ಮೋದಿ ಸಿನೆಮಾ ಕ್ಷೇತ್ರದವರೋ; ರಾಜಕೀಯ ಕ್ಷೇತ್ರದವರೋ: ಎಚ್.ಆಂಜನೇಯ ವ್ಯಂಗ್ಯ

ಹಾವೇರಿ, ಎ.20: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರವಾಸ ಮತ್ತು ಊಟಕ್ಕೇ ಕೋಟಿಗಟ್ಟಲೆ ಸರಕಾರಿ ಹಣ ವ್ಯಯ ಮಾಡಿದ್ದಾರೆ. ಅವರು ಸಿನಿಮಾ ಕ್ಷೇತ್ರದಲ್ಲಿ ಇದಾರೋ ಅಥವಾ ರಾಜಕೀಯ ಕ್ಷೇತ್ರದಲ್ಲಿದಾರೋ ಎಂದು ಮಾಜಿ ಸಚಿವ ಎಚ್.ಆಂಜನೇಯ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ದಿನಕ್ಕೆರಡು ಸಲ ಲಕ್ಷಗಟ್ಟಲೆ ಮೌಲ್ಯದ ಬಟ್ಟೆ ಧರಿಸಿ, ಮೇಕಪ್ ಮಾಡಿಕೊಂಡು ಸುತ್ತಾಡುತ್ತಿದ್ದಾರೆ. ಎಲ್ಲಿಯೂ ಬೆವರುವುದಿಲ್ಲ, ಬಟ್ಟೆಗಳು ಸುಕ್ಕುಗಟ್ಟುವುದಿಲ್ಲ. ಅಲ್ಲದೆ, ಅವರು ಚೌಕಿದಾರನಲ್ಲ, ಷೋಕಿದಾರ. ಚೌಕಿದಾರನಾಗಿದ್ದರೆ, ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದಾಗ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.
ಪ್ರತ್ಯೇಕ ಧರ್ಮ?: ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸ್ವತಂತ್ರ ಧರ್ಮದ ಶಿಫಾರಸ್ಸನ್ನು ನಮ್ಮ ಸರಕಾರವು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಇದನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ಅದೇ ಸಂಪುಟದಲ್ಲಿ ವೀರಶೈವ ಲಿಂಗಾಯತರೂ ಇದ್ದರು. ಆದರೆ, 8 ಲಿಂಗಾಯತ ಸಂಸದರ ಪೈಕಿ ಒಬ್ಬರಿಗೂ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಏಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲ, ಜಿ.ಎಂ.ಸಿದ್ದೇಶ್ವರರನ್ನು ಸಂಪುಟದಿಂದ ತೆಗೆದು ಹಾಕಿ, ಅನಂತಕುಮಾರ್ ಹೆಗಡೆಯನ್ನು ಸಚಿವರನ್ನಾಗಿ ಮಾಡಿದ್ದೇಕೆ? ಎಂದ ಅವರು, ಬಿಜೆಪಿ ಲಿಂಗಾಯತರನ್ನು ನಿರ್ಲಕ್ಷಿಸಿದ್ದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಐದು ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಕೆಲಸವಿಲ್ಲದ ನಿರುದ್ಯೋಗಿಗಳನ್ನು ಸೇರಿಸಿ ಮೋದಿ, ಮೋದಿ, ಮೋದಿ ಎಂದು ಘೋಷಣೆ ಕೂಗಿಸುತ್ತಿದ್ದಾರೆ.
-ಎಚ್.ಆಂಜನೇಯ, ಮಾಜಿ ಸಚಿ







