ಫರಂಗಿಪೇಟೆ: ಪುರಾತನ ಅಸ್ಥಿಪಂಜರ ಪತ್ತೆ
ಮಂಗಳೂರು, ಎ.21: ನಗರ ಹೊರವಲಯದ ಫರಂಗಿಪೇಟೆ ಸಮೀಪದ ಬಂಗ್ಲಗುಡ್ಡ ಎಂಬಲ್ಲಿನ ಮುಸ್ಲಿಂ ದಫನ ಭೂಮಿಯಲ್ಲಿ ಪುರಾತನ ಅಸ್ಥಿಪಂಜರವೊಂದು ಕೆಲವು ದಿನದ ಹಿಂದೆ ಪತ್ತೆಯಾಗಿದೆ.
ಸುಮಾರು 200 ವರ್ಷ ಹಳೆಯದು ಎನ್ನಲಾದ ಈ ಅಸ್ಥಿಪಂಜರವು ಮುಸ್ಲಿಂ ವ್ಯಕ್ತಿಗೆ ಸೇರಿದ ಮೃತದೇಹದ್ದು ಎಂದು ತಿಳಿದು ಬಂದಿದೆ. ಈ ದಫನ ಭೂಮಿಯಲ್ಲಿ ಎರಡು ಹಬ್ಬಗಳ ನಮಾಝ್ ವಿಧಿ ನೆರವೇರಿಸುವ ಸಲುವಾಗಿನ ಈದ್ಗಾ ಮೈದಾನ ಮಾಡಲು ಜೆಸಿಬಿ ಮೂಲಕ ಜಾಗ ಸಮತಟ್ಟು ಮಾಡಲಾಗುತ್ತಿತ್ತು. ಈ ವೇಳೆ ಅಸ್ಥಿಪಂಜರ ಕಂಡು ಬಂದಿದೆ.
ಮಾಹಿತಿ ತಿಳಿದ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವಿವಾರ ಈ ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರದ ಯಥಾಸ್ಥಿತಿ ಕಾಪಾಡಲು ಸೂಚಿಸಿದ್ದಾರೆ. ಅದರಂತೆ ನಾವು ಕಾರ್ಯಾಚರಿಸಲಿದ್ದೇವೆ ಎಂದು ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವಾ ತಿಳಿಸಿದ್ದಾರೆ.
Next Story





