ಎ.28ಕ್ಕೆ ಪಲಿಮಾರಿನಲ್ಲಿ ಗೇರುಕೃಷಿ ಮಾಹಿತಿ
ಉಡುಪಿ, ಎ.26: ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಗೇರು ಕೃಷಿ ಮಾಹಿತಿ ಕಾರ್ಯಕ್ರಮವೊಂದು ಎ.28ರ ರವಿವಾರ ಸಂಜೆ 4:30ಕ್ಕೆ ಪಲಿಮಾರು ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ.
ವಂ.ರಾಕಿ ಡಿಸೋಜ ಉದ್ಘಾಟಿಸಲಿರುವ ಈ ಕಾರ್ಯಕ್ರಮ ನಂದಿಕೂರು ಲಕ್ಷ್ಮಣ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ.
ಗೇರುಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡುವ ಈ ಕಾರ್ಯಕ್ರಮದಲ್ಲಿ ಕೃಷಿಕರು, ಕೃಷಿ ಆಸಕ್ತರು ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
Next Story





