ಕೋಲಾರ : 8 ಮಂದಿ ಕಾಂಗ್ರೆಸ್ ಮುಖಂಡರು ಅಮಾನತು

ಕೋಲಾರ : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕೋಲಾರ ಕಾಂಗ್ರೆಸ್ 8 ಮಂದಿ ಮುಖಂಡರನ್ನು ಅಮಾನತುಗೊಳಿಸಿ ಆದೇಶ ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ವಿರುದ್ಧ ಪ್ರಚಾರ ನಡೆಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಬಿಜೆಪಿಯ ಅಭ್ಯರ್ಥಿ ಮುನಿಸ್ವಾಮಿ ಪರವಾಗಿ ಅಧಿಕೃತವಾಗಿ ಪ್ರಚಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮುಳಬಾಗಿಲು ಜಿಲ್ಲಾ ಪಂಚಾಯತ್ 3 ಸದಸ್ಯರು ಸೇರಿದಂತೆ 8 ಮಂದಿ ಅಮಾನತು ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ರಾಮಚಂದ್ರ, ನಾಗಮಣಿ, ಕೃಷ್ಣಪ್ಪ, ಎಪಿಎಂಸಿ ಸದಸ್ಯ ವಿವೇಕಾನಂದ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ, ಮಾಜಿ ಅಧ್ಯಕ್ಷ ಶ್ರೀನಾಥ್, ತಾ.ಪಂ ಸದಸ್ಯ ಶ್ರೀನಿವಾಸ್, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
Next Story





