ಪ್ರಧಾನಿ ಮೋದಿ ರ‍್ಯಾಲಿಯಲ್ಲಿ ಅನಂತ್ ಅಂಬಾನಿ

ಮುಂಬೈ,ಎ.26: ಕಳೆದ ವಾರ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಿಲಿಂದ್ ದೇವರಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಅವರು ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಹಿರಂಗ ಸಭೆಯಲ್ಲಿ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದು ಹಲವರು ಹುಬ್ಬೇರಿಸುವಂತೆ ಮಾಡಿತ್ತು.
‘ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಕೇಳಲು ಮತ್ತು ದೇಶವನ್ನು ಬೆಂಬಲಿಸಲು ನಾನಿಲ್ಲಿಗೆ ಬಂದಿದ್ದೇನೆ’ ಎಂದು ಅನಂತ ಸುದ್ದಿಗಾರರಿಗೆ ತಿಳಿಸಿದರು.
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತನ್ನ ಕಿರಿಯ ಸೋದರ ಅನಿಲ ಅಂಬಾನಿ ವಿರುದ್ಧ ಎಡೆಬಿಡದೆ ದಾಳಿ ನಡೆಸುತ್ತಿದ್ದರೂ ಮುಕೇಶ್ ಆ ಪಕ್ಷದ ಅಭ್ಯರ್ಥಿ ದೇವರಾಗೆ ಬೆಂಬಲ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಅವರ ಪುತ್ರ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಇನ್ನೊಂದು ಅಚ್ಚರಿಯನ್ನು ಮೂಡಿಸಿದ್ದಾರೆ.
Next Story





