ಸೌರಮಂಡಲದ ಹೊರಗೆ ಭೂಮಿ ಗಾತ್ರ ಗ್ರಹ ಪತ್ತೆ
ವಾಶಿಂಗ್ಟನ್, ಎ. 16: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಇತ್ತೀಚಿನ ಗ್ರಹ-ಶೋಧಕ ನೌಕೆಯೊಂದು ಸೌರಮಂಡಲದ ಹೊರಗೆ ಭೂಮಿ ಗಾತ್ರದ ಗ್ರಹವೊಂದನ್ನು ಪತ್ತೆ ಮಾಡಿದೆ.
ಈ ಗ್ರಹವು ಭೂಮಿಯಿಂದ 53 ಜ್ಯೋತಿರ್ವರ್ಷ (ಒಂದು ಜ್ಯೋತಿರ್ವರ್ಷ ಎಂದರೆ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ. ಬೆಳಕಿನ ವೇಗ ಒಂದು ಸೆಕೆಂಡ್ಗೆ 3 ಲಕ್ಷ ಕಿ.ಮೀ.) ದೂರದಲ್ಲಿರುವ ನಕ್ಷತ್ರವೊಂದಕ್ಕೆ ಸುತ್ತು ಬರುತ್ತಿದೆ.
ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ಸ್ ಸರ್ವೇ ಸ್ಯಾಟಲೈಟ್ (ಟಿಇಎಸ್ಎಸ್) ಶೋಧ ನೌಕೆಯು ಇದೇ ನಕ್ಷತ್ರ ವ್ಯೆಹದಲ್ಲಿ ನೆಪ್ಚೂನ್ಗಿಂತಲೂ ಚಿಕ್ಕ ಗಾತ್ರದ ಇನ್ನೊಂದು ಗ್ರಹವನ್ನು ಪತ್ತೆಹಚ್ಚಿದೆ ಎಂದು ‘ಆ್ಯಸ್ಟ್ರೊಫಿಸಿಕಲ್ ಜರ್ನಲ್ ಲೆಟರ್ಸ್’ನಲ್ಲಿ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.
‘‘ಸುಮಾರು ಒಂದು ವರ್ಷದ ಹಿಂದಷ್ಟೇ ಉಡಾವಣೆಗೊಂಡ ಟಿಇಎಸ್ಎಸ್ ಗ್ರಹ ಶೋಧ ಕಾರ್ಯದಲ್ಲಿ ಈಗಾಗಲೇ ಮಹತ್ವದ ಕೆಲಸ ಮಾಡಿರುವುದು ರೋಮಾಂಚಕಾರಿಯಾಗಿದೆ’’ ಎಂದು ಅಮೆರಿಕದ ಕಾರ್ನೇಜೀ ಇನ್ಸ್ಟಿಟ್ಯೂಶನ್ ಫಾರ್ ಸಯನ್ಸ್ನ ಜೊಹಾನಾ ಟೆಸ್ಕ್ ಹೇಳಿದ್ದಾರೆ.
Next Story