ಅಭಿನಂದನ್ ರಿಗೆ ‘ವೀರ ಚಕ್ರ’: ಐಎಎಫ್ ಶಿಫಾರಸು
ಹೊಸದಿಲ್ಲಿ, ಎ. 20: ಫೆಬ್ರವರಿಯಲ್ಲಿ ನಡೆದ ವೈಮಾನಿಕ ಸಂಘರ್ಷದ ಸಂದರ್ಭ ಪಾಕಿಸ್ತಾನ ವಾಯು ಪಡೆಯ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೆಸರನ್ನು ಯುದ್ಧ ಕಾಲದ ಶೌರ್ಯ ಪ್ರಶಸ್ತಿ ‘ವೀರ ಚಕ್ರ’ಕ್ಕೆ ಹಾಗೂ ಪಾಕಿಸ್ತಾನದ ಬಾಲಕೋಟ್‌ನಲ್ಲಿ ನಡೆದ ಸರ್ಜಿಕಲ್ ದಾಳಿಯಲ್ಲಿ ಭಾಗವಹಿಸಿದ್ದ 12 ಮಿರೇಜ್ 2000ನ ಪೈಲೆಟ್‌ನನ್ನು ‘ವ್ಯಾಸ ಸೇನಾ ಪ್ರಶಸ್ತಿ’ಗೆ ಭಾರತೀಯ ವಾಯು ಪಡೆ ಶಿಫಾರಸು ಮಾಡಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ನಡುವೆ, ಭದ್ರತಾ ಆತಂಕದ ಹಿನ್ನೆಲೆಯಲ್ಲಿ ವರ್ಧಮಾನ್ ಅವರನ್ನು ಶ್ರೀನಗರದಿಂದ ಪಾಕಿಸ್ತಾನದ ಗಡಿಯಲ್ಲಿರುವ ಪಶ್ಚಿಮ ವಲಯದ ಇನ್ನೊಂದು ಪ್ರಮಖ ವಾಯು ನೆಲೆಗೆ ನಿಯೋಜಿಸಲಾಗಿದೆ. ‘‘ವರ್ಧಮಾನ್ ಅವರಿಗೆ ನಿಯೋಜನೆ ಆದೇಶ ನೀಡಲಾಗಿದೆ. ಶೀಘ್ರದಲ್ಲಿ ಅವರು ಶ್ರೀನಗರ ವಾಯು ನೆಲೆಯಿಂದ ನಿಯೋಜನೆಗೊಂಡ ವಾಯುನೆಲೆಗೆ ತೆರಳಲಿದ್ದಾರೆ’’ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
Next Story