ಬಂಡೀಪುರ ಉದ್ಯಾನವನ: ಕಾದಾಟದಿಂದ ಗಂಡಾನೆ ಸಾವು

ಚಾಮರಾಜನಗರ, ಎ.27: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾದಾಟದಲ್ಲಿ ಗಂಡಾನೆಯೊಂದು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಚಮ್ಮನಹಳ್ಳ ಪ್ರದೇಶದಲ್ಲಿ ಗಸ್ತು ಸಿಬ್ಬಂದಿಗೆ ಎ.20ರಂದು ಸುಮಾರು 40 ವರ್ಷ ಪ್ರಾಯದ ಗಂಡಾನೆಯ ಕಳೇಬರ ಪತ್ತೆಯಾಗಿದೆ.
ಕೂಡಲೇ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ಸುಟ್ಟು ಹಾಕಿದ್ದಾರೆ. ಎರಡು ಮದಗಜಗಳ ನಡುವೆ ನಡೆದ ಕಾದಾಟದಲ್ಲಿ ಹೊಟ್ಟೆ ಹಾಗೂ ಇತರೆಡೆ ತೀವ್ರವಾಗಿ ಗಾಯಗೊಂಡು ಗಂಡಾನೆ ಸಾವಿಗೀಡಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Next Story





