ಮಲ್ಪೆ: ಬೋಟಿನಿಂದ ಬಿದ್ದು ಮೀನುಗಾರ ನಾಪತ್ತೆ
ಮಲ್ಪೆ, ಎ.27: ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾಗಿರುವ ಘಟನೆ ಎ.25ರಂದು ರಾತ್ರಿ ವೇಳೆ ನಡೆದಿದೆ.
ನಾಪತ್ತೆಯಾದವರನ್ನು ತಮಿಳುನಾಡಿನ ಶೇಖ್ ದಾವೂದ್(48) ಎಂದು ಗುರುತಿಸಲಾಗಿದೆ. ಇವರು ಇತರೆ ಮೀನುಗಾರರೊಂದಿಗೆ ಎ.25ರಂದು ಬೆಳಗ್ಗೆ 10:30ಕ್ಕೆ ಮಲ್ಪೆಯಿಂದ ಶ್ರೀಸನ್ನಿಧಿ ಬೋಟಿನಲ್ಲಿ ತೆರಳಿದ್ದು, ರಾತ್ರಿ ಎಲ್ಲರೂ ಬೋಟಿನಲ್ಲಿ ಮಲಗಿದ್ದರು. ಎ.26ರಂದು ಬೆಳಗ್ಗೆ 6ಗಂಟೆಗೆ ಮೀನುಗಾರಿಕೆಗೆ ಬಲೆ ಹಾಕಲು ಎದ್ದಾಗ ಶೇಖ್ ದಾವೂದ್ ನಾಪತ್ತೆಯಾಗಿದ್ದರು.
ಇವರು ಯಾವುದೋ ಕಾರಣದಿಂದ ಬೋಟಿನ ಬದಿಯಲ್ಲಿ ನಿಂತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





