ಶ್ರೀಲಂಕಾ ತೊರೆಯಲು ರಾಜತಾಂತ್ರಿಕ ಕುಟುಂಬಗಳಿಗೆ ಅಮೆರಿಕ ಆದೇಶ
ದಾಳಿಗಳಿಗೆ ಇನ್ನೂ ಸಂಚುಗಳನ್ನು ರೂಪಿಸುತ್ತಿರುವ ಉಗ್ರ ಗುಂಪುಗಳು
ವಾಶಿಂಗ್ಟನ್, ಎ. 27: ಶ್ರೀಲಂಕಾದಲ್ಲಿರುವ ಅಮೆರಿಕನ್ ರಾಜತಾಂತ್ರಿಕರ ಕುಟುಂಬಗಳ ಎಲ್ಲ ಶಾಲೆಗೆ ಹೋಗುವ-ಪ್ರಾಯದ ಸದಸ್ಯರು ಅಮೆರಿಕಕ್ಕೆ ವಾಪಸಾಗುವಂತೆ ಅಮೆರಿಕ ಶುಕ್ರವಾರ ಆದೇಶ ನೀಡಿದೆ. ಭಯೋತ್ಪಾದಕ ಗುಂಪುಗಳು ಸಂಭಾವ್ಯ ದಾಳಿಗಳಿಗೆ ಇನ್ನೂ ಸಂಚುಗಳನ್ನು ರೂಪಿಸುತ್ತಿವೆ ಎಂದು ಅದು ಹೇಳಿದೆ ಹಾಗೂ ಶ್ರೀಲಂಕಾಗೆ ಪ್ರಯಾಣಿಸುವುದನ್ನು ಮರುಪರಿಶೀಲಿಸುವಂತೆ ಅಮೆರಿಕನ್ನರಿಗೆ ಕರೆ ನೀಡಿದೆ.
ಶ್ರೀಲಂಕಾಗೆ ಪ್ರಯಾಣ ಎಚ್ಚರಿಕೆಯನ್ನು ಅಮೆರಿಕವು ‘3ನೇ ಮಟ್ಟ’ಕ್ಕೆ ಏರಿಸಿದೆ. ಶ್ರೀಲಂಕಾದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಯಲ್ಲಿ ತುರ್ತು ಸೇವೆಗಳನ್ನು ಹೊಂದಿರದ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ‘ಸ್ವಯಂಪ್ರೇರಿತ’ವಾಗಿ ವಾಪಸಾಗಲು ಅಮೆರಿಕದ ವಿದೇಶಾಂಗ ಇಲಾಖೆಯು ಅನುಮತಿ ನೀಡಿದೆ.
ಅಮೆರಿಕದ ಕೊಲಂಬೊದಲ್ಲಿರುವ ರಾಯಭಾರ ಕಚೇರಿಯು ಮಾಲ್ದೀವ್ಸ್ನ ಹೆಚ್ಚುವರಿ ಹೊಣೆಯನ್ನು ಹೊಂದಿದೆ.
Next Story