Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುರತ್ಕಲ್‌: ಕಳವಾಗಿದ್ದು 205 ಗ್ರಾಂ...

ಸುರತ್ಕಲ್‌: ಕಳವಾಗಿದ್ದು 205 ಗ್ರಾಂ ಚಿನ್ನ... ಕೊನೆಗೂ ದಕ್ಕಿತು 90 ಗ್ರಾಂ...!

ಕಳವು ಮಾಡಿ ನಂತರ ಸಂಭ್ರಮಾಚರಿಸಿಕೊಂಡ ವೀಡಿಯೊ ವೈರಲ್

ವಾರ್ತಾಭಾರತಿವಾರ್ತಾಭಾರತಿ26 April 2019 10:08 PM IST
share
ಸುರತ್ಕಲ್‌: ಕಳವಾಗಿದ್ದು 205 ಗ್ರಾಂ ಚಿನ್ನ... ಕೊನೆಗೂ ದಕ್ಕಿತು 90 ಗ್ರಾಂ...!

ಮಂಗಳೂರು, ಎ. 26: ಅಂದು 2018ರ ಡಿಸೆಂಬರ್ 23ರ ರಾತ್ರಿ. ಕೆಲ ದಿನಗಳ ಬಳಿಕ ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮನೆಯವರಲ್ಲಾ ಅಂದು ಖುಷಿಯಲ್ಲೇ ರಾತ್ರಿ ಸುಮಾರು 11 ಗಂಟೆಯ ನಂತರ ನಿದ್ದೆಗೆ ಜಾರಿದ್ದರು. ಆದರೆ ಬೆಳಗ್ಗೆ ಎದ್ದಾಗ ಆ ಮನೆಯವರಿಗೆ ಆಘಾತ ಕಾದಿತ್ತು.

ಮನೆಯ ಕಪಾಟಿನಿಂದ ಬರೋಬರ್ರಿ 205 ಗ್ರಾಂ ಚಿನ್ನದ ಒಡವೆಗಳು ಕಳವಾಗಿತ್ತು. ಕಳ್ಳರಿಬ್ಬರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಸಲೀಸಾಗಿ ಮನೆಯ ಎದುರು ಬಾಗಿಲಿನಿಂದಲೇ ಆಗಮಿಸಿ ಮನೆಯ ಕೋಣೆಯ ಕಪಾಟು ತೆರೆದು ಆರಾಮವಾಗಿ ಚಿನ್ನಾಭರಣಗಳನ್ನು ಎಗರಿಸಿಕೊಂಡು ಮನೆಯಿಂದ ಹೊರಬಂದಿದ್ದಲ್ಲದೇ ಅಂಗಳದಲ್ಲಿ ಕುಳಿತು ಮತ್ತೆ ತಾವು ಚಿನ್ನಾಭರಣಗಳನ್ನು ಕದ್ದಿರುವುದನ್ನು ಖಾತರಿಸಿಪಡಿಸಿಕೊಳ್ಳುತ್ತಾ ಒಬ್ಬರಿಗೊಬ್ಬರು ಸಂಭ್ರಮಿಸಿಕೊಂಡಿದ್ದರು !

ಇದು ಸಿನೆಮಾ ಕತೆಯಲ್ಲ. ಸುರತ್ಕಲ್‌ನ ಮನೆಯೊಂದರಲ್ಲಿ ನಡೆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸುರತ್ಕಲ್‌ನ ಅಮಿತಾ ಅವರ ಮನೆಯಲ್ಲಿ ನಡೆದ ಕಳ್ಳತನದ ನೈಜ ಘಟನೆಯಿದು.

ಅಂದು ಕಳವಾಗಿದ್ದ 205 ಗ್ರಾಂ ಚಿನ್ನಾಭರಣಗಳಲ್ಲಿ ಇದೀಗ 90 ಗ್ರಾಂನಷ್ಟು ಚಿನ್ನಗಳು ದೊರೆತಿದ್ದು, ಇಂದು ನಗರದ ನೆಹರೂ ಮೈದಾನದಲ್ಲಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರಿಂದ ಜಪ್ತಿ ಮಾಡಲಾದ ಕಳವಾದ ವಸ್ತುಗಳನ್ನು ಅವರ ವಾರಿಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮದಲ್ಲಿ ಆ ಚಿನ್ನವನ್ನು ಅಮಿತ ಅವರು ಪಡೆದರು.

ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ, ‘‘ಮದುವೆ ಕಾರ್ಯಕ್ರಮವೊಂದರ ನಿಮಿತ್ತ ಲಾಕರ್‌ನಲ್ಲಿ ಇರಿಸಿದ್ದ ಚಿನ್ನವನ್ನು ಮನೆಗೆ ತಂದು ಕಪಾಟಿನಲ್ಲಿ ಇರಿಸಲಾಗಿತ್ತು. ಅಂದು ರಾತ್ರಿ ಮಲಗುವ ಸಂದರ್ಭ ಒಳಗಿನಿಂದ ಮನೆಯ ಬೀಗ ಹಾಕುವಾಗ ನನ್ನ ಪತಿಯವರು ಬೀಗ ಕೀಯನ್ನು ಬಾಗಿಲಲ್ಲೇ ಇರಿಸಿದ್ದರು. ಪಕ್ಕದಲ್ಲೇ ಕಿಟಕಿಯೊಂದಿತ್ತು. ನಾವೆಲ್ಲಾ ನಿದ್ದೆಗೆ ಜಾರಿದ್ದ ಸಂದರ್ಭ ಕಳ್ಳರು ಕಿಟಕಿಯ ಮೂಲಕ ಕೋಲು ಹಾಕಿ ಒಳಗಿದ್ದ ಕೀ ತೆಗೆದು ಮನೆಯೊಳಗೆ ಪ್ರವೇಶಿಸಿ ಚಿನ್ನಾಭರಣ ಕದ್ದೊಯ್ದಿದ್ದರು. ಇದು ಬೆಳಗ್ಗಿನ ಹೊತ್ತಿನಲ್ಲೇ ನಮಗೆ ಅರಿವಾಗಿದ್ದು. ಈ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಕಳವಾಗಿದ್ದ 205 ಗ್ರಾಂ ಚಿನ್ನದಲ್ಲಿ 90 ಗ್ರಾಂ ಚಿನ್ನ ನಮಗೆ ದೊರಕಿದೆ’’ ಎಂದು ಅಮಿತ ಸಂತ ವ್ಯಕ್ತಪಡಿಸಿದರು.

ಸುಳಿವು ನೀಡಿದ ಸಿಸಿ ಕ್ಯಾಮರಾ !

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಫಿಂಗರ್ ಫ್ರಿಂಟ್ ಕೂಡಾ ಪತ್ತೆಯಾಗಿರಲಿಲ್ಲ. ಆದರೆ ಮನೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದ ಕಾರಣ ಅದರಲ್ಲಿನ ಫೂಟೇಜ್ ಮೂಲಕ ಪೊಲೀಸರು ಓರ್ವ ನನ್ನು ಹಿಡಿದು ಆತನಲಿದ್ದ ಚಿನ್ನವನ್ನು ಜಪ್ತಿ ಮಾಡಲುವಲ್ಲಿ ಸಫಲರಾಗಿದ್ದರು. ಇಂದು ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಕೂಡಾ ಈ ಪ್ರಕರಣವನ್ನು ಉಲ್ಲೇಖಿಸುತ್ತಾ ಸಿಸಿ ಕ್ಯಾಮರಾಗಳ ಅಳವಡಿಕೆಯ ಮಹತ್ವವನ್ನು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X