ಮೊದಲ ಉಪಗ್ರಹ ಉಡಾಯಿಸಿದ ನೇಪಾಳ
ಕಠ್ಮಂಡು (ನೇಪಾಳ), ಎ. 18: ನೇಪಾಳ ಗುರುವಾರ ತನ್ನ ಮೊದಲ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ.
ನೇಪಾಳಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ‘ನೇಪಾಳಿಸ್ಯಾಟ್-೧’ ಉಪಗ್ರಹವನ್ನು ಅಮೆರಿಕದ ವರ್ಜೀನಿಯದಿಂದ ನೇಪಾಳಿ ಸಮಯ ಮುಂಜಾನೆ ೨:೩೧ಕ್ಕೆ ಉಡಾಯಿಸಲಾಯಿತು.
ಉಪಗ್ರಹವು ನೇಪಾಳದ ಭೌಗೋಳಿಕ ಮಾಹಿತಿಯನ್ನು ವಿವರವಾಗಿ ಸಂಗ್ರಹಿಸುತ್ತದೆ ಎಂದು ನೇಪಾಳ ಅಕಾಡೆಮಿ ಆಫ್ ಸಯನ್ಸ್ ಆ್ಯಂಡ್ ಟೆಕ್ನಾಲಜಿ (ಎನ್‌ಎಎಸ್‌ಟಿ) ತಿಳಿಸಿದೆ.
ಉಪಗ್ರಹದ ಯಶಸ್ವಿ ಉಡಾವಣೆಯಿಂದ ರೋಮಾಂಚನಗೊಂಡ ವಿಜ್ಞಾನಿಗಳು ಮತ್ತು ಜನರು ಸಂಭ್ರಮಾಚರಣೆಯಲ್ಲಿ ತೊಡಗಿದರು.
ಪ್ರಸಕ್ತ ಜಪಾನ್‌ನ ಕ್ಯುಶು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿಯುತ್ತಿರುವ ಇಬ್ಬರು ನೇಪಾಳಿ ವಿಜ್ಞಾನಿಗಳಾದ ಆಭಾಸ್ ಮಸ್ಕೇ ಮತ್ತು ಹರಿರಾಮ್ ಶ್ರೇಷ್ಠ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದಾರೆ.
Next Story