ಮೇ 1ರಿಂದ ಶ್ರೀನಿವಾಸ ಆಸ್ಪತ್ರೆಯಲ್ಲಿ ವಿಶ್ವ ಅಸ್ತಮಾ ಸಪ್ತಾಹ
ಮಂಗಳೂರು, ಎ.27:ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅ್ಯಂಡ್ ರಿಸರ್ಚ್ ಸೆಂಟರ್ ಆಶ್ರಯದಲ್ಲಿ ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ಶ್ರೀನಿವಾಸ ವೈದ್ಯಕೀಯ ಕಾಲೇಜು ಆಸ್ಪತ್ರೆ ಕ್ಯಾಂಪಸ್‌ನಲ್ಲಿ ಮೇ 2ರಿಂದ 8ರ ತನಕ (ರವಿವಾರ ಹೊರತುಪಡಿಸಿ) ಅಸ್ತಮಾ ಸಪ್ತಾಹ ನಡೆಯಲಿದೆ. ಅದರ ಅಂಗವಾಗಿ ಮೇ 1ರಂದು ಬೆಳಗ್ಗೆ 9:30ರಿಂದ 12:30ರ ತನಕ ತಡಂಬೈಲ್ ಕುಲಾಲ ಭವನದಲ್ಲಿ ಅಸ್ತಮಾ ಶಿಬಿರ ನಡೆಯಲಿದೆ.
ವಿಶ್ವ ಆಸ್ತಮಾ ದಿನದ ಅಂಗವಾಗಿ ಈ ಶಿಬಿರ ನಡೆಯುತ್ತಿದ್ದು, ಮೇ 7ರಂದು ಜಾಗತಿಕವಾಗಿ ಅಸ್ತಮಾ ದಿನವನ್ನು ಆಚರಿಸಲಾಗುತ್ತಿದೆ. ಶಿಬಿರದ ಅವಧಿಯಲ್ಲಿ ಶ್ವಾಸಕೋಶದ ಪರೀಕ್ಷೆಯ ಜತೆಗೆ ಶ್ವಾಸಕೋಶದ ನಿರ್ವಹಣೆಯನ್ನು ಸ್ಪಿರೋಮೆಟ್ರಿಯಂತಹ ತಪಾಸಣೆ ಮೂಲಕ ನಡೆಸಲಾಗುವುದು. ಅಲರ್ಜಿ ಪರೀಕ್ಷೆ, ಎದೆಯ ರೇಡಿಯೋಗ್ರಾಫ್ ಮತ್ತು ಸಿಬಿಸಿಯನ್ನು ಕಾಲೇಜಿನ ಟಿಬಿ ಮತ್ತು ಚೆಸ್ಟ್ ವಿಭಾಗದ ಆಶ್ರಯದಲ್ಲಿ ನಡೆಸಲಾಗುವುದು. ಚಿಕಿತ್ಸೆಯ ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸಲಾಗುವುದು. ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ಭೇಟಿ ಮಾಡುವ ಮೂಲಕ ಸಪ್ತಾಹದ ಸೌಲಭ್ಯ ಪಡೆಯಬಹದು ಎಂದು ಪ್ರಕಟನೆ ತಿಳಿಸಿದೆ.





