ಶಿರ್ಲಾಲು ಸರಕಾರಿ ಪ.ಪೂ.ಕಾಲೇಜಿಗೆ ಶೇ.100 ಫಲಿತಾಂಶ
ಹೆಬ್ರಿ, ಎ.27: ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳಲ್ಲಿ 6 ಮಂದಿ ವಿಶಿಷ್ಟ ಶ್ರೇಣಿ, 20 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ರಂಜಿತ್ ಪೂಜಾರಿ 559, ರಾಜೇಶ್ ನಾಯಕ್ 516, ನಿವೇದಿತಾ ಶೆಟ್ಟಿ 513 ಅಂಕದೊಂದಿಗೆ ಕಲಾ ವಿಭಾಗದಲ್ಲಿ ವಿಶಿಷ್ಟಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರಂಜನಿ 553, ದೀಪಿಕಾ 528, ತೇಜಸ್ವಿ 524 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
Next Story





