ಮೊಬೈಲ್ ಖರೀದಿಸಿದ್ದಕ್ಕೆ ಬೈದರೆಂದು ನೇಣಿಗೆ ಶರಣಾದ ಬಾಲಕಿ
ಸಿವನಿ,ಎ.16: ಮೊಬೈಲ್ ಫೋನ್ ಖರೀದಿಸಿದ್ದಕ್ಕಾಗಿ ತಾಯಿ ಬೈದಳೆಂಬ ಕಾರಣಕ್ಕೆ ನೊಂದ 18ರ ಹರೆಯದ ಬಾಲಕಿಯೋರ್ವಳು ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಿಗ್ಗೆ ಮಧ್ಯಪ್ರದೇಶದ ಸಿವನಿ ಜಿಲ್ಲೆಯ ಉಮರವಾಡಾ ಗ್ರಾಮದಲ್ಲಿ ಸಂಭವಿಸಿದೆ.
ಬಾಲಕಿ ಬರೆದಿಟ್ಟಿರುವ ಚೀಟಿಯೊಂದು ಪತ್ತೆಯಾಗಿದ್ದು,ಆಕೆ ಅದರಲ್ಲಿ ತನ್ನ ಕೃತ್ಯಕ್ಕಾಗಿ ತಾಯಿಯ ಕ್ಷಮೆ ಯಾಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದರು.
ಸಾಲ ತೀರಿಸಲೆಂದು ಮನೆಯಲ್ಲಿಟ್ಟಿದ್ದ ಹಣದಿಂದ ಮಗಳು ಮೊಬೈಲ್ ಫೋನ್ ಖರೀದಿಸಿದ್ದಳು ಮತ್ತು ಇದೇ ಕಾರಣಕ್ಕೆ ರವಿವಾರ ತಮ್ಮಿಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ಕೂಲಿ ಕೆಲಸ ಮಾಡುತ್ತಿರುವ ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.
Next Story