Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೀನು ಸಾಗಾಟ ಲಾರಿಗಳ ತ್ಯಾಜ್ಯ ನೀರು...

ಮೀನು ಸಾಗಾಟ ಲಾರಿಗಳ ತ್ಯಾಜ್ಯ ನೀರು ಸೋರಿಕೆ: ಎ. 29ರಂದು ಲಾರಿ ಮಾಲಕರ ಸಭೆಗೆ ನಿರ್ಧಾರ

ವಾರ್ತಾಭಾರತಿವಾರ್ತಾಭಾರತಿ26 April 2019 10:40 PM IST
share

ಮಂಗಳೂರು, ಎ.26: ಮೀನು ಸಾಗಾಟ ಲಾರಿಗಳಿಂದ ತ್ಯಾಜ್ಯ ನೀರು ಸೋರಿಕೆಯಾಗಿ ನಗರದ ಮಾಲಿನ್ಯಕ್ಕೆ ಕಾರಣವಾಗುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಎ.29ರಂದು ಮೀನು ಸಾಗಾಟ ಲಾರಿ ಮಾಲೀಕರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದ ವೇಳೆ ಮೀನು ಸಾಗಾಟ ಲಾರಿಗಳಿಂದ ಹೊರಚೆಲ್ಲುವ ತ್ಯಾಜ್ಯ ನೀರಿನಿಂದ ಪರಿಸರ ದುರ್ನಾತ ಬೀರುತ್ತಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸಭೆಗೆ ನಿರ್ಧರಿಸಿದರು.

ಜಪ್ಪು ಮಾರುಕಟ್ಟೆಯಿಂದ ಮೋರ್ಗನ್‌ಗೇಟ್‌ವರೆಗೆ ನಸುಕಿನ ಜಾವದಿಂದಲೇ ಮೀನು ಲಾರಿಗಳು ಬಂದರಿನಿಂದ ಮೀನು ಪೇರಿಸಿಕೊಂಡು ಸಂಚರಿಸುತ್ತಿವೆ. ಈ ವೇಳೆ ಲಾರಿಯಿಂದ ಐಸ್ ಕರಗಿದ ತ್ಯಾಜ್ಯ ನೀರು ರಸ್ತೆಯುದ್ಧಕ್ಕೂ ಚೆಲ್ಲುತ್ತಾ ಸಾಗುತ್ತದೆ. ಇದರಿಂದ ಪರಿಸರ ಪೂರ್ತಿ ದುರ್ನಾತ ಬೀರುತ್ತಿದೆ ಎಂದು ನಾಗರಿಕರೊಬ್ಬರು ದೂರಿದರು.

ಪಾಂಡೇಶ್ವರದಿಂದ ಕರೆ ಮಾಡಿದ ನಾಗರಿಕರೊಬ್ಬರು ಕೂಡ ಇದೇ ರೀತಿ ಅಹವಾಲು ಹೇಳಿದ್ದು, ಮೀನು ಲಾರಿಗಳ ತ್ಯಾಜ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಕಮಿಷನರ್ ಸಂದೀಪ್ ಪಾಟೀಲ್, ಮೀನು ಲಾರಿಗಳಿಂದ ತ್ಯಾಜ್ಯ ಸೋರಿಕೆಯಾಗಿ ಮಾಲಿನ್ಯಕ್ಕೆ ಕಾರಣವಾಗುವ ಆರೋಪ ಹಲವು ಸಮಯದಿಂದ ಕೇಳಿಬರುತ್ತಿದೆ. ಈ ಬಗ್ಗೆ ಕಟ್ಟುನಿಟ್ಟು ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಪಾಂಡೇಶ್ವರದಲ್ಲಿರುವ ನನ್ನ ನಿವಾಸ ಬಳಿಯೂ ಇದೇ ಮಾಲಿನ್ಯ ಸಮಸ್ಯೆ ಕಂಡುಬಂದಿದೆ. ಆದ್ದರಿಂದ ಸೋಮವಾರ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಮೀನು ಸಾಗಾಟ ಲಾರಿ ಮಾಲೀಕರ ಸಭೆ ಯನ್ನು ನಡೆಸಲಾಗುವುದು. ಅಲ್ಲಿ ಮೀನು ಲಾರಿಯ ತ್ಯಾಜ್ಯ ಸೋರಿಕೆ ತಡೆಗೆ ಸೂಕ್ತ ಸೂಚನೆ ನೀಡಲಾಗುವುದು ಎಂದರು.

ಕಮಿಷನರೇಟ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್ ಅವಸ್ಥೆ ಹಾಗೂ ಅಳವಡಿಕೆ ಕುರಿತು ಹಲವು ದೂರುಗಳನ್ನು ಪೊಲೀಸ್ ಆಯುಕ್ತರಿಗೆ ತಿಳಿಸಲಾ ಯಿತು. ಮಂಗಳಾದೇವಿಯಿಂದ ಪಾಂಡೇಶ್ವರ ಮಾರ್ಗದಲ್ಲಿ ರಸೆತಿ ವಿಭಾಜಕವನ್ನು ಅಲ್ಲಲ್ಲಿ ಘಾಸಿಗೊಳಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗಿದೆ. ರಸ್ತೆಬದಿ,ತಡೆಗೋಡೆಯಾಗಿ ಬ್ಯಾರಿಕೇಡ್‌ಗಳನ್ನು ಬಳಸಲಾಗಿದೆ ಎಂದು ನಾಗರಿಕರೊಬ್ಬರು ದೂರಿದರು.

ಮುಲ್ಕಿಯ ಬಪ್ಪನಾಡು ದೇವಸ್ಥಾನ ಬಳಿ ಹೆದ್ದಾರಿ ತಿರುವಿನಲ್ಲಿ ಬ್ಯಾರಿಕೇಡ್ ಹಾಕಿರುವುದು ಅವೈಜ್ಞಾನಿಕವಾಗಿದೆ. ಜಾತ್ರೆ ವೇಳೆ ಸಂಚಾರ ನಿಯಂತ್ರಣಕ್ಕೆ ಹಾಕಿದ ಬ್ಯಾರಿಕೇಡ್‌ಗಳನ್ನು ಇನ್ನೂ ತೆರವುಗೊಳಿಸಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸ್ಥಳಿೀಯ ನಾಗರಿಕರು ದೂರು ನೀಡಿದರು.
ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಹೇಳಿದರು.

ಈ ಬಾರಿಯ ಫೋನ್-ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗಿಂತ ಜಾಸ್ತಿ ಅಹವಾಲು ನಗರ ಸಾರಿಗೆ ಸಮಸ್ಯೆಗೆ ಸಂಬಂಧಿಸಿದ್ದಾಗಿತ್ತು. ನಗರದಲ್ಲಿ ಸಂಚರಿಸುವ ಕೆಲವು ಖಾಸಗಿ ಬಸ್‌ಗಳಲ್ಲಿ ಈಗಲೂ ಟಿಕೆಟ್ ನೀಡುತ್ತಿಲ್ಲ. ಹರೇಕಳದಿಂದ ಕರೆ ಮಾಡಿದವರೊಬ್ಬರು ನಮಗೆ ಖಾಸಗಿ ಬಸ್ಸುಗಳ ಸಂಪರ್ಕ ಸಮರ್ಪಕವಾಗಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ಕಲಿಸಿ ಎಂದು ಒತ್ತಾಯಿಸಿದರು.

ಸುಲ್ತಾನ್‌ ಬತ್ತೇರಿಯಿಂದ ಕರೆ ಮಾಡಿದ ಮಹಿಳೆಯೊಬ್ಬರು, ಬೋಳೂರಿಗೆ ಸರಿಯಾಗಿ ಬಸ್ ಸೌಲಭ್ಯ ಇಲ್ಲ. ಆಟೋರಿಕ್ಷಾ, ಟ್ಯಾಕ್ಸಿ ಸೌಲಭ್ಯವೂ ಇಲ್ಲ. ಹಾಗಾಗಿ ಇಲ್ಲಿ ಮಹಿಳೆಯರು ಹಾಗೂ ಮಕ್ಕಳು ಸಂಚರಿಸಲು ಪರದಾಡುವಂತಾಗಿದೆ. ಇಲ್ಲಿಗೆ ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಕೆಎಸ್‌ಆರ್‌ಟಿಸಿಗೆ ಬರೆದರೂ ಪ್ರಯೋಜನವಾಗಿಲ್ಲ ಎಂದು ಅಹವಾಲು ಸಲ್ಲಿಸಿದರು.

ಮಹಿಳೆಯರು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಬಗ್ಗೆ ಕೆಎಸ್‌ಆರ್‌ಟಿಸಿ ಗಮನ ಸೆಳೆಯುವುದಾಗಿ ಕಮಿಷನರ್ ಹೇಳಿದರು.

ಫುಟ್‌ಪಾತ್ ಸಂಚಾರ ಅಡ್ಡಿ

ನಗರದ ಸ್ಟೇಟ್ ಬ್ಯಾಂಕ್ ಹಾಗೂ ಸೆಂಟ್ರಲ್ ಮಾರುಕಟ್ಟೆಯಲ್ಲಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತಿತಿರುವುದರಿಂದ ಪಾದಚಾರಿ ಸಂಚಾರಕ್ಕೆ ಜಾಗ ಇಲ್ಲದಂತಾಗಿದೆ ಎಂದು ನಾಗರಿಕರೊಬ್ಬರು ದೂರಿದರು. ಕಾವೂರಿನಲ್ಲಿ ಫುಟ್‌ಪಾತ್‌ನಲ್ಲಿ ದ್ವಿಚಕ್ರ ವಾಹನ ಪಾರ್ಕ್ ಮಾಡುವುದರಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರು ದೂರಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡುವುದು ಅಗತ್ಯ. ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳ ಜತೆ ಮಾತುಕತೆ ನೆಸುವುದಾಗಿ ಆಯುಕ್ತರು ತಿಳಿಸಿದರು. ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮಿ ಪ್ರಸಾದ್, ಸಂಚಾರಿ ಎಸಿಪಿ ಮಂಜುನಾಥ ಶೆಟ್ಟಿ ಇದ್ದರು.

ಮದ್ಯ ಸೇವಿಸಿದವರ ತಪಾಸಣೆಗೆ ಆಕ್ಷೇಪ!

ಒಂದು ಕಡೆ ಮದ್ಯ ಸೇವನೆಗೆ ಸರ್ಕಾರವೇ ಉತ್ತೇಜನ ನೀಡುತ್ತಿದೆ. ಇನ್ನೊಂದು ಕಡೆ ಮದ್ಯಸೇವಿಸಿದವರ ತಪಾಸಣೆ ನಡೆಸುತ್ತೀರಿ ? ಇದು ಸರಿಯೇ ಎಂದು ನಾಗರಿಕರೊಬ್ಬರು ಪ್ರಶ್ನಿಸಿದಾಗ ಹುಬ್ಬೇರಿಸುವ ಸರದಿ ಪೊಲೀಸ್ ಆಯುಕ್ತರದ್ದಾಗಿತ್ತು.

ಕರೆ ಮಾಡಿದವರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ರಾತ್ರಿ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಮಾತ್ರವೇ ಪೊಲೀಸರು ತಪಾಸಣೆ ನಡೆಸುತ್ತಾರೆ. ಈ ರೀತಿ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಅಪರಾಧ. ಅಂತಹವರನ್ನು ಮಾತ್ರ ತಪಾಸಣೆ ಮಾಡಲಾಗುತ್ತದೆ. ಪಾನಮತ್ತರಾಗಿ ವಾಹನ ಚಲಾಯಿಸುವ ಬದಲು ಬಾಡಿಗೆ ವಾಹನದಲ್ಲಿ ಅಥವಾ ವಾಹನ ಚಲಾಯಿಸಲು ಬೇರೆ ಯಾರನ್ನಾದರೂ ಜತೆಯಲ್ಲಿ ಕರೆದೊಯ್ಯುವುದು ಸರಿಯಾದ ಕ್ರಮ ಎಂದು ಆಯುಕ್ತರು ಹೇಳಿದರು.

ಸಂಚಾರ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ದ್ವಿಚಕ್ರ ವಾಹನ ಚಲಾಯಿಸುವ ಯುವಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಮಾತ್ರವಲ್ಲದೆ, ಪರವಾನಿಗೆ ಇಲ್ಲದೆ ಹದಿಹರೆಯದ ಮಕ್ಕಳು ವಾಹನ ಚಲಾಯಿಸುವ ಸಂದರ್ಭ ಅವರ ಪೋಷಕರನ್ನು ಕರೆಸಿ ಅವರಿಗೆ ತಿಳಿ ಹೇಳುವ ಕೆಲಸ ಮಾಡಲಾಗವುದು ಎಂದು ಆಯುಕ್ತರು ಪ್ರತಿಕ್ರಿಯಿಸಿದರು.

ತಕ್ಷಣ ಸ್ಪಂದಿಸುವ ಮಾನವೀಯ ಹೃದಯದ ಪೊಲೀಸ್ ಆಯುಕ್ತರು!

ಸಾಮಾನ್ಯವಾಗಿ ಪೊಲೀಸರು ಅಥವಾ ಪೊಲೀಸ್ ಅಧಿಕಾರಿಗಳು ಜನಸಾಮಾನ್ಯರಿಂದ ದೂರುಗಳು ಬಂದಾಗ ಸ್ಪಂದಿಸುತ್ತಾರೆ. ಅದು ಅವರ ಕರ್ತವ್ಯ ಕೂಡಾ. ಆದರೆ, ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಕಿರಿಯ ಅಧಿಕಾರಿಗಳ ಮೂಲಕ ದೂರುಗಳನ್ನು ಪರಿಶೀಲಿಸಿ ಕ್ರಮಕ್ಕೆ ಸೂಚಿಸುತ್ತಾರೆ. ಮತ್ತೆ ಕೆಲವು ಅಧಿಕಾರಿಗಳು ತಕ್ಷಣ ಸ್ಥಳದಲ್ಲೇ ದೂರುಗಳಿಗೆ ಸ್ಪಂದನೆ ನೀಡುವುದಲ್ಲದೆ, ಪ್ರತಿಕ್ರಿಯಿಸುವ ಮೂಲಕ ಮಾನವೀಯತೆಯನ್ನು ಪ್ರದರ್ಶಿಸುತ್ತಾರೆ. ಅಂತಹ ಅಧಿಕಾರಿಗಳಲ್ಲಿ ಮಂಗಳೂರು ಪೊಲೀಸ್ ಆಯುಕ್ತರು ಕೂಡಾ ಓರ್ವರು.

ಸಂದೀಪ್ ಪಾಟೀಲ್‌ರವರು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಚೇರಿಯಲ್ಲಿ ಪ್ರತಿ ವಾರ ನಡೆಯುವ ಫೋನ್ ಇನ್ ಕಾರ್ಯಕ್ರಮದಲ್ಲಿ ಬಹುತೇಕವಾಗಿ ಖುದ್ದಾಗಿ ಭಾಗವಹಿಸಿ ಸಾರ್ವಜನಿಕರಿಂದ ನೇರವಾಗಿ ಅಹವಾಲು ಸ್ವೀಕರಿಸುತ್ತಾರೆ. ಸಮಾಧಾನ ಚಿತ್ತದಿಂದ ಎಲ್ಲರ ಮಾತುಗಳನ್ನು ಆಲಿಸುತ್ತಾರೆ ಮತ್ತು ಸಮಾಧಾನದಿಂದಲೇ ಪ್ರತಿಕ್ರಿಯಿಸುತ್ತಾರೆ.

ಇಂದು (ಎ. 26ರಂದು) ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮುಲ್ಕಿಯಿಂದ ಮಹಿಳೆಯೊಬ್ಬರು ಕರೆ ಮಾಡಿದ್ದರು. ಅವರ ಪತಿ ಖಾಸಗಿ ಕಂಪನಿ ಯೊಂದರ ಲೈನ್ ಸೇಲ್ಸ್‌ಮ್ಯಾನ್ ಆಗಿ ದುಡಿದಿದ್ದು, ಏಳು ತಿಂಗಳಿನಿಂದ ವೇತನ ನೀಡದೆ ತೊಂದರೆಯಾಗಿದೆ ಎಂದು ಅವಲತ್ತುಕೊಂಡರು. ಆಯುಕ್ತರು ಅತ್ಯಂತ ಸಮಾಧಾನದಿಂದ ಆಲಿಸಿದರಲ್ಲದೆ, ಆಕೆಯ ಮೊಬೈಲ್ ನಂಬರ್ ಪಡೆದುಕೊಂಡರು. ಮಾತ್ರವಲ್ಲದೆ, ಫೋನ್ ಇನ್ ಕಾರ್ಯಕ್ರಮದ ವೇಳೆಯಲ್ಲೇ ಸಂಬಂಧಪಟ್ಟ ವ್ಯಾಪ್ತಿಯ ಎಸಿಪಿಗೆ ಕರೆ ಮಾಡಿ, ‘‘ನಾನು ನಿಮ್ಮ ಮೊಬೈಲ್‌ಗೆ ಕರೆ ಮಾಡಿ ದೂರು ನೀಡಿದ ಮಹಿಳೆಯೊಬ್ಬರ ನಂಬರ್ ಕಳುಹಿಸಿದ್ದೇನೆ. ಅವರ ಪತಿಗೆ ಕಳೆದ ಏಳು ತಿಂಗಳಿನಿಂದ ಕೆಲಸ ಮಾಡಿದ ವೇತನ ಸಿಕ್ಕಿಲ್ಲ. ಆ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಿ’’ ಎಂದು ಹೇಳುವ ಮೂಲಕ ತಮ್ಮ ಕರ್ತವ್ಯ ಮೆರೆದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X