ಮಾದಾಪುರ: ಮರ ಬಿದ್ದು ಕಾರ್ಮಿಕ ಸಾವು

ಮಡಿಕೇರಿ ,ಎ.27: ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಕಾಫಿ ಎಸ್ಟೇಟಿನಲ್ಲಿ ಮರವೊಂದು ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಸೋಮಪ್ಪಶೆಟ್ಟಿಯವರ ಮಗ ಮೋಹನ್ (50) ಸಿಲ್ವರ್ ಮರ ಅಳತೆ ಮಾಡುವ ಸಂದರ್ಭ ಮರ ಬಿದ್ದು ಮೃತಪಟ್ಟಿದ್ದಾರೆ. ಮೃತರು ಸಮೀಪದ ಚೌಡ್ಲು ಗ್ರಾಮದ ಬೀರೆಬೆಟ್ಟ ನಿವಾಸಿಯಾಗಿದ್ದು, ಪತ್ನಿ, ಇಬ್ಬರು ಗಂಡು ಹಾಗೂ ಒಬ್ಬಳು ಮಗಳನ್ನು ಅಗಲಿದ್ದಾರೆ.
ಮಾದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಸ್ಥಳಕ್ಕೆ ಠಾಣಾಧಿಕಾರಿ ಶಿವಶಂಕರ್, ಪೇದೆ ಶಿವಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು.
Next Story





