ಶಸ್ತ್ರಾಸ್ತ್ರ ಒಪ್ಪಂದದಿಂದ ಅಮೆರಿಕ ಹೊರಕ್ಕೆ: ಟ್ರಂಪ್

ಇಂಡಿಯಾನಪೊಲಿಸ್ (ಅಮೆರಿಕ), ಎ. 27: 2013ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದ ಅಂತರ್‌ರಾಷ್ಟ್ರೀಯ ಶಸ್ತ್ರಾಸ್ತ್ರ ಒಪ್ಪಂದವೊಂದರಿಂದ ಅಮೆರಿಕ ಹೊರಗೆ ಬರುವುದು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ನ್ಯಾಶನಲ್ ರೈಫಲ್ ಅಸೋಸಿಯೇಶನ್ (ಎನ್‌ಆರ್‌ಎ)ನ ವಾರ್ಷಿಕ ಸಭೆಯಲ್ಲಿ ಘೋಷಿಸಿದ್ದಾರೆ.
ಈ ಒಪ್ಪಂದವನ್ನು ಎನ್‌ಆರ್‌ಎ ಮತ್ತು ಇತರ ಸಂಪ್ರದಾಯವಾದಿ ಗುಂಪುಗಳು ವಿರೋಧಿಸುತ್ತಿವೆ.
ಶಸ್ತ್ರಾಸ್ತ್ರಗಳು ಮಾನವಹಕ್ಕುಗಳ ಉಲ್ಲಂಘಕರಿಗೆ ಸಿಗುವುದನ್ನು ಈ ಒಪ್ಪಂದ ನಿರ್ಬಂಧಿಸುತ್ತದೆ ಹಾಗೂ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ 70 ಬಿಲಿಯ ಡಾಲರ್ (ಸುಮಾರು 4.89 ಲಕ್ಷ ಕೋಟಿ ರೂಪಾಯಿ) ವ್ಯವಹಾರವನ್ನು ನಿಯಂತ್ರಿಸುತ್ತದೆ.
ಈ ಒಪ್ಪಂದವನ್ನು ಎನ್‌ಆರ್‌ಎ ವಿರೋಧಿಸುತ್ತಲೇ ಬಂದಿದೆ. ಒಪ್ಪಂದವು ದೇಶದ ಬಂದೂಕು ಹಕ್ಕುಗಳನ್ನು ನಿರಾಕರಿಸುತ್ತದೆ ಎಂದು ಅದು ವಾದಿಸುತ್ತಿದೆ. ಆದರೆ, ಒಬಾಮ ಆಡಳಿತವು ಈ ವಾದವನ್ನು ತಿರಸ್ಕರಿಸಿತ್ತು.
Next Story





