ಸಂತ ಅಲೋಶಿಯಸ್ ಕಾಲೇಜಿಗೆ ಉತ್ತಮ ಫಲಿತಾಂಶ
ಮಂಗಳೂರು, ಎ.15: ನಗರದ ಸಂತ ಅಲೋಶಿಯಸ್ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.98.12 ಫಲಿತಾಂಶ ದಾಖಲಿಸಿದೆ.
ಕಾಲೇಜಿನ 1,916 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 1,880 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.97.48, ವಾಣಿಜ್ಯ ವಿಭಾಗದಲ್ಲಿ ಶೇ.98.85, ಕಲಾ ವಿಭಾಗದಲ್ಲಿ ಶೇ.99 ಫಲಿತಾಂಶ ದಾಖಲಾಗಿದೆ.
526 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿದ್ದು ಸಮಗ್ರವಾಗಿದ್ದು, ಒಟ್ಟಾರೆ ಕಾಲೇಜಿಗೆ ಶೇ.98.12 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಹಲೋನ ಸಾನ್ಸಿಯಾ ದಾಂತಿಸ್ 589, ವಾಣಿಜ್ಯ ವಿಭಾಗದ ಅದಿತಿ ಅಶೋಕ್ ಭಂಡಾರಿ 591, ಕಲಾ ವಿಭಾಗದ ಹಾನ್ನಾ ಪಿ. ಜೈದೀಪ್ 581 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
Next Story





