Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಶಂಕರನಾರಾಯಣ:ವಿಜಯನಗರ ಕಾಲದ ಅಪ್ರಕಟಿತ...

ಶಂಕರನಾರಾಯಣ:ವಿಜಯನಗರ ಕಾಲದ ಅಪ್ರಕಟಿತ ಶಿಲಾಶಾಸನ ಪತ್ತೆ

ವಾರ್ತಾಭಾರತಿವಾರ್ತಾಭಾರತಿ21 April 2019 10:25 PM IST
share
ಶಂಕರನಾರಾಯಣ:ವಿಜಯನಗರ ಕಾಲದ ಅಪ್ರಕಟಿತ ಶಿಲಾಶಾಸನ ಪತ್ತೆ

ಉಡುಪಿ, ಎ. 21: ದಕ್ಷಿಣ ಭಾರತದ ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲುವ ಎರಡು ಅಪ್ರಕಟಿತ ಶಾಸನಗಳು ಹಾಗೂ ಅಪೂರ್ವವಾದ ಶಿಲ್ಪಗಳು ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಸಮೀಪದ ಕಯ್ಯೆಣಿಯ ಕುಶಲ ಹೆಗ್ಡೆ ಎಂಬವರ ಬರ್ಕಲ್ ಗದ್ದೆಯಲ್ಲಿ ಪತ್ತೆಯಾಗಿವೆ ಎಂದು ಶಿರ್ವದ ಎಂ.ಸುಂದರರಾಮ್ ಶೆಟ್ಟಿ ಪದವಿ ಕಾಲೇಜಿನ ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಟಿ.ಮುರುಗೇಶಿ ತಿಳಿಸಿದ್ದಾರೆ.

ಶಂಕರನಾರಾಯಣ ಗ್ರಾಮದ ಪರಿಸರದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆಸಿ ಕ್ಷೇತ್ರಕಾರ್ಯ ಹಾಗೂ ಅಧ್ಯಯನದ ಸಂದರ್ಭದಲ್ಲಿ ಈ ಅಪರೂಪದ ಶಿಲಾಶಾಸನ ಹಾಗೂ ಅಪೂರ್ವ ಶಿಲ್ಪಗಳು ಪತ್ತೆಯಾಗಿವೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೊ.ಪ್ರದೀಪ್ ಬಸರೂರು, ಕಿರಣ್‌ಕುಮಾರ್ ಎಡ್ನೀರ್ ಅವರನ್ನೊಳಗೊಂಡ ತಂಡ ಈ ಅಧ್ಯಯನ ನಡೆಸಿದೆ.

ಶಂಕರನಾರಾಯಣ ಎಂಬುದು ಜಿಲ್ಲೆಯ ಅತ್ಯಂತ ಪ್ರಸಿದ್ಧ ಶೈವ-ವೈಷ್ಣವ ಸಮನ್ವತೆಯ ಕೇಂದ್ರ. ಪಶ್ಚಿಮ ಘಟ್ಟದ ಬುಡದಲ್ಲಿರುವ ಇಲ್ಲಿನ ಶಂಕರನಾರಾಯಣ ದೇವಾಲಯ ಸಾಕಷ್ಟು ಬಾರಿ ಜೀರ್ಣೋದ್ಧಾರಕ್ಕೆ ಒಳಗಾಗಿದ್ದರೂ ವಿಜಯನಗರ ಮತ್ತು ವಿಜಯನಗರ ಪೂರ್ವದ ಪ್ರಾಚೀನ ಶಿಲ್ಪಗಳನ್ನು ಇದು ಒಳಗೊಂಡಿದೆ. ಈ ದೇವಾಲಯ ಮಲೆನಾಡು ಮತ್ತು ಕರಾವಳಿ ಸಂಸ್ಕೃತಿಯ ನಡುವಿನ ಕೊಂಡಿಯಂತಿದೆ.

ಕುಶಲ ಹೆಗ್ಡೆ ಅವರ ಬರ್ಕಲ್‌ಗದ್ದೆಯಲ್ಲಿ 1357ರ ಕಾಲಕ್ಕೆ ಸೇರಿದ ವಿಜಯನಗರದ ಚಕ್ರವರ್ತಿ ಬುಕ್ಕರಾಯನ ಪ್ರಕಟಿತ ಶಾಸನವಿದೆ. ಅಲ್ಲದೇ ಭೋಗರ ಮಕ್ಕಿ ನವೀನ್ ಕುಲಾಲರ ಮನೆಯ ಅಡಿಕೆ ತೋಟದೊಳಗೆ ಮಣ್ಣಿನಲ್ಲಿ ಹುಗಿದು ಹೋದ 1371ರ ಸುಮಾರಿನ ಬುಕ್ಕನ ಆಳ್ವಿಕೆಯ ಕಾಲದ ಅಪೂರ್ವ ಶಾಸನ ಹಾಗೂ ಸಂಕಾಪುರದ ಸುಧಾಕರ ಕುಲಾಲರ ಮನೆ ಸಮೀಪ ಪತ್ತೆಯಾದ 1412-13ರ ಕಾಲದ 1ನೇ ದೇವರಾಯನ ಆಳ್ವಿಕೆಯ ಕಾಲದ ಶಾಸನ, ದೇವಾಲಯದ ಪ್ರಾಕಾರದೊಳಗಿರುವ 1562ರ ಕಾಲಕ್ಕೆ ಸೇರಿದ ಪ್ರಕಟಿತ ಶಾಸನ ಹಾಗೂ ದೇವಾಲಯದ ಪ್ರಾಚ್ಯಾವಶೇಷಗಳ ಪ್ರಾಥಮಿಕ ಅಧ್ಯಯನವನ್ನು ತಂ ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.

ಕಯ್ಯಣಿ ಶಾಸನ: ಶಂಕರನಾರಾಯಣ ಸಮೀೀಪರುವ ಕಯ್ಯಣಿ ಕುಶಲ ಹೆಗ್ಡೆ ಅವರ ಬರ್ಕಲ್ ಗದ್ದೆಯಲ್ಲಿ ವಿಜಯನಗರ ಕಾಲದ ಪ್ರಕಟಿತ ಶಾಸನ ಕಂಡು ಬಂದಿದ್ದು, ಆಯತಾಕಾರದ ಈ ಶಾಸನವನ್ನು ಬರದಕಲ್ಲು ಅಥವಾ ಬರ್ಕಲ್ ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ.

ಶಾಸನೋಕ್ತ ವಿವರದ ಪ್ರಕಾರ ಶಾಸನವು ಸಂಗಮ ರಾಜಮನೆತನದ ಪ್ರಖ್ಯಾತ ಚಕ್ರವರ್ತಿ ಮೊದಲನೇ ಬುಕ್ಕನ ಆಳ್ವಿಕೆಗೆ ಸಂಬಂಧಿಸಿದ ಶಾಸನವಾಗಿದೆ. ಕ್ರಿ.ಶ. 1358-59ರ ಕಾಲಕ್ಕೆ ಸೇರಿದ ಶಾಸನವಾಗಿದೆ.

ಶಾಸನೋಕ್ತ ವಿವರದ ಪ್ರಕಾರ ಶಾಸನವು ಸಂಗಮ ರಾಜಮನೆತನದ ಪ್ರಖ್ಯಾತ ಚಕ್ರವರ್ತಿ ಮೊದಲನೇ ಬುಕ್ಕನ ಆಳ್ವಿಕೆಗೆ ಸಂಬಂಧಿಸಿದ ಶಾಸನವಾಗಿದೆ. ಕ್ರಿ.ಶ. 1358-59ರ ಕಾಲಕ್ಕೆ ಸೇರಿದ ಶಾಸನವಾಗಿದೆ. ಭೋಗರಮಕ್ಕಿ ಶಾಸನ:  ಶಂಕರನಾರಾಯಣ ಭೋಗರಮಕ್ಕಿಯ ನವೀನ್ ಕುಲಾಲರ ಅಡಿಕೆ ತೋಟದ ಮಣ್ಣಿನಲ್ಲಿ ಬಹುತೇಕ ಹುದುಗಿ ಹೋಗಿ, ಕೇವಲ ಶಾಸನದ ಮೇಲಿನ ಪಟ್ಟಿಕೆಯಲ್ಲಿದ್ದ ಚಿತ್ರಗಳು ಮಾತ್ರವೇ ಕಾಣುತ್ತಿದ್ದ ಶಾಸನದ ಕಲ್ಲನ್ನು, ನವೀನ್ ಕುಲಾಲರ ಮನೆಯವರ ಮನವೊಲಿಸಿ, ಮಣ್ಣಿನಿಂದ ಹೊರತೆಗೆಯುವ ಸಾಹಸವನ್ನು ಪ್ರದೀಪ್ ಬಸ್ರೂರ್ ಮಾಡಿದ್ದು, ಈ ಶಾಸನದ ಚಿತ್ರವನ್ನು ತೆಗೆದಿದ್ದಾರೆ. ಸಾಕಷ್ಟು ಸವೆದಿರುವ ಈ ಶಾಸನದ ಏಳು ಸಾಲುಗಳನ್ನು ಕಷ್ಟಪಟ್ಟು ಅಲ್ಪಸ್ವಲ್ಪ ಓದಬಹುದಾಗಿದೆ ಎಂದು ಡಾ.ಮುರುಗೇಶಿ ತಿಳಿಸಿದ್ದಾರೆ.

ಶಂಕರನಾರಾಯಣೋಗರಮಕ್ಕಿಯ ನವೀನ್ ಕುಲಾಲರ ಅಡಿಕೆ ತೋಟದ ಮಣ್ಣಿನಲ್ಲಿ ಬಹುತೇಕ ಹುದುಗಿ ಹೋಗಿ, ಕೇವಲ ಶಾಸನದ ಮೇಲಿನ ಪಟ್ಟಿಕೆಯಲ್ಲಿದ್ದ ಚಿತ್ರಗಳು ಮಾತ್ರವೇ ಕಾಣುತ್ತಿದ್ದ ಶಾಸನದ ಕಲ್ಲನ್ನು, ನವೀನ್ ಕುಲಾಲರ ಮನೆಯವರ ಮನವೊಲಿಸಿ, ಮಣ್ಣಿನಿಂದ ಹೊರತೆಗೆಯುವ ಸಾಹಸವನ್ನು ಪ್ರದೀಪ್ ಬಸ್ರೂರ್ ಮಾಡಿದ್ದು, ಈ ಶಾಸನದ ಚಿತ್ರವನ್ನು ತೆಗೆದಿದ್ದಾರೆ. ಸಾಕಷ್ಟು ಸವೆದಿರುವ ಈ ಶಾಸನದ ಏಳು ಸಾಲುಗಳನ್ನು ಕಷ್ಟಪಟ್ಟು ಅಲ್ಪಸ್ವಲ್ಪ ಓದಬಹುದಾಗಿದೆ ಎಂದು ಡಾ.ಮುರುಗೇಶಿ ತಿಳಿಸಿದ್ದಾರೆ. ಶಾಸನದ ಮುಂದಿನ ಸಾಲುಗಳು ಅಸ್ಪಷ್ಟವಾಗಿವೆ. ಸುಮಾರು 27 ಸಾಲು ಗಳನ್ನು ಈ ಶಾಸನ ಒಳಗೊಂಡಿದೆ. ಗೋಪರಸ ಒಡೆಯನನ್ನು ಹೆಸರಿಸುವ ಎರಡನೇ ಪ್ರಾಚೀನ ಶಾಸನವಿದು. ಆತನನ್ನು ಉಲ್ಲೇಖಿಸುವ 1ನೇ ಪ್ರಾಚೀನ ಶಾಸನ ಉಡುಪಿಯ ಅನಂತೇಶ್ವರ ದೇವಾಲಯದ ಪ್ರವೇಶ ದ್ವಾರದಲ್ಲಿದೆ. ಇದರ ಕಾಲ ಕ್ರಿ.ಶ.1366.

ಶಾಸನದ ಮುಂದಿನ ಸಾಲುಗಳು ಅಸ್ಪಷ್ಟವಾಗಿವೆ. ಸುಮಾರು 27 ಸಾಲು ಗಳನ್ನು ಈ ಶಾಸನ ಒಳಗೊಂಡಿದೆ. ಗೋಪರಸ ಒಡೆಯನನ್ನು ಹೆಸರಿಸುವ ಎರಡನೇ ಪ್ರಾಚೀನ ಶಾಸನವಿದು. ಆತನನ್ನು ಉಲ್ಲೇಖಿಸುವ 1ನೇ ಪ್ರಾಚೀನ ಶಾಸನ ಉಡುಪಿಯ ಅನಂತೇಶ್ವರ ದೇವಾಲಯದ ಪ್ರವೇಶ ದ್ವಾರದಲ್ಲಿದೆ. ಇದರ ಕಾಲ ಕ್ರಿ.ಶ.1366.

ಶಾಸನದ ಚಿತ್ರ ಪಟ್ಟಿಕೆ:  ಈ ಶಾಸನವು ಅತ್ಯಂತ ಆಕರ್ಷಕವಾದ, ಅರ್ಥಗರ್ಭಿತವಾದ ಹಾಗೂ ಚಾರಿತ್ರಿಕವಾಗಿ ಅತ್ಯಂತ ಮಹತ್ವವುಳ್ಳ ಚಿತ್ರಪಟ್ಟಿಕೆಯನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಆಕರ್ಷಕ ಕೆತ್ತನೆಯ ಪಟ್ಟಿಕೆಯಿದೆ. ಎಡದಿಂದ ಬಲಕ್ಕೆ ಅನುಕ್ರಮವಾಗಿ, ಎಡಕ್ಕೆ ಮುಖಮಾಡಿ ಕುಳಿತಿರುವ ನಂದಿ, ಉದ್ದನೆಯ ದೀಪಸ್ಥಂಭ, ಶಿವಲಿಂಗ, ಎಡಕ್ಕೆ ಮುಖ ಮಾಡಿ ವೀರಭಂಗಿಯಲ್ಲಿ ನಿಂತಿರುವ ಆಂಜನೇಯ ಹಾಗೂ ರಾಜ ಲಾಂಛನ ಸೂಚಕವಾದ ಖಡ್ಗದ ಉಬ್ಬು ಶಿಲ್ಪಗಳಿವೆ.

ಈ ಶಾಸನವು ಅತ್ಯಂತ ಆಕರ್ಷಕವಾದ, ಅರ್ಥಗರ್ಭಿತವಾದ ಹಾಗೂ ಚಾರಿತ್ರಿಕವಾಗಿ ಅತ್ಯಂತ ಮಹತ್ವವುಳ್ಳ ಚಿತ್ರಪಟ್ಟಿಕೆಯನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಆಕರ್ಷಕ ಕೆತ್ತನೆಯ ಪಟ್ಟಿಕೆಯಿದೆ. ಎಡದಿಂದ ಬಲಕ್ಕೆ ಅನುಕ್ರಮವಾಗಿ, ಎಡಕ್ಕೆ ಮುಖಮಾಡಿ ಕುಳಿತಿರುವ ನಂದಿ, ಉದ್ದನೆಯ ದೀಪಸ್ಥಂ,ಶಿವಲಿಂಗ,ಎಡಕ್ಕೆಮುಖಮಾಡಿವೀರಂಗಿಯಲ್ಲಿ ನಿಂತಿರುವ ಆಂಜನೇಯ ಹಾಗೂ ರಾಜ ಲಾಂಛನ ಸೂಚಕವಾದ ಖಡ್ಗದ ಉಬ್ಬು ಶಿಲ್ಪಗಳಿವೆ. ಈ ಚಿತ್ರಪಟ್ಟಿಕೆಯ ವಿಶೇಷವೆಂದರೆ, ಶಂಕರನಾರಾಯಣ ಅಥವಾ ಶೈವ ಮತ್ತು ವೈಷ್ಣವ ಪಂಥಗಳನ್ನು ನಂದಿ ಮತ್ತು ಆಂಜನೇಯನ ಶಿಲ್ಪಗಳ ಮೂಲಕ ಅಭಿವ್ಯಕ್ತಗೊಳಿಸಿರುವುದು. ವಿಜಯನಗರದ ಆರಂಭ ಕಾಲದ ಶಾಸನವೊಂದರ ಮೇಲೆ ಆಂಜನೇಯನ ಶಿಲ್ಪ ಕಂಡು ಬಂದಿರುವುದು ಸಹ ಒಂದು ವಿಶೇಷವಾದ ಸಂಗತಿಯಾಗಿದೆ ಎಂದು ಡಾ.ಮುರುಗೇಶಿ ಅಭಿಪ್ರಾಯ ಪಟ್ಟಿದ್ದಾರೆ.

ದಕ್ಷಿಣ ಭಾರತದಾದ್ಯಂತ ಸಾವಿರಾರು ಆಂಜನೇಯನ ಶಿಲ್ಪಗಳು ಕಂಡು ಬರುತ್ತವೆ. ಆದರೆ, ಈ ಶಿಲ್ಪಗಳ ಕಾಲಮಾನ, ಪ್ರತಿಮಾಶಾಸ್ತ್ರದ ಬೆಳವಣಿಗೆ ಮತ್ತು ವಿಕಾಸದ ಅಧ್ಯಯನ ಒಂದು ತೊಡಕಾಗಿತ್ತು. ಇದೀಗ ಈ ಶಾಸನದಲ್ಲಿ ಖಚಿತ ಕಾಲದ ಉಲ್ಲೇಖದೊಂದಿಗೆ ಆಂಜನೇಯನ ಶಿಲ್ಪ ಕಂಡು ಬಂದಿರು ವುದರಿಂದ ಆಂಜನೇಯನ ಶಿಲ್ಪಗಳ ಅಧ್ಯಯನದಲ್ಲಿ ಇದು ಮಹತ್ತರವಾದ ಶೋಧವಾಗಿದೆ.

ಶಂಕರನಾರಾಯಣ ದೇವಾಲಯದ ಅಧಿಷ್ಠಾನದಲ್ಲಿ ಅನೇಕ ವಿಜಯನಗರ ಕಾಲದ ಶಿಲ್ಪಗಳಿದ್ದು, ಅದರಲ್ಲಿ ಒಂಟೆಯ ಚಿತ್ರ ನಮ್ಮ ಗಮನ ಸೆಳೆಯುತ್ತದೆ. ಆಗಿನ ಕಾಲದಲ್ಲಿ ಮಲೆನಾಡು ಹಾಗೂ ಕರಾವಳಿಯ ಚಿಕ್ಕ ಚಿಕ್ಕ ತೋಡು, ಹಳ್ಳ, ತೊರೆಗಳನ್ನು ದಾಟಲು ಒಂಟೆಯನ್ನು ಬಳಸುತ್ತಿದ್ದರೆಂದು ಇದರಿಂದ ತಿಳಿಯುತ್ತದೆ ಎಂದವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X