ಯುವತಿಯರಿಗೆ ಕಿರುಕುಳ: ಓರ್ವ ಸೆರೆ
![ಯುವತಿಯರಿಗೆ ಕಿರುಕುಳ: ಓರ್ವ ಸೆರೆ ಯುವತಿಯರಿಗೆ ಕಿರುಕುಳ: ಓರ್ವ ಸೆರೆ](https://www.varthabharati.in/sites/default/files/images/articles/2019/04/21/187944-1555851913.jpg)
ಬೆಂಗಳೂರು, ಎ.21: ಬೈಕ್ನಲ್ಲಿ ತೆರಳಿ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಯಲಹಂಕ ನಿವಾಸಿ ರಮೇಶ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ರಮೇಶ್, ಇಲ್ಲಿನ ಯಲಹಂಕ, ವಿದ್ಯಾರಣ್ಯಪುರ ಸುತ್ತಾಮುತ್ತಲು ವಾಸ ಮಾಡುತ್ತಿರುವ ಯುವತಿಯರನ್ನು ಗುರಿಯಾಗಿಸಿಕೊಂಡು, ಬೈಕ್ನಲ್ಲಿ ತೆರಳಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.
Next Story