ಜಂಬೂ ಸವಾರಿಯ ಗಜರಾಜ ದ್ರೋಣ ಸಾವು

ಮಡಿಕೇರಿ, ಎ.26: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಗಜರಾಜ ದ್ರೋಣ(37) ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.
ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ಕಳೆದ 6 ವರ್ಷಗಳಿಂದ ವಾಸವಾಗಿದ್ದ ದ್ರೋಣ ಶುಕ್ರವಾರ ಬೆಳಗ್ಗೆ ಶಿಬಿರದ ನೀರಿನ ತೊಟ್ಟಿಯಿಂದ ನೀರು ಕುಡಿದು ಸ್ಥಳದಲ್ಲೇ ಮೃತಪಟ್ಟಿದೆ.
ಹಾಸನ ಜಿಲ್ಲೆಯ ಆಲೂರು ವ್ಯಾಪ್ತಿಯಲ್ಲಿ ಪುಂಡಾಟದಲ್ಲಿ ತೊಡಗಿದ್ದ ಕಾಡಾನೆಯನ್ನು 2014 ರಲ್ಲಿ ಸೆರೆ ಹಿಡಿದು ಮತ್ತಿಗೋಡು ಆನೆ ಶಿಬಿರಕ್ಕೆ ಕರೆತಂದು ದ್ರೋಣ ಎಂದು ಹೆಸರಿಡಲಾಗಿತ್ತು. ನಂತರ ಕ್ರಾಲ್‍ನಲ್ಲಿ ಬಂಧಿಸಿ ಸಂಯಮದ ತರಬೇತಿ ನೀಡಿ ಪಳಗಿಸಲಾಗಿತ್ತು. ಮಾವುತರಾದ ರವಿ ಹಾಗೂ ಗುಂಡು ದ್ರೋಣನ ಆರೈಕೆ ಮಾಡುತ್ತಿದ್ದರು. ಮೈಸೂರು ದಸರಾ ಮೆರವಣಿಗೆಯ ಆಕರ್ಷಣೆಯ ಗಜರಾಜನಾಗಿದ್ದ ದ್ರೋಣ ಇನ್ನು ನೆನಪು ಮಾತ್ರ.
Next Story





