುಕೋರರನ್ನು ಹೊರದಬ್ಬುತ್ತೇವೆ - ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ಆರ್ಯರನ್ನು ಹೊರದಬ್ಬುವುದಕ್ಕೆ ಆರೆಸ್ಸೆಸ್ ಅನುಮತಿ ಕೊಟ್ಟೀತೆ?

---------------------

ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ - ಎಚ್.ಡಿ.ರೇವಣ್ಣ , ಸಚಿವ
ನೀವು ನಿವೃತ್ತಿಯಾಗುವುದಾದರೆ ನಾವು ಮೋದಿಯನ್ನು ಪ್ರಧಾನಿ ಮಾಡಲು ಸಿದ್ಧ ಎಂದರಂತೆ ಜನತೆ.

---------------------

ಮೋದಿ ಹೆಸರಲ್ಲಿ ಮತ ಕೇಳಲು ಸಂಕೋಚ ಇಲ್ಲ - ಮಾಳವಿಕಾ, ಬಿಜೆಪಿ ಸದಸ್ಯೆ
ಬಿಜೆಪಿಗೆ ಸೇರಿದ ಮೇಲೆ ಸಂಕೋಚಕ್ಕೆಲ್ಲಿ ಜಾಗ?

---------------------

ಕಲ್ಲೆಸೆದು ನನ್ನ ಮೇಲೆ ಗೂಬೆ ಕೂರಿಸುತ್ತಾರೆ - ಕುಮಾರಸ್ವಾಮಿ, ಮುಖ್ಯಮಂತ್ರಿ
ಕೂರಿಸಿದ ಗೂಬೆಯನ್ನು ಓಡಿಸುವುದಕ್ಕಾಗಿ ಕಲ್ಲೆಸೆದಿರಬೇಕು.

share
ಪಿ.ಎ.ರೈ
ಪಿ.ಎ.ರೈ
Next Story
X