Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಿಯುಸಿ ಪರೀಕ್ಷೆ: ವಿಜ್ಞಾನ ವಿಭಾಗದಲ್ಲಿ...

ಪಿಯುಸಿ ಪರೀಕ್ಷೆ: ವಿಜ್ಞಾನ ವಿಭಾಗದಲ್ಲಿ ಉಡುಪಿಯ ಸ್ವಾತಿ ರಾಜ್ಯಕ್ಕೆ ಮೂರನೆ ರ್ಯಾಂಕ್

‘ಇಂಜಿನಿಯರ್ ಆಗಬೇಕೆಂಬುದೇ ನನ್ನ ಕನಸು’

ವಾರ್ತಾಭಾರತಿವಾರ್ತಾಭಾರತಿ15 April 2019 9:27 PM IST
share
ಪಿಯುಸಿ ಪರೀಕ್ಷೆ: ವಿಜ್ಞಾನ ವಿಭಾಗದಲ್ಲಿ ಉಡುಪಿಯ ಸ್ವಾತಿ ರಾಜ್ಯಕ್ಕೆ ಮೂರನೆ ರ್ಯಾಂಕ್

ಉಡುಪಿ, ಎ.15: ಈ ಬಾರಿಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗ ದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ 592(ಶೇ.98.66) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೆ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅಂಬಾಗಿಲು ಮಹಾಲಕ್ಷ್ಮೀ ನಗರದ ಉದಯ ಶಂಕರ್ ನಾಯಕ್ ಹಾಗೂ ಗಿರಿಜಾ ನಾಯಕ್ ದಂಪತಿ ಪುತ್ರಿ ಸ್ವಾತಿ, ಇಂಗ್ಲಿಷ್‌ನಲ್ಲಿ 96, ಹಿಂದಿಯಲ್ಲಿ 98, ಭೌತಶಾಸ್ತ್ರದಲ್ಲಿ 99, ಗಣಿತದಲ್ಲಿ 100, ರಸಾಯನಶಾಸ್ತ್ರದಲ್ಲಿ 100, ಕಂಪ್ಯೂಟರ್ ಸೈಯನ್ಸ್ ನಲ್ಲಿ  99 ಅಂಕಗಳನ್ನು ಪಡೆದಿದ್ದಾರೆ.

ಉಡುಪಿ ಸಂತೆಕಟ್ಟೆಯ ಮೌಂಟ್ ರೋಸರಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಎಸೆಸೆಲ್ಸಿಯಲ್ಲಿ 618(ಶೇ.98.88) ಅಂಕಗಳಿಸಿದ್ದರು. ಉದಯ ಶಂಕರ್ ಬೆಂಗಳೂರಿನ ಗಾಂಧಿನಗರ ಸಿಂಡಿಕೇಟ್ ಬ್ಯಾಂಕಿನಲ್ಲಿ ಮೆನೇಜರ್ ಆಗಿದ್ದು, ತಾಯಿ ಗಿರಿಜಾ, ಕುಂಜಿಬೆಟ್ಟು ಯುಪಿ ಎಂಸಿ ಕಾಲೇಜಿನಲ್ಲಿ ಕ್ಲರ್ಕ್ ಆಗಿ ದುಡಿಯುತ್ತಿದ್ದಾರೆ. ಸ್ವಾತಿ ಅಕ್ಕ ಶ್ವೇತಾ ಬಂಟಕಲ್ ಶ್ರೀಮಧ್ವ ವಾದಿರಾಜ ಇಂಜಿನಿಯರ್ ಕಾಲೇಜಿನಲ್ಲಿ ಮೂರನೆ ವರ್ಷದ ಕಂಪ್ಯೂಟರ್ ಸೈಯನ್ಸ್ ಕಲಿಯುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ವಾತಿ, ದೇವರ ದಯೆ, ತಂದೆ ತಾಯಿ, ಅಕ್ಕ, ಗೆಳೆಯರು, ಉಪನ್ಯಾಸಕರುಗಳ ಪ್ರೋತ್ಸಾಹದಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಸಿಇಟಿ ಪರೀಕ್ಷೆ ಬರೆದು ಕಂಪ್ಯೂಟರ್ ಸೈಯನ್ಸ್‌ನಲ್ಲಿ ಇಂಜಿನಿಯರ್ ಕಲಿಯಬೇಕೆಂಬ ಆಸೆ ಹೊಂದಿದ್ದೇನೆ. ಮುಂದೆ ಇಂಜಿನಿಯರ್ ಆಗಬೇಕೆಂಬುದೇ ನನ್ನ ಕನಸು ಎಂದು ತಿಳಿಸಿದರು.

ಓದುವ ಮಧ್ಯೆ ಚಿತ್ರಕಲೆ

ಪಿಯುಸಿ ಫಲಿತಾಂಶ ಬೇಗನೆ ಪ್ರಕಟಗೊಂಡಿರುವುದರಿಂದ ಸಿಇಟಿ ಪರೀಕ್ಷೆ ಬರೆಯಲು ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಪೂರ್ವ ತಯಾರಿಗೂ ಅನುಕೂಲ ವಾಗಿದೆ. ಗಣಿತ ನಾನು ತುಂಬಾ ಇಷ್ಟ ಪಡುವ ಸಬ್ಜೆಕ್ಟ್. ಚಿತ್ರಕಲೆ ನನ್ನ ಹವ್ಯಾಸವಾಗಿದ್ದು, ನಿರಂತರ ಓದಿನ ಮಧ್ಯೆ ಬೋರ್ ಆದಾಗ ಮಧ್ಯೆ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ನಂತರ ಮತ್ತೆ ಓದು ಮುಂದುವರಿಸುತ್ತೇನೆ. ಪಠ್ಯದ ಜೊತೆ ಮ್ಯಾಗಝಿನ್, ದಿನಪತ್ರಿಕೆ ಕೂಡ ಓದುತ್ತೇನೆ ಎಂದು ಸ್ವಾತಿ ತಿಳಿಸಿದರು.

595ಕ್ಕಿಂತ ಹೆಚ್ಚು ಅಂಕ ಪಡೆಯುವ ನಿರೀಕ್ಷೆ ಹೊಂದಿದ್ದೆ. ಆರಂಭದಲ್ಲಿ ದಿನಕ್ಕೆ ಒಂದು ಗಂಟೆ, ಮಧ್ಯಾವಧಿಯ ಬಳಿಕ ಪ್ರತಿದಿನ ಮೂರು ಗಂಟೆ, ಪ್ರಿಪ್ರೇಟರಿ ಪರೀಕ್ಷೆಯ ಬಳಿಕ ದಿನಪೂರ್ತಿ ಓದುತ್ತಿದ್ದೆ. ಇದರ ಜೊತೆ ಕೋಚಿಂಗ್ ತರಗತಿಗೂ ಹೋಗುತ್ತಿದ್ದೆ. ರಸಾಯನಶಾಸ್ತ್ರ ಪರೀಕ್ಷೆ ತುಂಬಾ ಕಷ್ಟ ಇದ್ದರೂ ತುಂಬಾ ಓದಿದ ಪರಿಣಾಮವಾಗಿ ಯಾವುದೇ ತೊಂದರೆ ಆಗಿಲ್ಲ. ಈ ರೀತಿ ಓದಿರುವುದರಿಂದ ನನಗೆ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ ಎಂದರು.

ದಿನಕ್ಕೆ ಒಂದು ಗಂಟೆ ಮಾತ್ರ ಟಿವಿ ನೋಡುತ್ತಿದ್ದೆ. ಫೇಸ್‌ಬುಕ್‌ನಲ್ಲಿ ನಾನು ಈವರೆಗೆ ಖಾತೆ ತೆರೆದಿಲ್ಲ. ಆದರೆ ವಾಟ್ಸಾಪ್ ಬಳಕೆ ಮಾಡುತ್ತಿದ್ದೇನೆ. ಪರೀಕ್ಷೆ ಸಮಯದಲ್ಲಿ ಅಧ್ಯಯನಕ್ಕೆ ಸಂಬಂಧಿಸಿ ಮಾತ್ರ ವಾಟ್ಸಾಪ್ ಬಳಕೆ ಮಾಡುತ್ತಿದ್ದೆ. ಅದು ಬಿಟ್ಟು ಗೆಳೆಯರ ಜೊತೆ ಹರಟೆ ಹೊಡೆಯುತ್ತಿರಲಿಲ್ಲ. ಪ್ರತಿದಿನ ಮನೆಯಲ್ಲಿ ದೇವರ ಭಜನೆ ಮಾಡುತ್ತೇನೆ ಎಂದು ಅವರು ಹೇಳಿದರು.

ಕಠಿಣ ಶ್ರಮ ಹಾಗೂ ಟೈಮ್‌ಟೇಬಲ್ ಪ್ರಕಾರ ಪ್ರತಿದಿನ ನಾನು ಓದುತ್ತಿದ್ದೆ. ಪರೀಕ್ಷೆ ಸಂದರ್ಭದಲ್ಲೂ ಯಾವುದೇ ಒತ್ತಡ ಇಲ್ಲದೆ ಕೂಲ್ ಆಗಿ ಇರುತ್ತೇನೆ. ಅದಕ್ಕೆ ತಕ್ಕ ಪ್ರತಿಫಲ ಪರೀಕ್ಷೆಯಲ್ಲಿ ನನಗೆ ಸಿಕ್ಕಿದೆ. ದೇವರ ದಯೆಯಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

‘ನಾವು ಪುಣ್ಯವಂತರು’

‘ಮಗಳ ಈ ಸಾಧನೆ ಕೇಳಿ ತುಂಬಾ ಸಂತೋಷವಾಗಿದೆ. ಇಂತಹ ಮಗಳನ್ನು ಪಡೆದ ನಾವು ನಿಜವಾಗಿಯೂ ಪುಣ್ಯವಂತರು. ನಾನು, ನನ್ನ ಪತಿ ಹಾಗೂ ಮಗಳು ಅವಳಿಗೆ ತುಂಬಾ ಪ್ರೋತ್ಸಾಹ ನೀಡಿದ್ದೇವು. ನಾವು ಯಾರು ಕೂಡ ಅವಳಿಗೆ ಓದುವಂತೆ ಒತ್ತಡ ಹಾಕಿಲ್ಲ. ಅವಳ ಇಷ್ಟದಂತೆ ಓದಿ, ಅವಳ ಪ್ರಯತ್ನ ಫಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಸ್ವಾತಿ ತಾಯಿ ಗಿರಿಜಾ ನಾಯಕ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X