ಸೆಮಿ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದ ಒಸಾಕಾ
ಸ್ಟಟ್‌ಗರ್ಟ್ ಟೆನಿಸ್ ಟೂರ್ನಿ
ಸ್ಟಟ್‌ಗರ್ಟ್(ಜರ್ಮನಿ), ಎ.27: ಹೊಟ್ಟೆನೋವಿನಿಂದ ಬಳಲುತ್ತಿರುವ ವಿಶ್ವದ ನಂ.1 ಆಟಗಾರ್ತಿ ನಯೊಮಿ ಒಸಾಕಾ ಸ್ಟಟ್‌ಗರ್ಟ್ ಡಬ್ಲುಟಿಎ ಟೂರ್ನಮೆಂಟ್‌ನ ಸೆಮಿ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು.
21ರ ಹರೆಯದ ಜಪಾನ್ ಆಟಗಾರ್ತಿ ಒಸಾಕಾ ಶನಿವಾರ ಸಂಜೆ ಅಂತಿಮ-8ರ ಸುತ್ತಿನಲ್ಲಿ ಇಸ್ಟೋನಿಯದ 8ನೇ ಶ್ರೇಯಾಂಕದ ಅನೆಟ್ಟ್ ಕಾಂಟವೆಟ್‌ರನ್ನು ಎದುರಿಸಬೇಕಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಒಸಾಕಾ ಅನಾರೋಗ್ಯದಿಂದ ಬಳಲುತ್ತಿದ್ದು ಆಡಲು ಅಸಮರ್ಥರಾಗಿದ್ದಾರೆ ಎಂದು ಘೋಷಿಸಲಾಯಿತು.
Next Story





