Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಾನವೀಯತೆ ಮೆರೆದ ಚಿತ್ರಗಳು

ಮಾನವೀಯತೆ ಮೆರೆದ ಚಿತ್ರಗಳು

ವಾರ್ತಾಭಾರತಿವಾರ್ತಾಭಾರತಿ20 April 2019 11:30 PM IST
share
ಮಾನವೀಯತೆ ಮೆರೆದ ಚಿತ್ರಗಳು

ಭಾಗ-14

2002ರ ಗುಜರಾತಿನ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಜಗತ್ತಿನ ಪ್ರಧಾನ ಸುದ್ದಿಪತ್ರಿಕೆಗಳಲ್ಲಿ ನೂರಾರು ಚಿತ್ರಗಳು ಪ್ರಕಟಗೊಂಡವು. ಆದರೆ ಎರಡು ಚಿತ್ರಗಳು ಮಾತ್ರ ಗೋಧ್ರಾ ನರಮೇಧದ ಮುಖವಾಣಿಯಾಗಿ ಅಮರಗೊಂಡವು. ಈ ಎರಡೂ ಚಿತ್ರಗಳು ಬೇರೆ ಬೇರೆ ಪತ್ರಿಕೆಗಳ ಮುಖಪುಟಗಳಾಗಿ ರಾರಾಜಿಸಿದವು. ಒಂದು ಚಿತ್ರದಲ್ಲಿ ವ್ಯಕ್ತಿಯೊಬ್ಬನ ಮುಖದಲ್ಲಿ ದು:ಖವೇ ಮಡುಗಟ್ಟಿ ನಿಂತಿದ್ದರೆ ಮತ್ತೊಂದರಲ್ಲಿ ಹಿಂಸೆಯೇ ಮೈವೆತ್ತಿ ನಿಂತಂತಿದೆ. ತನ್ನವರ ಪ್ರಾಣಭಿಕ್ಷೆಗಾಗಿ ಎರಡೂ ಕೈ ಜೋಡಿಸಿ ಬೇಡಿಕೊಳ್ಳುವ ಚಿತ್ರ ನೋಡುಗರ ಮನದಲ್ಲಿ ಕರುಣೆ ಮೂಡಿಸಿದರೆ ಮಗದೊಂದು ಚಿತ್ರದಲ್ಲಿರುವ ವ್ಯಕ್ತಿ ಒಂದು ಕೈಯಲ್ಲಿ ಕಬ್ಬಿಣದ ಸಲಾಕೆಯನ್ನು ಇನ್ನೊಂದು ಕೈಯನ್ನು ಮುಷ್ಟಿಬಿಗಿಹಿಡಿದು ಸಂಹಾರಕ್ಕೆ ಸನ್ನದ್ಧನಾಗಿರುವುದನ್ನು ತೋರಿಸುತ್ತದೆ.

ಇಲ್ಲಿ ನಮ್ಮ ಉದ್ದೇಶ ರಾಜಕಾರಣವನ್ನೋ ಗುಜರಾತಿನ ಕೋಮುದಂಗೆಯ ಹಿನ್ನೆಲೆಯನ್ನೋ ಕೆದಕುವುದಲ್ಲ. ಬದಲಿಗೆ ಈ ಎರಡೂ ಚಿತ್ರಗಳ ಮೂಲಕ ಈ ಇಬ್ಬರಲ್ಲಿ ಆದ ಬದಲಾವಣೆಯನ್ನು ಮಾನವೀಯ ನೆಲೆಯಲ್ಲಿ ನೋಡುವುದಾಗಿದೆ. ಆಕಸ್ಮಿಕವಾಗಿ ಬಲಿಪಶುಗಳಾದ ಈ ಇಬ್ಬರೂ ಕಾಲ ಸರಿದಂತೆ ತಮ್ಮಿಳಗೆ ಆದ ಪರಿವರ್ತನೆಯನ್ನು ವಿವರಿಸುವುದಾಗಿದೆ. 2002ರ ಸಂದರ್ಭದಲ್ಲಿ ಅತಿ ಹೆಚ್ಚು ಬಿಂಬಿಸಲಾದ ಈ ಎರಡೂ ಚಿತ್ರಗಳ ಆ ಮುಖಗಳು ಹಾಗೆಯೇ ಉಳಿದುಕೊಳ್ಳಲಿಲ್ಲ. ಆ ಮುಖಗಳ ಹಿಂದಿರುವ ಮನಸ್ಥಿತಿ ಮತ್ತು ಕಾಲಾಂತರದಲ್ಲಿ ಅವರ ಮನಸ್ಸು ಗಳಲ್ಲಿ ಮನೆಮಾಡಿದ ಮಾನವೀಯತೆ ಇದೆಯಲ್ಲ ಅದು ತನ್ನದೇ ಆದ ರೋಚಕತೆ ಹೊಂದಿದೆ. ಚಿತ್ರಗಳು ಮಾಡುವ ಪರಿಣಾಮ ಗಳು ಸಾಮಾನ್ಯದಲ್ಲ ಎಂದು ಹೇಳುವುದೇ ನಮಗಿಲ್ಲಿ ಮುಖ್ಯ.

ಕೈ ಜೋಡಿಸುತ್ತಿರುವ ಆ ವ್ಯಕ್ತಿ ಅಹಮದಾಬಾದಿನ ಒಬ್ಬ ಸಾಮಾನ್ಯ ದರ್ಜಿ. ಆರ್ಕೋ ದತ್ತಾ ಎಂಬ ಜರ್ನಲಿಸ್ಟ್ ತೆಗೆದ ಈ ಚಿತ್ರ ರಾಯಿಟರ್ಸ್‌ ಮೂಲಕ ಪ್ರಕಟಗೊಂಡು ಜನಸಾಮಾನ್ಯರ ಸ್ಥಿತಿ ದಂಗೆಯ ಸಂದರ್ಭದಲ್ಲಿ ಎಷ್ಟು ದಯನೀಯವಾಗುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುತ್ತದೆ. ಕೈಯಲ್ಲಿ ಕಬ್ಬಿಣದ ಸರಳನ್ನು ಹಿಡಿದ ಅಶೋಕ್ ಮೋಚಿ ಎಂಬಾತನ ಚಿತ್ರ ಸೆರೆ ಹಿಡಿದವರು ಮುಂಬೈ ಮಿರರ್ ಪತ್ರಿಕೆಯ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜ.

ಇಲ್ಲಿ ಗಮನಿಸಬೇಕಾದ ವಿಚಾರವೊಂದಿದೆ. 2002 ರಲ್ಲಿ ನಡೆದ ಈ ಕೋಮುಗಲಭೆಯ ಕುರಿತು 2012 ರಲ್ಲಿ ಅಂದರೆ ಒಂದು ದಶಕದ ನಂತರ ಕೇರಳದ ಕಣ್ಣೂರಿನಲ್ಲಿ ನರಸಂಹಾರದ ಒಂದು ದಶಕ ಎಂಬ ಸೆಮಿನಾರ್ ಆಯೋಜಿಸಲಾಗಿರುತ್ತದೆ. ಹತ್ತು ವರ್ಷಗಳ ಹಿಂದಿನ ಆ ಎರಡು ಮುಖಚಿತ್ರಗಳು 2012 ರಲ್ಲಿ ಮಾನವೀಯತೆಯ ಮಹತ್ವವನ್ನು ಸಾರುವಂತೆ ಬದಲಾಗುತ್ತದೆ ಎಂದರೆ ಎಷ್ಟೊಂದು ದೊಡ್ಡ ವಿಚಾರವಲ್ಲವೇ. ಕುತೂಹಲದ ಸಂಗತಿಯೆಂದರೆ ಈ ಇಬ್ಬರೂ ಮೂಲತ: ಗುಜರಾತಿನ ಪ್ರಜೆಗಳಾದರೂ ಪರಸ್ಪರ ಮೊದಲ ಸಲ ಭೇಟಿಯಾದದ್ದು ದೂರದ ಕೇರಳದಲ್ಲಿ. ಯಾವುದೋ ಕಾಲದ ಚಿತ್ರದಲ್ಲಿರುವ ವ್ಯಕ್ತಿಗಳು ಇನ್ನಾವುದೋ ಕಾಲದಲ್ಲಿ ಯಾವುದೇ ಹಗೆಯಾಗಲಿ, ದ್ವೇಷವಾಗಲಿ, ಸಣ್ಣ ಕಹಿಯಾಗಲಿ ಉಳಿಸಿಕೊಳ್ಳದೇ ಸ್ನೇಹಿತರಾಗುತ್ತಾರೆಂದರೆ ಹೇಗಿರುತ್ತದೆಯಲ್ಲ.ಭಾರತದ ನಿಜವಾದ ವೌಲ್ಯವಿರುವುದು ಪರಸ್ಪರರನ್ನು ಪ್ರೀತಿಸುವುದರಲ್ಲಿಯೇ ವಿನಹ ದ್ವೇಷಿಸುವುದರಲ್ಲಿ ಅಲ್ಲ.ಕೇರಳದ ಈ ವೇದಿಕೆಯಲ್ಲಿ ಈ ಇಬ್ಬರೂ ಕೂಡಿ ಹಿಂದಿ ಬಾರದ ಕೇರಳಿಗರ ಎದುರು ಸೌಹಾರ್ದತೆ ಸಾರುವ ಹಳೆಯ ಹಿಂದಿ ಚಿತ್ರಗೀತೆ ‘‘ಹೈ ಪ್ರೀತ್ ಜಹಾಂ ಕೀ ರೀತ್ ಸದಾ...’’ಎಂದು ಹಾಡುತ್ತಾ ವೈಮನಸ್ಯವನ್ನು ಮರೆಯುತ್ತಾರೆ.ಮಾನವೀಯತೆಯನ್ನು ಮರೆಯುತ್ತಾರೆ.

ಕಣ್ಣೂರಿನಲ್ಲಿ ತನ್ನ ಕುರಿತ ಪುಸ್ತಕವೊಂದರ ಬಿಡುಗಡೆ ಮಾಡುತ್ತ ಅನ್ಸಾರಿ ‘ಈ ಹಿಂದೆಯೂ ಪುಣೆಯ ನಿವೃತ್ತ ಸೇನಾಧಿಕಾರಿ ಆನಂದ್ ಶ್ರಾಫ್ ಅಲ್ಲದೇ ಅನೇಕ ಮಂದಿ ನನ್ನಲ್ಲಿ ಕ್ಷಮೆ ಕೋರಿದ್ದಾರೆ.ಇಂದು ಸೋದರ ಆಶೋಕ್ ಮೋಚಿ ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು ನನ್ನಲ್ಲಿ ನೈತಿಕ ಸ್ಥೈರ್ಯ ತುಂಬಿದೆ;ಇದು ಮನವೀಯತೆಯ ಹೊಸ ಅಧ್ಯಾಯವೊಂದನ್ನು ಆರಂಭಿಸಿದೆ’ ಎನ್ನುತ್ತಾನೆ. ‘ದಂಗೆಯ ನಂತರದ ಈ ದಶಕದಲ್ಲಿ ನನಗೆ ಮನವೀಯತೆಗೂ ಮಿಗಿಲಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬ ಅರಿವಾಗಿದೆ’ ಎಂದು ಅಶೋಕ್ ಮೋಚಿ ನುಡಿಯುತ್ತಾನೆ. ಅಸಹಾಯಕತೆ ಮತ್ತು ಕ್ರೌರ್ಯವನ್ನು ಹೊದ್ದ ಆ ಎರಡು ಮುಖಗಳು ಕೊನೆಗೆ ಮಾನವೀಯತೆಯ ಸಾಗರ ಸೇರಿದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X