ಪಿಯುಸಿ ಫಲಿತಾಂಶ: ಮತ್ತೆ ಅಗ್ರಸ್ಥಾನಕ್ಕೇರಿದ ಉಡುಪಿ ಜಿಲ್ಲೆ
ಉಡುಪಿ, ಎ.15: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶ ದಲ್ಲಿ ಉಡುಪಿ ಜಿಲ್ಲೆ ಮತ್ತೊಮ್ಮೆ ರಾಜ್ಯದ ಅಗ್ರಗಣ್ಯ ಜಿಲ್ಲೆಯಾಗಿ ಮೂಡಿಬಂದಿದೆ. 2017ರಲ್ಲಿ ಹೊಂದಿದ್ದ ರಾಜ್ಯದ ಅಗ್ರಸ್ಥಾನವನ್ನು ಪಕ್ಕದ ದಕ್ಷಿಣ ಕನ್ನಡಕ್ಕೆ ಬಿಟ್ಟುಕೊಟ್ಟು ದ್ವಿತೀಯ ಸ್ಥಾನಕ್ಕೆ ಜಾರಿದ್ದ ಉಡುಪಿ ಜಿಲ್ಲೆ ಈ ಬಾರಿ ಮತ್ತೆ ಅದನ್ನು ದಕ್ಷಿಣ ಕನ್ನಡದಿಂದ ಕಿತ್ತುಕೊಂಡಿದೆ.
ಈ ಬಾರಿ ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ 7940 ಮಂದಿ ಬಾಲಕರು ಹಾಗೂ 7470 ಬಾಲಕಿಯರು ಸೇರಿದಂತೆ ಒಟ್ಟು 15,410 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ಶೇ.92.20 ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ.90.91 ಉತ್ತೀರ್ಣತೆಯೊಂದಿಗೆ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ.
ಈ ಬಾರಿ ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ 7940 ಮಂದಿ ಬಾಲಕರು ಹಾಗೂ 7470 ಬಾಲಕಿಯರು ಸೇರಿದಂತೆ ಒಟ್ಟು 15,410 ಮಂದಿ ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ಶೇ.92.20 ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ.90.91 ಉತ್ತೀರ್ಣತೆಯೊಂದಿಗೆ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. 2013ರಿಂದ ಪಿಯುಸಿ ಫಲಿತಾಂಶದ ಮೊದಲೆರಡು ಸ್ಥಾನಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಓಲಾಡುತ್ತಿವೆ. 2013ರಲ್ಲಿ ಉಡುಪಿ ಜಿಲ್ಲೆ ಶೇ.86.24 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, 2014ರಿಂದ 2016ರವರೆಗೆ ಸತತ ಮೂರು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ ವನ್ನು ತನ್ನ ಬಳಿ ಉಳಿಸಿಕೊಂಡಿತ್ತು.
ಮೂರು ವರ್ಷಗಳ ಸತತ ಪ್ರಯತ್ನದ ಬಳಿಕ 2017ರಲ್ಲಿ ಶೇ.90.01 ಫಲಿತಾಂಶದೊಂದಿಗೆ ರಾಜ್ಯದ ಅಗ್ರಸ್ಥಾನವನ್ನು ಮರಳಿ ಪಡೆದ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ (89.92)ವನ್ನು ಎರಡನೇ ಸ್ಥಾನಕ್ಕೆ ತಳ್ಳಿತ್ತು. ಇದಕ್ಕೆ ಎದಿರೇಟು ನೀಡಿದ್ದ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆ, 2018ರಲ್ಲಿ ಶೇ.91.49 ಉತ್ತೀರ್ಣತೆ ಯೊಂದಿಗೆ ಉಡುಪಿಯನ್ನು ಮತ್ತೆ (ಶೇ.90.67) ಎರಡನೇ ಸ್ಥಾನಕ್ಕೆ ತಳ್ಳಿತ್ತು. ಇದೀಗ ಈ ಬಾರಿ ಉಡುಪಿ ಜಿಲ್ಲೆ ಮತ್ತೊಮ್ಮೆ ಅ ಗ್ರಸ್ಥಾನವನ್ನು ಮರಳಿ ಪಡೆದಿದೆ.
ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಫಲಿತಾಂಶವನ್ನು ಪ್ರಕಟಿಸುವ ಸಂದರ್ಭದಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ತಲಾ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದು, ಅದರಲ್ಲಿ ವಿಜ್ಞಾನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯವರಾಗಿದ್ದಾರೆ. ಇವರಿಬ್ಬರೂ ತಲಾ 592 ಅಂಕಗಳನ್ನು ಗಳಿಸಿ ಮೂರನೇ ಸ್ಥಾನವನು್ನ ಉಳಿದಿಬ್ಬ ರೊಂದಿಗೆ ಹಂಚಿಕೊಂಡಿದ್ದಾರೆ.
ಹೆಬ್ರಿಯ ಕಿನ್ನಿಗುಡ್ಡೆಯ ಎಸ್‌ಆರ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಿರಿಯಡ್ಕ ಸಮೀಪದ ಪುತ್ತಿಗೆ ನಿವಾಸಿ ರಈಸಾ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಉಡುಪಿ ಅಂಬಾಗಿಲಿನ ಸ್ವಾತಿ ಉಡುಪಿಯಿಂದ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಶೇ.100 ಫಲಿತಾಂಶ: ಆಯಾ ಕಾಲೇಜುಗಳಲ್ಲಿ ನಾಳೆ ಬೆಳಗ್ಗೆ ಅಧಿಕೃತ ಫಲಿತಾಂಶ ಪ್ರಕಟಗೊಂಡ ಬಳಿಕವಷ್ಟೇ ಜಿಲ್ಲೆಯ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕಲಿದ್ದು, ಈವರೆಗೆ ದೊರೆತಿರುವ ಪ್ರಾಥಮಿಕ ಮಾಹಿತಿಯಂತೆ ಜಿಲ್ಲೆಯ ಮೂರು ಸರಕಾರಿ ಪ.ಪೂ.ಕಾಲೇಜುಗಳು ಸೇರಿದಂತೆ ಒಟ್ಟು ಹತ್ತು ಕಾಲೇಜು ಗಳು ಶೇ.100 ಫಲಿತಾಂಶವನ್ನು ಪಡೆದಿವೆ ಎಂದು ಡಿಡಿಪಿಯು ಸುಬ್ರಹ್ಮಣ್ಯ ಜೋಶಿ ತಿಳಿಸಿದ್ದಾರೆ.
ಸರಕಾರಿ ಪ.ಪೂ.ಕಾಲೇಜು ಮುದರಂಗಡಿ, ಸರಕಾರಿ ಪ. ಪೂ.ಕಾಲೇಜು ಪಲಿಮಾರು ಹಾಗೂ ಸರಕಾರಿ ಪ.ಪೂ.ಕಾಲೇಜು ಕುಕ್ಕುಜೆ ಶೇ.100 ಫಲಿತಾಂಶ ಪಡೆದಿರುವ ಮಾಹಿತಿ ಇದೆ ಎಂದ ಅವರು, ಇದರೊಂದಿಗೆ ಉಡುಪಿಯ ವಿದ್ಯೋದಯ ಪ.ಪೂ.ಕಾಲೇಜು, ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಅಲ್ ಇಹ್ಸಾನ್ ಪದವಿ ಪೂರ್ವ ಕಾಲೇಜು ಮೂಳೂರು, ಕ್ರೈಸ್ಟ್ ಕಿಂಗ್ ಪ.ಪೂ.ಕಾಲೇಜು ಕಾರ್ಕಳ, ಗುರುಕೃಪ ಪ.ಪೂ.ಕಾಲೇಜು ಬೊಳ್ಳೊಟ್ಟು, ಎಸ್‌ಎನ್‌ವಿ ಪ.ಪೂ.ಕಾಲೇಜು ಕಾರ್ಕಳ, ವೆಂಕಟರಮಣ ಪ.ಪೂ.ಕಾಲೇಜು ಕುಂದಾಪುರ ಹಾಗೂ ಮದರ ಥೆರೆಸಾ ಪ.ಪೂ.ಕಾಲೇಜು ಶಂಕರನಾರಾಯಣ ಇವುಗಳ ಸಹ ಶೇ.100 ಫಲಿತಾಂಶ ಡೆದಿರುವ ಮಾಹಿತಿ ಬಂದಿದೆ ಎಂದರು.
ಸಾಮೂಹಿಕ ಪ್ರಯತ್ನದ ಫಲ: ಜಿಲ್ಲೆಯ ಈ ಬಾರಿಯ ಸಾಧನೆ ಸಂಬಂಧಿತ ಎಲ್ಲರ ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಸುಬ್ರಹ್ಮಣ್ಯ ಜೋಶಿ ತಿಳಿಸಿದರು. ಜಿಲ್ಲೆಯ ಪ.ಪೂ.ಕಾಲೇಜುಗಳ ಪ್ರಾಂಶುಪಾಲರ ಸಂಘ ವಿಶೇಷ ಮುತುವರ್ಜಿ ವಹಿಸಿ ಮೂರು ಸಿದ್ಧತಾ ಪರೀಕ್ಷೆಗಳನ್ನು (ಪ್ರಿಪರೇಟರಿ ಎಕ್ಸಾಂ) ನಡೆಸಿದ್ದರು.ಕೆಲವು ಕಾಲೇಜುಗಳವರು ಇನ್ನೂ ಹೆಚ್ಚಿನ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದರು ಎಂದರು.
ಇದರೊಂದಿಗೆ ಎಲ್ಲಾ ಕಾಲೇಜುಗಳಲ್ಲಿ ಸಿಲೆಬಸ್‌ಗಳನ್ನು ನಿಗದಿತ ಸಮಯದೊಳಗೆ ಮುಗಿಸುವಂತೆ ನೋಡಿಕೊಳ್ಳಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ್ದರೆ, ಅನುದಾನಿತ ಹಾಗೂ ಸರಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆ, ಅತಿಥಿ ಉಪನ್ಯಾಸಕರ ನೇಮಕ ಮಾಡಿ ಪಠ್ಯಕ್ರಮಗಳಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಲಾಗಿತ್ತು ಎಂದರು.
ಅಲ್ಲದೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಾಲಕರನ್ನು ಕರೆಸಿ ಸಭೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ವಿಶೇಷ ಕಾರ್ಯಾಗಾರ ನಡೆಸಿದ್ದು ಸಹ ಪರಿಣಾಮ ಬೀರಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ರಜೆಯಲ್ಲಿ ವಿಶೇಷ ತರಗತಿಗಳನ್ನು ಸಹ ನಡೆಸಲಾಗಿತ್ತು. ವಿಜ್ಞಾನ ವಿಭಾಗದ (ಪಿಸಿಎಂಬಿ) ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ತಾಂತ್ರಿಕ ಆಧಾರಿತ ಕಲಿಕೆ ಯೋಜನೆಯನ್ನ್ನು ಜಾರಿಗೊಳಿಸಲಾಗಿತ್ತು. ಇವುಗಳೊಂದಿಗೆ ಅವರಿಗೆ ಕಾಲೇಜುಗಳಲ್ಲೇ ನೀಟ್, ಜೆಇಇ, ಸಿಇಟಿ ತರಬೇತಿಗಳನ್ನು ಸಹ ವ್ಯವಸ್ಥೆ ಮಾಡಿದ್ದು, ವಿಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲವಾಯಿತು ಎಂದು ಜೋಶಿ ಹೇಳಿದರು.







