ನೇಮಕದ ಮರುಪರಿಶೀಲನೆ ನಡೆಸಲಿರುವ ಒಂಬುಡ್ಸ್‌ಮನ್
ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ರಮಣ್

ಹೊಸದಿಲ್ಲಿ, ಎ.27: ವಿವಾದಾತ್ಮಕ ಸ್ಥಿತಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿರುವ ಡಬ್ಲುವಿ ರಮಣ್ ಅವರ ನೇಮಕವನ್ನು ಬಿಸಿಸಿಐನ ಒಂಬುಡ್ಸ್ ಮನ್ ಹಾಗೂ ಎಥಿಕ್ಸ್ ಅಧಿಕಾರಿ ಡಿ.ಕೆ.ಜೈನ್‌ರಿಂದ ಮರುಪರಿಶೀಲನೆೆಗೊಳಪಡಿಸಲು ಶನಿವಾರ ಬಿಸಿಸಿಐನ ಆಡಳಿತಗಾರರ ಸಮಿತಿಯ (ಸಿಒಎ)ಸಭೆ ನಿರ್ಧರಿಸಿದೆ.
ಭಾರತ ತಂಡದ ಮಾಜಿ ಆರಂಭಿಕ ಆಟಗಾರ ರಮಣ್ ಡಿಸೆಂಬರ್‌ನಲ್ಲಿ ಮಾಜಿ ನಾಯಕ ಕಪಿಲ್‌ದೇವ್, ಅಂಶುಮನ್ ಗಾಯಕ್ವಾಡ್ ಹಾಗೂ ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಆ್ಯಡ್ ಹಾಕ್ ಸಮಿತಿ ನಡೆಸಿದ್ದ ಆಯ್ಕೆ ಪ್ರಕ್ರಿಯೆ ಬಳಿಕ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಆದಾಗ್ಯೂ ಆಗಿನ ಇಬ್ಬರು ಸದಸ್ಯರಾದ ಅಧ್ಯಕ್ಷ ವಿನೋದ್ ರಾಯ್ ಹಾಗೂ ಡಯಾನಾ ಎಡುಲ್ಜಿ ಒಳಗೊಂಡ ಸಿಒಎ, ಕೋಚ್ ಆಯ್ಕೆ ಪ್ರಕ್ರಿಯೆ ಬಳಿಕ ಸಂಪೂರ್ಣ ವಿಭಜನೆಯಾಗಿತ್ತು. ರಾಯ್ ಈ ಪ್ರಕ್ರಿಯೆನ್ನು ಅಂಗೀಕರಿಸಿದ್ದರೆ, ಎಡುಲ್ಜಿ ‘‘ಸಂಪೂರ್ಣ ಪ್ರಕ್ರಿಯೆ ನಕಲಿ ಹಾಗೂ ಕಾನೂನು ಬಾಹಿರ’’ ಎಂದು ಹೇಳಿದ್ದರು. ನಾಲ್ಕು ತಿಂಗಳ ಬಳಿಕ ಈ ವಿಷಯವನ್ನು ಒಂಬುಡ್ಸಮನ್ ತನಿಖೆಗೆ ಕಳುಹಿಸಲಾಗಿದೆ.
Next Story





