'ನಂಬಿಗರ ಅಂಬಿಗ' ನಾಟಕ ಪ್ರದರ್ಶನ

ಮಂಗಳೂರು, ಎ.27:ಮಂಗಳೂರು ವಿಶ್ವವಿದ್ಯಾಲಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಂಡ ಜಗನ್ ಪವಾರ್ ನಿರ್ದೇಶನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಂದ 'ನಂಬಿಗರ ಅಂಬಿಗ 'ನಾಟಕ ಇಂದು ಪ್ರದರ್ಶನಗೊಂಡಿತು.
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಅಂಬಿಗರ ಚೌಡಯ್ಯ ನ ವಚನಗಳನ್ನು ಆಧರಿಸಿದ ಕಥೆಯನ್ನು ಬಳಸಿಕೊಂಡು ನಂಬಿಗರ ಅಂಬಿಗ ನಾಟಕ ರಚನೆ ಮಾಡಲಾಗಿದೆ ಜಗನ್ ಪವರ್ ನಾಟಕ ನಿರ್ದೇಶಿಸಿದ್ದಾರೆ ಎಂದು ಪೀಠದ ಸಂಯೋಜಕ ಡಾ.ನಾಗಪ್ಪ ಗೌಡ ಉದ್ಘಾಟನಾ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲ ಯದ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ವಹಿಸಿದ್ದರು.
ನಾಟಕ ನಿರ್ದೇಶಕ ಜಗನ್ ಪವಾರ್ , ವಿಶ್ರಾಂತ ಪ್ರಾಧ್ಯಾಪಕ ಡಾ.ನರಸಿಂಹ ಮೂರ್ತಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಚನಕಾರ ಅಂಬಿಗರ ಚೌಡಯ್ಯ ನಿಷ್ಠುರ ವಚನಕಾರ ನಾಗಿ ಸಮಾಜದ ಓರೆಕೋರೆಗಳನ್ನು ಪ್ರಶ್ನಿಸಿದ ಪ್ರಮುಖ ವಚನಕಾರ ಆತನ ಬಗ್ಗೆ ಜಾಗ್ರತಿ ಮೂಡಿಸುವ ದ್ರಷ್ಠಿಯಿಂದ ನಾಟಕ ಪ್ರದರ್ಶನ ಮುಖ್ಯ ವಾಗುತ್ತದೆ ಎಂದು ತಿಳಿಸಿದ್ದಾರೆ. ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ.ನಾಗಪ್ಪಗೌಡ ಮೊದಲಾದ ವರು ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ ಇರ್ವತ್ತೂರು ಸ್ವಾಗತಿಸಿದರು. ಅರ್ಪಿತ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ವಂದಿಸಿದರು.







